ತಮ್ಮ ಚಿತ್ರ ಹಿಟ್ ಆಗುತ್ತಿದ್ದಂತೆ ಎರಡನೇ ಭಾಗಕ್ಕೆ ಸಿದ್ದರಾದ ನಟ ಪ್ರೇಮ್ ಅವರು

ಸ್ಯಾಂಡಲ್ ವುಡ್ ಲವ್ಲೀ ಸ್ಟಾರ್ ಪ್ರೇಮ್ ಅಭಿನಯದ ಪ್ರೇಮಂ ಪೂಜ್ಯಂ ಸಿನಿಮಾ ತಂಡದಿಂದ ಪ್ರೇಮಿಗಳ ದಿನದಂದು ಕನ್ನಡ ಸಿನಿ ಪ್ರೇಕ್ಷಕರಿಗೆ ಗುಡ್ ನ್ಯೂಸ್ ವೊಂದನ್ನ ನೀಡಲಿದ್ದಾರೆ. ಹೌದು ಪ್ರೀತಿ- ಪ್ರೇಮ ಸಂಬಂಧಗಳಲ್ಲಿ ಪೂಜ್ಯ ಭಾವನೆ ಕಾಣಬೇಕು ಎಂಬ ಕಥಾಹಂದರ ಹೊಂದಿರುವ ಪ್ರೇಮಂ ಪೂಜ್ಯಂ ಸಿನಿಮಾ ಇದೀಗ ಯಶಸ್ವಿಯಾಗಿ ಐವತ್ತು ದಿನಗಳ ಪೂರೈಸುವ ನಿಟ್ಟಿನಲ್ಲಿ ಪ್ರದರ್ಶನವಾಗುತ್ತಿದೆ. ಈ ಪ್ರೇಮಂ ಪೂಜ್ಯಂ ಸಿನಿಮಾ ಲವ್ಲೀ ಸ್ಟಾರ್ ಪ್ರೇಮ್ ಅವರ ಇಪ್ಪತ್ತೈದನೇ ಚಿತ್ರವಾದ ಕಾರಣ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಕೂಡ ಇತ್ತು. ಅದಕ್ಕೆ ತಕ್ಕಂತೆ ಸಿನಿಮಾ ಕೂಡ ಜನ ಮೆಚ್ಚುಗೆ ಪಡೆದುಕೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಇತ್ತೀಚೆಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳ ಥಿಯೇಟರ್ ಗಳಲ್ಲಿ ಇಂದಿಗೂ ಕೂಡ ಪ್ರೇ‌ಮಂ ಪೂಜ್ಯಂ ಸಿನಿಮಾ ನೋಡಲು ಕಾಲೇಜು ಯುವಕ-ಯುವತಿಯರು ಗೆಳೆಯರೊಟ್ಟಿಗೆ ಬರುತ್ತಿದ್ದಾರೆ. ವಿಶೇಷ ಅಂದರೆ ಪ್ರೇಮಂ ಪೂಜ್ಯಂ ಸಿನಿಮಾ ನೋಡಲು ಒಂದಷ್ಟು ಥಿಯೇಟರ್ ಗಳಲ್ಲಿ ಕಾಲೇಜ್ ಹುಡುಗರ ದಂಡೇ ಕಾಣಿಸುತ್ತಿದ್ದಾರೆ. ನಟ ಪ್ರೇಮ್ ಅವರು ಇತ್ತೀಚೆಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕಾಲೇಜ್ ಹುಡುಗರು ತಮ್ಮ ಗೆಳೆಯರೊಟ್ಟಿಗೆ ಬಂದು ತಮ್ಮ ಪ್ರೇಮಂ ಪೂಜ್ಯಂ ಸಿನಿಮಾ ನೋಡುತ್ತಿರುವ, ಚಿತ್ರ ನೋಡಿ ಖುಷಿ ಪಟ್ಟು ಜೈ ಕಾರ ಕೂಗುವ ಒಂದಷ್ಟು ವೀಡಿಯೋಗಳನ್ನು ಕೂಡ ಹಂಚಿಕೊಳ್ಳುತ್ತಿರುತ್ತಾರೆ.

ಪ್ರೇಮಂ ಪೂಜ್ಯಂ ಚಿತ್ರಕ್ಕೆ ಕೆದಂಬಾಡಿ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ತಮ್ಮ ಸ್ನೇಹಿತರೊಟ್ಟಿಗೆ ಬಂಡವಾಳ ಹೂಡಿ ವೃತ್ತಿಯಲ್ಲಿ ವೈದ್ಯರಾಗಿರುವ ರಾಘವೇಂದ್ರ ಅವರು ಆಕ್ಷನ್ ಕಟ್ ಹೇಳುವುದರ ಜೊತೆಗೆ ಸಾಹಿತ್ಯ ಮತ್ತು ರಾಗ ಸಂಯೋಜನೆ ಕೂಡ ಮಾಡಿದ್ದರು. ಇತ್ತೀಚೆಗೆ ತಾನೇ ಪ್ರೇಮಂ ಪೂಜ್ಯಂ ಚಿತ್ರ ಹತ್ತು ಕೋಟಿ ಕ್ಲಬ್ ಸೇರುವ ಮೂಲಕ ಇಡೀ ಸಿನಿಮಾ ತಂಡದ ಸಂಭ್ರಮಾಚರಣೆ ಮಾಡಿತ್ತು. ಅದಲ್ಲದೆ ಪ್ರೇಮಂ ಪೂಜ್ಯಂ ಚಿತ್ರದ ರಿಮೇಕ್ ಹಕ್ಕಿಗಾಗಿ ತೆಲುಗು ತಮಿಳು ನಿರ್ಮಾಪಕರಿಂದ ಬೇಡಿಕೆಯ ಜೊತೆಗೆ ಓಟಿಟಿ ವೇದಿಕೆಯಲ್ಲಿಯೂ ಕೂಡ ಉತ್ತಮ ಮೊತ್ತಕ್ಕೆ ಕೇಳುತ್ತಿದ್ದಾರಂತೆ. ಆದರೆ ನಿರ್ದೇಶಕರು ಪ್ರೇಮಂ ಪೂಜ್ಯಂ ಸಿನಿಮಾ ನೂರು ದಿನಗಳು ಪೂರೈಸಿದ ನಂತರ ಈ ಬಗ್ಗೆ ಯೋಚಿಸುವುದಾಗಿ ನಿರ್ಧರಿಸಿದ್ದಾರೆ.

ಇದೀಗ ಯುವ ಮನಸ್ಸುಗಳನ್ನು ಗೆದ್ದಿರುವ ಪ್ರೇಮಂ ಪೂಜ್ಯಂ ಸಿನಿಮಾವನ್ನು ಮುಂದುವರಿದ ಭಾಗವಾಗಿ ಭಾಗ-2 ಮಾಡಲು ನಿರ್ದೇಶಕರು ಯೋಜನೆ ಮಾಡಿಕೊಂಡಿದ್ದಾರೆ. ಈಗಾಗಲೇ ನಿರ್ದೇಶಕರಾದ ರಾಘವೇಂದ್ರ ಅವರು ಪ್ರೇಮಂ ಪೂಜ್ಯಂ ಸಿನಿಮಾ ಭಾಗ 2 ರ ಚಿತ್ರಕಥೆಯನ್ನು ಕೂಡ ತಯಾರಿ ಮಾಡಿಕೊಂಡಿದ್ದಾರೆ. ಹಾಗಾಗಿ ಇದೇ ಮುಂದಿನ ವರ್ಷ 2022 ರ ಫೆಬ್ರವರಿ 14 ರ ವ್ಯಾಲೆಂಟೆನ್ಸ್ ಡೇ ದಿನದಂದು ಪ್ರೇಮಂ ಪೂಜ್ಯಂ 2 ಚಿತ್ರದ ಚಾಲನೆ ನೀಡಲಿದ್ದೇವೆ ಎಂದು ಚಿತ್ರತಂಡ ತಿಳಿಸಿದೆ. ಈ ಪ್ರೇಮಂ ಪೂಜ್ಯಂ ತಂಡದಲ್ಲಿದ್ದ ಎಲ್ಲಾ ತಾಂತ್ರಿಕ ವರ್ಗ, ತಾರಾಗಣ ಪ್ರೇಮಂ ಪೂಜ್ಯಂ2 ಸಿನಿಮಾದಲ್ಲಿಯೂ ಕೂಡ ಇರಲಿದೆ ಎಂದು ತಿಳಿದು ಬಂದಿದೆ.

%d bloggers like this: