ತಮ್ಮ ಚಿತ್ರಕ್ಕೆ ಕೆಲಸ ಮಾಡಿದ ನೃತ್ಯ ಸಂಯೋಜಕನಿಗೆ ಹೊಸ ಕಾರನ್ನು ಉಡುಗೊರೆಯಾಗಿ ಕೊಟ್ಟ ಸುದೀಪ್ ಅವರು

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ, ಆರಡಿ ಕಟೌಟ್, ಕಿಚ್ಚ ಹೀಗೆ ಅಭಿಮಾನಿಗಳಿಂದ ನಾನಾ ಹೆಸರಿನಿಂದ ಕರೆಸಿಕೊಳ್ಳುವ ನಟ ಕಿಚ್ಚ ಸುದೀಪ್ ಅವರು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಹಿಂದಿ ಭಾಷೆಯ ಸಿನಿಮಾಗಳಲ್ಲಿ ಕೂಡ ನಟಿಸಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ತಮ್ಮ ಕಂಚಿನ ಕಂಠ ಮತ್ತು ತಮ್ಮ ಅಮೋಘ ನಟನೆಯ ಮೂಲಕ ದಕ್ಷಿಣ ಭಾರತ ಚಿತ್ರರಂಗದ ಬೇಡಿಕೆಯ ನಟರಾಗಿ ಮಿಂಚುತ್ತಿದ್ದಾರೆ. ಇನ್ನು ನಟ ಸುದೀಪ್ ಅವರು ತಾವು ಸಿನಿಮಾ ಮಾಡಿದ ಪ್ರತಿಯೊಬ್ಬ ಸ್ಟಾರ್ ನಟರೊಂದಿಗೆ ಕೂಡ ಉತ್ತಮ ಸ್ನೇಹ ಸಂಬಂಧ ಬೆಳೆಸಿಕೊಂಡಿದ್ದಾರೆ. ಆ ಭಾಂಧವ್ಯವನ್ನ ಅದೇ ರೀತಿಯಾಗಿ ಉಳಿಸಿಕೊಂಡಿದ್ದಾರೆ.

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಅವರಿಂದ ಹಿಡಿದ ಟಾಲಿವುಡ್ ಸುಪ್ರಸಿದ್ಧ ನಿರ್ದೇಶಕ ರಾಜಮೌಳಿ, ಕಾಲಿವುಡ್ ಇಳಯ ದಳಪತಿ ಖ್ಯಾತಿಯ ನಟ ವಿಜಯ್ ಅಂತಹ ಸ್ಟಾರ್ ನಟರೊಂದಿಗೆ ಉತ್ತಮ ಗೆಳೆತನ ಹೊಂದಿದ್ದಾರೆ. ನಟ ಕಿಚ್ಚ ಸುದೀಪ್ ಅವರು ಕೇವಲ ನಟರ ಜೊತೆ ಮಾತ್ರ ಸ್ನೇಹ ಸಂಬಂಧ ಮಾಡದೆ ತನ್ನ ಜೊತೆ ಕೆಲಸ ಮಾಡುವ ಸಹ ಕಲಾವಿದರು ಮತ್ತು ತಮ್ಮ ಸಹಾಯಕ ಸಿಬ್ಬಂದಿಗೆ ಕೂಡ ಅದೇ ರೀತಿಯಲ್ಲಿ ಪ್ರೀತಿ ವಿಶ್ವಾಸ ನೀಡಿದ್ದಾರೆ. ಒಮ್ಮೆ ಅವರ ಮನಸ್ಸಿಗೆ ಆ ವ್ಯಕ್ತಿ ಹಿಡಿಸಿದರೆ ಅವರಿಗೆ ಏನಾದ್ರೂ ಒಂದು ಉಡುಗೊರೆಯನ್ನ ನೀಡುತ್ತಾರೆ. ಅದೇ ರೀತಿಯಾಗಿ ನಟ ಕಿಚ್ಚ ಸುದೀಪ್ ಅವರು ಭಾರತೀಯ ಚಿತ್ರರಂಗದ ಸುಪ್ರಸಿದ್ದ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಅವರಿಗೆ ಮಹೇಂದ್ರ ಥಾರ್ ಕಾರ್ ವೊಂದನ್ನು ಉಡುಗೊರೆ ಆಗಿ ನೀಡಿದ್ದಾರೆ.

ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಅವರು ಸುದೀಪ್ ಅವರ ನಟಪೆಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ವಿಕ್ರಾಂತ್ ರೋಣ ಚಿತ್ರದಲ್ಲಿನ ಗಡಂಗ್ ರಕ್ಕಮ್ಮ ಎಂಬ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಈ ಹಾಡಿನ ಕೊರೀಯೋಗ್ರಾಫ್ ಸುದೀಪ್ ಅವರಿಗೆ ಬಹಳ ಅಚ್ಚು ಮೆಚ್ಚಾಗಿದೆ. ಈ ಸಾಂಗ್ ನಲ್ಲಿ ತಮ್ಮ ನೃತ್ಯ ಇಷ್ಟೊಂದು ಚೆಂದವಾಗಿ ಮೂಡಿ ಬರಲು ಕಾರಣರಾದ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಅವರಿಗೆ ಏನಾದರೂ ವಿಶೇಷ ಉಡುಗೊರೆ ನೀಡಬೇಕು ಎಂದು ಮಹೇಂದ್ರ ಥಾರ್ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ. ಇದರಿಂದ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಅವರು ಸುದೀಪ್ ಅವರ ಈ ಉಡುಗೊರೆ ಕಂಡು ಫುಲ್ ಖುಷ್ ಆಗಿದ್ದಾರೆ.

ಈ ಸಂತಸದ ವಿಚಾರವನ್ನ ವಿಕ್ರಾಂತ್ ರೋಣ ಚಿತ್ರದ ನಿರ್ಮಾಪಕ ಕಮ್ ಸುದೀಪ್ ಅವರ ಮ್ಯಾನೇಜರ್ ಆದಂತಹ ಜಾಕ್ ಮಂಜು ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರಂತೆ ಮಹೇಂದ್ರ ಥಾರ್ ಕಾರನ್ನು ಪಡೆದ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಉಡುಗೊರೆ ನೀಡಿದಕ್ಕಾಗಿ ಧನ್ಯವಾದಗಳು ಕಿಚ್ಚ ಸುದೀಪ್ ಮತ್ತು ಕುಟುಂಬಕ್ಕೆ ಎಂದು ತಮ್ಮ ಕೃತಜ್ಞತೆ ಭಾವವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಸಿನಿಮಾ ಇನ್ನು ಕೆಲವೇ ತಿಂಗಳಲ್ಲಿ ವರ್ಲ್ಡ್ ವೈಡ್ ಬೆಳ್ಳಿ ತೆರೆಯ ಮೇಲೆ ರಾರಾಜಿಸಲಿದೆ.

%d bloggers like this: