ತಮ್ಮ ಚಿತ್ರಕ್ಕೆ ಶ್ರಮಪಟ್ಟ ಚಿತ್ರತಂಡದ ಸದಸ್ಯರಿಗೆಲ್ಲಾ ಚಿನ್ನದ ನಾಣ್ಯ ಹಾಗೂ ಹಣ ನೀಡಿದ ಸ್ಟಾರ್ ನಟ

ಸಿನಿಮಾ ರಿಲೀಸ್ ಆಗಿ ಭರ್ಜರಿ ರೆಸ್ಪಾನ್ಸ್ ಪಡೆಯುವುದರ ಜೊತೆಗೆ ನಿರೀಕ್ಷೆಗೂ ಮೀರಿದ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ಧೂಳೀಪಟ ಆದರೂ ಕೂಡ ತಾವಾಯಿತು ತನ್ನ ನಿರ್ಮಾಪಕ ವಿತರಕರ ಸೇಫ್ ನೋಡುವ ನಾಯಕ ನಟರ ಪೈಕಿ ಇಲ್ಲೊಬ್ಬ ನಟ ತನ್ನ ಸಿನಿಮಾ ಬಿಡುಗಡೆಯಾಗುವ ಮುಂಚೆಯೆ ತನ್ನ ಇಡೀ ಸಿನಿಮಾ ತಂಡಕ್ಕೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಹೌದು ಟಾಲಿವುಡ್ ಸ್ಟೈಲೀಶ್ ಸ್ಟಾರ್ ನಟ ಅಲ್ಲು ಅರ್ಜುನ್ ತೆಲುಗು ಚಿತ್ರರಂಗದ ಯಂಗ್ ಅಂಡ್ ಎನರ್ಜಿಟಿಕ್ ಹೀರೋಗಳಲ್ಲಿ ಮೊದಲ ಸಾಲಿನಲ್ಲಿ ನಿಲುತ್ತಾರೆ. ಅವರ ಡ್ಯಾನ್ಸ್, ಫೈಟ್ಸ್, ವಾಕಿಂಗ್ ಸ್ಟೈಲ್, ಡ್ರೆಸ್ಸಿಂಗ್ ಸ್ಟೈಲ್ ಡೈಲಿಗ್ ಡೆಲಿವರಿ ಪ್ರತಿಯೊಂದರಲ್ಲಿಯೂ ತನ್ನದೇಯಾದ ವಿಭಿನ್ನ ಸ್ಟೈಲೀಶ್ ಲುಕ್ ಮೂಲಕ ಯೂಥ್ ಐಕಾನ್ ಸ್ಟಾರ್ ನಟನಾಗಿ ಮಿಂಚುತ್ತಿರುವ ಅಲ್ಲು ಅರ್ಜುನ್ ಅವರೇ ಇದೀಗ ತನ್ನ ಸಿನಿಮಾ ಬಿಡುಗಡೆಗೂ ಮುನ್ನವೇ ತನ್ನ ತಂಡಕ್ಕೆ ಚಿನ್ನದ ನಾಣ್ಯ ಮತ್ತು ಲಕ್ಷ, ಲಕ್ಷ ರೂಗಳನ್ನು ಉಡುಗೊರೆಯಾಗಿ ನೀಡಿ ಸುದ್ದಿಯಾಗಿದ್ದಾರೆ.

ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಪುಷ್ಪ ಸಿನಿಮಾ ಈಗಾಗಲೇ ಲಿರಿಕಲ್ ಸಾಂಗ್ ಮತ್ತು ಟ್ರೇಲರ್ ನಿಂದ ಸಖತ್ ಸನ್ಶೇನಲ್ ಕ್ರಿಯೆಟ್ ಮಾಡಿದೆ. ಯೂಟ್ಯೂಬ್ ನಲ್ಲಿ ಪುಷ್ಪ ಸಿನಿಮಾದ ಹಾಡುಗಳು, ಟ್ರೆಲರ್ ದಾಖಲೆಯ ಮಟ್ಟದಲ್ಲಿ ವೀಕ್ಷಣೆ ಪಡೆದುಕೊಂಡಿದೆ. ಚಿತ್ರದ ನಾಯಕ ನಟ ಅಲ್ಲು ಅರ್ಜುನ್ ಅವರ ಲುಕ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರು ಶ್ರೀ ವಲ್ಲಿ ಪಾತ್ರಧಾರಿಯಾಗಿ ಇದೇ ಮೊದಲ ಬಾರಿಗೆ ಡಿ ಗ್ಲಾಮರಸ್ ಲುಕ್ ನಲ್ಲಿ ಬಹಳ ವಿಭಿನ್ನವಾಗಿ ಕಾಣಿಸಿಕೊಂಡು ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದ್ದಾರೆ. ಹೀಗೆ ಪುಷ್ಪ ಚಿತ್ರ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಾಗಿ ಭಾರತೀಯ ಚಿತ್ರರಂಗದಲ್ಲಿ ಪುಷ್ಪ ಸಿನಿಮಾದ ಹವಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಇದೀಗ ನಟ ಅಲ್ಲು ಅರ್ಜುನ್ ತನ್ನ ನಟನೆಯ ಪುಷ್ಪ ಸಿನಿಮಾ ಇಷ್ಟು ಅದ್ದೂರಿಯಾಗಿ ಅದ್ಭುತವಾಗಿ ಮೂಡಿ ಬರಲು ಶ್ರಮಿಸಿದ ತನ್ನ ಸಿನಿಮಾ ತಂಡದ ಪ್ರತಿಯೊಬ್ಬ ಸದಸ್ಯನಿಗೂ ಹತ್ತು ಲಕ್ಷ ರೂಪಾಯಿ ಹಣ ಮತ್ತು ಚಿನ್ನದ ನಾಣ್ಯವನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲು ಅರ್ಜುನ್ ಅವರ ಈ ಪ್ರೀತಿ, ವಿಶ್ವಾಸ ನಡತೆ ಕಂಡು ಪುಷ್ಪ ಚಿತ್ರದ ಇಡೀ ತಂಡ ಭಾವುಕವಾಗುವುದರ ಜೊತೆಗೆ ಬನ್ನಿ ಅವರ ಈ ಪ್ರೀತಿಗೆ ಮನ ಸೋತಿದ್ದಾರೆ. ಪುಷ್ಪಾ ಚಿತ್ರದ ಭಾಗ2 ಚಿತ್ರೀಕರಣ ನಡೆಯುತ್ತಿದ್ದ ಸೆಟ್ ನಲ್ಲಿ ಎಲ್ಲರನ್ನು ಗೌರವದಿಂದ ಕರೆದು ಈ ವಿಶೇಷ ಉಡುಗೊರೆಯೊಂದನ್ನ ನೀಡಿದ್ದಾರೆ. ಈ ಹಿಂದೆ ಪುಷ್ಪ ಚಿತ್ರದ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರಿಗೆ ರಾಕ್ ಸ್ಟಾರ್ ಎಂಬ ಡಿಜಿಟಲ್ ಬೋರ್ಡ್ ನೀಡಿದ್ದರು.

ಇನ್ನು ಮೈತ್ರಿ ಮೂವಿ ಮೇಕರ್ಸ್ ಬ್ಯಾನರಡಿಯಲ್ಲಿ ನವೀನ್ ಏರ್ನೇನಿ ವೈ ರವಿಶಂಕರ್ ಅವರು ಬರೋಬ್ಬರಿ 250 ಕೋಟಿ ಬಜೆಟ್ ನಲ್ಲಿ ಅದ್ದೂರಿಯಾಗಿ ನಿರ್ಮಿಸಿರುವ ಪುಷ್ಪ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಕನ್ನಡಿಗ ಜನಪ್ರಿಯ ನಟ ಡಾಲಿ ಧನಂಜಯ್, ಮಲೆಯಾಳಂನ ಖ್ಯಾತ ನಟ ಫಹಾದ್ ಫಾಸಿಲ್, ತೆಲುಗಿನ ಜಗಪತಿ ಬಾಬು, ತಮಿಳಿನ ನಟ ಸುನೀಲ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಮಾಡಿದ್ದಾರೆ. ಇದೇ ಡಿಸೆಂಬರ್ ತಿಂಗಳ 17ರಂದು ತೆಲುಗು ಕನ್ನಡ, ತಮಿಳು, ಮಲೆಯಾಳಂ ಮತ್ತು ಹಿಂದಿ ಭಾಷೆ ಸೇರೀದಂತೆ ಪಂಚ ಭಾಷೆಗಳಲ್ಲಿ ಪುಷ್ಪ ಸಿನಿಮಾ ಬೆಳ್ಳಿತೆರೆಯಲ್ಲಿ ರಾರಾಜಿಸಲಿದೆ. ಈ ಚಿತ್ರ ನೋಡಲು ಸಿನಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

%d bloggers like this: