ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ದಕ್ಷಿಣ ಭಾರತದ ಸ್ಟಾರ್ ನಟಿ

ಹೊಸ ವರ್ಷಕ್ಕೆ ಹೊಸ ಸುದ್ದಿ ನೀಡಿದ ತೆಲುಗಿನ ಸೂಪರ್ ಸ್ಟಾರ್ ನಟಿ, ಹೊಸ ವರ್ಷ ಹೊಸ ಹರುಷ ಎಲ್ಲೆಡೆ ಪಸರಿಸಲಿ ಎಂಬುದು ಎಲ್ಲರ ಆಶಯ. ಅದರಂತೆ ಹೊಸ ಸಂಭ್ರಮದಲ್ಲಿ ಸಿನಿ ತಾರೆಯರು ಹೊಸ ಪ್ರಾಜೆಕ್ಟ್ ಗಳತ್ತ ಗಮನ ಹರಿಸುತ್ತಿದ್ದಾರೆ. ಕೆಲವು ಸ್ಟಾರ್ ನಟಿಯರು ತಮ್ಮ ಹೊಸ ಚಿತ್ರಗಳ ಬಗ್ಗೆ ಅಪ್ಡೇಟ್ ನೀಡುತ್ತಿದ್ದಾರೆ. ಅದರಂತೆ ತೆಲುಗಿನ ಸುಪ್ರಸಿದ್ದ ನಟಿ ಕಾಜಲ್ ಅಗರ್ವಾಲ್ ಕೂಡ ಹೊಸ ಸುದ್ದಿಯೊಂದನ್ನ ನೀಡಿದ್ದಾರೆ. ಆದರೆ ಇದು ಅವರ ಸಿನಿಮಾದ ಬಗ್ಗೆ ಅಲ್ಲ. ಮತ್ತೇನು ಅಂತೀರಾ. ನಟಿ ಕಾಜಲ್ ಅಗರ್ವಾಲ್ ಅವರು ತಾಯಿಯಾಗುತ್ತಿದ್ದಾರಂತೆ. ಹೌದು ಹೀಗಂತ ಅವರ ಪತಿ ಗೌತಮ್ ಕಿಚ್ಲು ತಮ್ಮ ಸೋಶಿಯಲ್ ಮೀಡಿಯಾ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಕಾಜಲ್ ಅಗರ್ವಾಲ್ ಫೋಟೋ ಶೇರ್ ಮಾಡಿ ಕಾಜಲ್ ಅಮ್ಮನಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸಂತಸದ ವಿಚಾರ ತಿಳಿದ ಕಾಜಲ್ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಈ ಪೋಸ್ಟ್ ಗೆ ಕೆಲವರು ಜ್ಯುನಿಯರ್ ಗೌತಮ್ ಅಥವಾ ಜ್ಯೂನಿಯರ್ ಕಾಜಲ್ ಬರಲಿದ್ದಾರಾ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವು ಅಭಿಮಾನಿಗಳು ಇದು ನಿಮ್ಮಿಬ್ಬರ ಜೀವನದ ಅತ್ಯಂತ ಸುಂದರ ಕ್ಷಣ ಎಂದು ಅಭಿನಂದನೆ ತಿಳಿಸಿ ಕಮೆಂಟ್ ಮಾಡಿದ್ದಾರೆ. ಹೊಸ ವರ್ಷದ ಹಿಂದಿನ ದಿನ ನಟಿ ಕಾಜಲ್ ಅಗರ್ವಾಲ್ ಅವರು ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ತಮ್ಮ ಪತಿ ಗೌತಮ್ ಅವರೊಟ್ಟಿಗೆ ಇರುವ ಫೋಟೋ ಶೇರ್ ಮಾಡಿದ್ದರು. ಆ ಪೋಟೋದ ಜೊತೆಗೆ ನಾನು ಹಳೆಯ ಅಂತ್ಯಗಳಿಗೆ ನನ್ನ ಕಣ್ಣುಗಳನ್ನು ಮುಚ್ಚುತ್ತೇನೆ.

ನೂತನ ಆರಂಭಗಳಿಗೆ ನನ್ನ ಕಣ್ಣುಗಳನ್ನ ತೆರೆಯುತ್ತೇನೆ ಎಂದು ಬರೆದುಕೊಂಡಿದ್ದರು. ಇನ್ನು ನಟಿ ಕಾಜಲ್ ಅವರು 2020 ರಲ್ಲಿ ಗೌತಮ್ ಕಿಚ್ಲು ಅವರೊಟ್ಟಿಗೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದು ಇದೀಗ ಮದುವೆಯಾದ ಒಂದು ವರ್ಷಕ್ಕೆ ತಾಯಿಯಾಗುತ್ತಿದ್ದಾರೆ. ಕಾಜಲ್ ಅಗರ್ವಾಲ್ ಅವರು ಕೆಲವು ದಿನಗಳ ಹಿಂದೆ ತನ್ನ ಸೋದರಿ ನಿಶಾ ತಾಯಿಯಾಗುವುದನ್ನ ಕಂಡು ತಾಯ್ತನದ ಬಗ್ಗೆ ಒಂದಷ್ಟು ಭಾವನಾತ್ಮಕ ನುಡಿಗಳನ್ನ ಹಂಚಿಕೊಂಡಿದ್ದರು. ನಟಿ ಕಾಜಲ್ ಅಗರ್ವಾಲ್ ಅವರು ತೆಲುಗು, ತಮಿಳು ಸಿನಿಮಾಗಳ ಜೊತೆಗೆ ಹಿಂದಿ ‌ಸಿನಿಮಾಗಳಲ್ಲಿಯೂ ಸಹ ನಟಿಸಿದ್ದಾರೆ. ದಕ್ಷಿಣ ಭಾರತದ ಬೇಡಿಕೆಯ ನಟಿಯರ ಪೈಕಿ ಕಾಜಲ್ ಅಗರ್ವಾಲ್ ಅವರು ಕೂಡ ಮೊದಲ ಪಂಕ್ತಿಯಲ್ಲಿ ನಿಲುತ್ತಾರೆ. ಒಟ್ಟಾರೆಯಾಗಿ ನಟಿ ಕಾಜಲ್ ಅಗರ್ವಾಲ್ ಅವರು ಇದೀಗ ತಾಯಿಯಾಗುತ್ತಿರುವುದು ಟಾಲಿವುಡ್ ನಲ್ಲಿ ಭಾರಿ ಸುದ್ದಿಯಾಗಿದೆ.

%d bloggers like this: