ಬಾಹುಬಲಿ ಖ್ಯಾತಿಯ ಎಸ್ ಎಸ್ ರಾಜಮೌಳಿ ಅತ್ಯಂತ ಪ್ರಭಾವಶಾಲಿ ನಿರ್ದೇಶಕರು ಎಂದರೆ ತಪ್ಪಾಗಲಾರದು. ಇವರ ಚಿತ್ರಗಳಲ್ಲಿ ನಟಿಸಬೇಕು ಎಂಬುದು ಎಷ್ಟೋ ಸ್ಟಾರ್ ನಟರ ಆಸೆ. ದೊಡ್ಡ ದೊಡ್ಡ ಸ್ಟಾರ್ ನಟರು ಕೂಡ ಇವರ ಸಿನಿಮಾಗಳಲ್ಲಿ ನಟಿಸುವ ಇಂಗಿತವನ್ನು ವ್ಯಕ್ತಪಡಿಸುತ್ತಾರೆ. ಏಕೆಂದರೆ ಇವರ ಸಿನಿಮಾಗಳಲ್ಲಿ ಒಂದು ಬಾರಿ ನಟಿಸಿದರೆ ಸಾಕು. ಮುಂದಿನ ಹತ್ತು ವರ್ಷಗಳವರೆಗೆ ಸ್ಟಾರ್ ಡಮ್ ಗಿಟ್ಟಿಸಿಕೊಳ್ಳಬಹುದು. ಇವರು ಮಾಡುವ ಚಿತ್ರಗಳೇ ಹಾಗೆ. ಹಿಂದೆ ಯಾರೂ ಮಾಡಿರದಂತಹ ಅದ್ಭುತ ಚಿತ್ರಗಳನ್ನು ರಾಜಮೌಳಿ ಭಾರತದ ಸಿನಿ ಇಂಡಸ್ಟ್ರಿಗೆ ನೀಡುತ್ತಿದ್ದಾರೆ. ರಾಜಮೌಳಿ ಅವರು ಮೂಲತಹ ಕರ್ನಾಟಕದ ರಾಯಚೂರಿನ ವರಾದರೂ, ತೆಲುಗು ಇಂಡಸ್ಟ್ರಿಯಲ್ಲಿ ಸೆಟಲ್ ಆಗಿದ್ದಾರೆ. ಬಾಲಿವುಡ್ ಸ್ಟಾರ್ ನಟರು ಕೂಡ ರಾಜಮೌಳಿ ಅವರ ನಿರ್ದೇಶನದಲ್ಲಿ ಕೆಲಸ ಮಾಡಲು ತುದಿಗಾಲ ಮೇಲೆ ನಿಂತಿದ್ದಾರೆ.

ಬಾಹುಬಲಿ ಚಿತ್ರ ವಿಶ್ವದಾದ್ಯಂತ ಮಾಡಿರುವ ಸಕ್ಸಸ್ ನಂತರ, ರಾಜಮೌಳಿಯವರು ಜೂನಿಯರ್ ಎನ್.ಟಿ.ಆರ್, ರಾಮಚರಣ್, ಬಾಲಿವುಡ್ ಬೆಡಗಿ ಆಲಿಯಾ ಭಟ್, ಅಜಯ್ ದೇವಗನ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಸಕ್ಕತ್ ಹೈಪ್ ಕ್ರಿಯೇಟ್ ಮಾಡಿರುವ ತ್ರಿಬಲ್ ಆರ್ ಸಿನಿಮಾಗಾಗಿ ಜನರು ಕಾದು ಕುಳಿತಿದ್ದಾರೆ. ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು ರಿಲೀಸ್ ಗಾಗಿ ಸಜ್ಜಾಗುತ್ತಿದ್ದಾರೆ. ತ್ರಿಬಲ್ ಆರ್ ಚಿತ್ರದ ರಿಲೀಸ್ ದಿನಾಂಕ ಇದೆ ತಿಂಗಳು 25ಕ್ಕೆ ಫಿಕ್ಸ್ ಆಗಿದೆ. ತ್ರಿಬಲ್ ಆರ್ ಸಿನಿಮಾದಿಂದ ಮತ್ತೊಂದು ಹೊಸ ಅಪ್ಡೇಟ್ ಹೊರಬಿದ್ದಿದೆ. ದೇಶಭಕ್ತಿ ಪುಡಿಗಟ್ಟಿದ ತ್ರಿಬಲ್ಆರ್ ಸಿನಿಮಾದ ಹೊಸ ಹಾಡೊಂದು ರಿಲೀಸ್ ಆಗಿದೆ. ಈಗಾಗಲೇ ಸಾಕಷ್ಟು ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕುತ್ತಿರುವ ಈ ಸಿನಿಮಾ ದೇಶಭಕ್ತಿ ಸೆಲೆಬ್ರೇಟ್ ಮಾಡುವಂತಹ, ಕುಳಿತಲ್ಲಿಯೇ ಕುಣಿಸುವಂತಹ, ದೇಶಪ್ರೇಮ ಹೊರಹೊಮ್ಮುವಂತೆ ಮಾಡುವ ಹಾಡನ್ನು ರಾಜಮೌಳಿ ಬಿಡುಗಡೆ ಮಾಡಿದ್ದಾರೆ.

ಎಮ್ಎಮ್ ಕೀರವಾಣಿ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಜಂಡಾ ಹಾಡು ವೈರಲ್ ಆಗಿದೆ. ವಿಶೇಷವೆಂದರೆ ಈ ಹಾಡಿನಲ್ಲಿ ಭಾರತದ ದೇಶಪ್ರೇಮಿಗಳಿಗೆ ವಂದನೆ ಸಲ್ಲಿಸಲಾಗಿದೆ. ಸ್ವಾತಂತ್ರ್ಯ ಹೋರಾಟದ ಮಹಾನ್ ಕಿಚ್ಚು ನಮ್ಮ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮನಿಗೆ ತ್ರಿಬಲ್ ಆರ್ ಚಿತ್ರತಂಡ ನಮನ ಸಲ್ಲಿಸಿದೆ. ಈ ಸನ್ನಿವೇಶದಲ್ಲಿ ನಟಿ ಆಲಿಯಾ ಭಟ್ ಅವರು ಕೊಡಗಿನ ವೀರ ವನಿತೆಯರ ರೀತಿ ಸೀರೆ ಉಟ್ಟು ರಾಣಿ ಚೆನ್ನಮ್ಮ ದೇವಿಗೆ ನಮನ ಸಲ್ಲಿಸಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಅಷ್ಟೇ ಅಲ್ಲದೆ ಛತ್ರಪತಿ ಶಿವಾಜಿ, ಸರ್ದಾರ್ ವಲ್ಲಭಬಾಯ್ ಪಟೇಲ್, ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರಬೋಸ್ ಸೇರಿದಂತೆ ಹಲವು ಸ್ವತಂತ್ರ ಹೋರಾಟಗಾರರಿಗೆ ನಮನ ಸಲ್ಲಿಸಲಾಗಿದೆ. ಒಂದಾದಮೇಲೊಂದು ಹೊಸ ಅಪ್ಡೇಟ್ ಗಳೊಂದಿಗೆ ತ್ರಿಬಲ್ ಆರ್ ಚಿತ್ರದ ಕುತೂಹಲವನ್ನು ನಿರ್ದೇಶಕರು ಇನ್ನೂ ಹೆಚ್ಚಿಸುತ್ತಿದ್ದಾರೆ.