ತಮ್ಮ ಹೊಸ ಪ್ಯಾನ್ ಇಂಡಿಯಾ ಚಿತ್ರದ ಕನ್ನಡ ಅವತರಣಿಕೆಗೂ ಧ್ವನಿ ಕೊಡದ ರಶ್ಮಿಕಾ‌ ಮಂದಣ್ಣ, ಕನ್ನಡಿಗರು ಬೇಸರ

ನ್ಯಾಷನಲ್ ಕ್ರಶ್ ಬೆಡಗಿ ರಶ್ಮಿಕಾ ಮಂದಣ್ಣ ಅವರು ಕನ್ನಡ ಭಾಷೆಯನ್ನು ಮರೆತು ಹೋದರಾ ಎಂಬ ಪ್ರಶ್ನೆ ಇದೀಗ ಮೂಡಿದೆ. ಅರೇ, ರಶ್ಮಿಕಾ ಮಂದಣ್ಣ ಕನ್ನಡದವರಲ್ಲವೇ ಅವರು ಏಕೆ ಕನ್ನಡ ಮರೆಯುತ್ತಾರೆ. ಅದು ಹೇಗೆ ಸಾಧ್ಯ ಎನ್ನಬಹುದು. ಆದರೆ ಈ ಪ್ರಶ್ನೆ ಮೂಡಲು ಕಾರಣವಾದುದು ಇತ್ತೀಚಿಗೆ ಬಿಡುಗಡೆಯಾದ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ಪುಷ್ಪ ಚಿತ್ರದ ಟ್ರೇಲರ್. ಹೌದು ಇತ್ತೀಚೆಗೆ ಡಿಸೆಂಬರ್ 6ರಂದು ಸೋಮವಾರ ಪುಷ್ಪ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಮೂಲ ತೆಲುಗು ಭಾಷೆಯ ಜೊತೆಗೆ ತಮಿಳು, ಮಲೆಯಾಳಂ, ಹಿಂದಿ ಸೇರಿದಂತೆ ಕನ್ನಡ ‌ಭಾಷೆಯ ಅವತರಿಣಿಕೆಯಲ್ಲಿಯೂ ಕೂಡ ರೀಲಿಸ್ ಆಗಿದೆ. ಟ್ರೇಲರ್ ಕೂಡ ಸಖತ್ತಾಗಿಯೇ ಇದೆ.

ಟ್ರೇಲರ್ ನಲ್ಲಿ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಅವರ ರಗಡ್ ಲುಕ್, ರಶ್ಮಿಕಾ ಮಂದಣ್ಣರ ಗ್ಲಾಮರಸ್ ಲುಕ್, ಡಾಲಿ ಧನಂಜಯ್, ಫಹಾದ್ ಫಾಸಿಲ್ ಸೇರಿದಂತೆ ಒಂದಷ್ಟು ಪಾತ್ರಗಳ ಪರಿಚಯ ಕೂಡ ಆಗಿದೆ. ಟ್ರೇಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಸಹ ಕನ್ನಡ ಭಾಷೆಯ ಡಬ್ಬಿಂಗ್ ನಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಬೇರೆಯವರಿಂದ ಕಂಠದಾನ ಮಾಡಿಸಿರುವುದು ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಏಕೆಂದರೆ ಪುಷ್ಪ ಸಿನಿಮಾದಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಅವರು ಕನ್ನಡದವರು. ಅವರಿಗೆ ಕನ್ನಡ ಭಾಷೆ ಬರುತ್ತದೆ. ಹೀಗಿರುವಾಗ ರಶ್ಮಿಕಾ ಏಕೆ ಕನ್ನಡದಲ್ಲಿ ಡಬ್ಬಿಂಗ್ ಮಾಡಲಿಲ್ಲ. ಅವರ ಧ್ವನಿಗೆ ಬದಲಾಗಿ ಬೇರೆಯವರ ಧ್ವನಿ ಏಕೆ ನೀಡಿದ್ದಾರೆ ಎಂದು ಅಭಿಮಾನಿಗಳಲ್ಲಿ ಬೇಸರ ವ್ಯಕ್ತವಾಗಿದೆ.

ಅಸಲಿಗೆ ಇದರಲ್ಲಿ ರಶ್ಮಿಕಾ ಮಂದಣ್ಣ ಅವರ ತಪ್ಪಿಲ್ಲ ಎಂಬುದು ಹಲವರ ಅಭಿಪ್ರಾಯ. ಮೂಲ ಭಾಷೆಗೆ ಆಯಾ ಕಲಾವಿದರೇ ಡಬ್ಬಿಂಗ್ ಮಾಡಬಹುದಾಗಿರುತ್ತದೆ. ಬೇರೆ ಭಾಷೆಯಲ್ಲಿ ಡಬ್ಬಿಂಗ್ ಮಾಡಿಸುವುದು ಆ ಚಿತ್ರದ ನಿರ್ದೇಶಕರು ಮತ್ತು ನಿರ್ಮಾಪಕರ ನಿರ್ಧಾರವೇ ಅಂತಿಮ ಆಗಿರುತ್ತದೆ. ಹಾಗಾಗಿ ಪುಷ್ಪ ಸಿನಿಮಾದ ಕನ್ನಡ ಡಬ್ಬಿಂಗ್ಗೆ ಹೆಚ್ಚುವರಿಯಾಗಿ ರಶ್ಮಿಕಾ ಅವರಿಗೆ ಹಣ ನೀಡಬೇಕಾಗುತ್ತದೆ ಎಂಬ ಉದ್ದೇಶದಿಂದ ನಿರ್ಮಾಪಕರು ಬೇರೆ ಕಂಠದಾನ ಕಲಾವಿದರಿಂದ ಡಬ್ ಮಾಡಿಸಿದ್ದಾರೆ ಎಂಬುದು ಒಂದಷ್ಟು ಜನರ ಅಭಿಪ್ರಾಯವಾಗಿದೆ. ಇನ್ನು ಈ ಚಿತ್ರದಲ್ಲಿ ಡಾಲಿ ಧನಂಜಯ್ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದು ಅವರಿಗೂ ಕೂಡ ಬೇರೆ ಅವರು ಧ್ವನಿ ನೀಡಿದ್ದಾರಾ ಎಂಬುದನ್ನ ಸಿನಿಮಾ ರಿಲೀಸ್ ಆದ ನಂತರವೇ ತಿಳಿಯಬಹುದಾಗಿದೆ.

ಇನ್ನು ಈ ಪುಷ್ಪ ಸಿನಿಮಾಗೆ ಸುಕುಮಾರ್ ಆಕ್ಷನ್ ಕಟ್ ಹೇಳಿದ್ದು, ಮೈತ್ರಿ ಮೂವೀಸ್ ಬ್ಯಾನರಡಿಯಲ್ಲಿ ನವೀನ್ ಏರ್ನೇನಿ ವೈ ರವಿಶಂಕರ್ ಬಂಡವಾಳ ಹೂಡಿದ್ದಾರೆ. ಪುಷ್ಪಾ ಪಾರ್ಟ್1 ಇದೇ ಡಿಸೆಂಬರ್ 17ರಂದು ಗ್ರ್ಯಾಂಡ್ ಆಗಿ ಪಂಚ ಭಾಷೆಗಳಲ್ಲಿ ದೇಶಾದ್ಯಂತ ಬಿಡುಗಡೆ ಆಗಲಿದೆ. ಕನ್ನಡತಿ ರಶ್ಮಿಕಾ ಮಂದಣ್ಣ, ಕನ್ನಡಿಗ ಜನಪ್ರಿಯ ನಟ ಡಾಲಿ ಧನಂಜಯ್, ಮಲೆಯಾಳಂನ ಖ್ಯಾತ ನಟ ಫಹಾದ್ ಫಾಸಿಲ್, ತೆಲುಗಿನ ಜಗಪತಿ ಬಾಬು, ತಮಿಳಿನ ನಟ ಸುನೀಲ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಮಾಡಿದ್ದಾರೆ.

%d bloggers like this: