ಕಿಂಗ್ ಆಫ್ ಲಕ್ಸುರಿ ಕಾರ್ ಖರೀದಿ ಮಾಡುವ ಮೂಲಕ ತಮ್ಮ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡ ಬಾಲಿವುಡ್ ಸ್ಟಾರ್ ನಟ! ಕೋವಿಡ್ ಲಾಕ್ಡೌನ್ ತೆರವಾಗಿದ್ದೇ ತಡ ವಾಣಿಜ್ಯ ವ್ಯಾಪಾರ ಚಟುವಟಿಕೆಗಳು ಗರಿಗೆದರಿದ್ದು ಎಲ್ಲಾ ಕ್ಷೇತ್ರದಲ್ಲಿಯೂ ಕೂಡ ಉತ್ತಮವಾಗಿ ವಹಿವಾಟು ನಡೆಯಲು ಆರಂಭವಾಗಿವೆ. ಅದರಲ್ಲಿಯೂ ವಾಣಿಜ್ಯ ವಹಿವಾಟಿನಲ್ಲಿ ಬೃಹತ್ ಉದ್ಯಮವಾಗಿರುವ ಆಟೋಮೊಬೈಲ್ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಬಿಝೆನೆಸ್ ಆಗುತ್ತಿದೆ. ಅದಕ್ಕೆ ಪೂರಕವಾಗಿ ಅನೇಕ ಪ್ರತಿಷ್ಟಿತ ಕಾರು ಸಂಸ್ಥೆಗಳು ಹೊಸ ಹೊಸ ವಿಭಿನ್ನವಾದ ಅಡ್ವಾನ್ಸ್ಡ್ ಕಾರುಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯ ಮಾಡಿಕೊಟ್ಟಿದೆ.

ಅವುಗಳಲ್ಲಿ ಪ್ರಮುಖವಾಗಿ ಮರ್ಸಿಡಿಸ್ ಬೆಂಝ಼್ ಕಂಪನಿ ಪ್ರಮುಖವಾಗಿದೆ. ಹೌದು ಇತ್ತೀಚೆಗೆ ಅನೇಕ ಸಿನಿಮಾ ಸೆಲೆಬ್ರಿಟಿಗಳ ದುಬಾರಿ ಬೆಲೆಯ ಐಷಾರಾಮಿ ಕಾರ್ ಆಗಿರುವ ಈ ಮರ್ಸಿಡಿಸ್ ಬೆಂಝ್ ಕಾರ್ ಅನ್ನು ಪೈಪೋಟಿಗೆ ಬಿದ್ದಂತೆ ಖರೀದಿ ಮಾಡುತ್ತಿದ್ದಾರೆ. ಬಾಲಿವುಡ್ ಅನೇಕ ಸ್ಟಾರ್ ನಟ ನಟಿಯರು ವಿವಿಧ ವಿಶೇಷ ದಿನ ಮತ್ತು ತಮ್ಮ ವೈಯಕ್ತಿಕ ಇಚ್ಚೆ ಕನಸಿನಂತೆ ಈ ಕಾರನ್ನು ಖರೀದಿ ಮಾಡಿದ್ದಾರೆ. ಅದರಂತೆ
ಇದೀಗ ಬಾಲಿವುಡ್ ಸೂಪರ್ ಸ್ಟಾರ್ ನಟರಾದಂತಹ ಶಾಹಿದ್ ಕಪೂರ್ ಅವರು ತಮ್ಮ ನಲವತ್ತೊಂದನೆಯ ಜನ್ಮದಿನಾಚರಣೆಯ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ.

ತಮ್ಮ 41ನೇ ಹುಟ್ಟುಹಬ್ಬದ ದಿನದಂದು ನಟ ಶಾಹಿದ್ ಕಪೂರ್ ಅವರು ಮರ್ಸಿಡಿಸ್ ಮೇಬ್ಯಾಕ್ ಎಸ್580 ಎಂಬ ದುಬಾರಿ ಬೆಲೆಯ ಕಾರು ಖರೀದಿ ಮಾಡಿದ್ದಾರೆ. ಇತ್ತೀಚಿಗೆ ತಾನೇ ನಿರೂಪಕ ಮತ್ತು ನಟ ಮನೀಶ್ ಪೌಲ್ ಅವರು ಕೂಡ ಇದೇ ರೀತಿಯ ಮರ್ಸಿಡಿಸ್ ಮೇ ಬ್ಯಾಕ್ ಕಾರನ್ನು ಖರೀದಿಸಿದ್ದರು. ಈಗ ನಟ ಶಾಹಿದ್ ಕಪೂರ್ ಅವರು ಖರೀದಿ ಮಾಡಿರುವ ಈ ಮರ್ಸಿಡಿಸ್ ಮೇಬ್ಯಾಕ್ ಎಸ್ 580. ಕಾರು ವಿವಿಧ ರೀತಿಯ ಅಡ್ವಾನ್ಸ್ಡ್ ಫೀಚರ್ ಒಳಗೊಂಡಿದೆ. ಈ ಭಾರತದಲ್ಲಿ ಈ ಕಾರಿನ ಎಕ್ಸ್ ಶೋ ರೂಂ ಆನ್ ರೋಡ್ ಬೆಲೆ ಬರೋಬ್ಬರಿ 3.79 ಕೋಟಿ ಅಷ್ಟಿದೆಯಂತೆ. ಕಳೆದ ಫೆಬ್ರವರಿ 28ರಂದು ನಟ ಶಾಹಿದ್ ಕಪೂರ್ ಮತ್ತು ಅವರ ಪತ್ನಿ ಮೀರಾ ರಾಜ್ ಭರತ್ ಅವರು ಶೋರೂಂನಿಂದ ಕಾರ್ ಕೀ ಪಡೆದಿದ್ದಾರೆ.

ಇದರ ಒಂದಷ್ಟು ಫೋಟೋಗಳು ಸೋಶಿಯಲ್ ಮೀಡಿಯಾ ದಲ್ಲಿ ಸಖತ್ ವೈರಲ್ ಆಗಿವೆ. ವಿಶೇಷ ಅಂದರೆ ಈ ಮರ್ಸಿಡಿಸ್ ಬೆಂಝ಼್ ಮೇಬ್ಯಾಕ್ ಎಸ್580 ಕಾರು ಹತ್ತು ಹಲವು ವಿಶೇಷತೆಗಳನ್ನು ಒಳಗೊಂಡಿದ್ದು, ಇತರೆ ದುಬಾರಿ ಕಾರಿಗಳಿಗಿಂತ ಹೆಚ್ಚು ವಿಭಿನ್ನವಾಗಿ ಕಾಣುತ್ತದೆಯಂತೆ. ಹಾಗಾಗಿಯೇ ಈ ಕಾರನ್ನು ದುಬಾರಿ ಐಷಾರಾಮಿ ಕಾರು ಗಳ ರಾಜ ಎಂದು ಕರೆಯಲಾಗುತ್ತದೆ. ಕಪ್ಪು ಬಣ್ಣದ ಸ್ಪೋರ್ಟ್ಸ್ ಲುಕ್ ನಲ್ಲಿರುವ ಈ ವಿಶೇಷ ಆಕರ್ಷಕ ವಿನ್ಯಾಸ ಹೊಂದಿರುವ ಮರ್ಸಿಡಿಸ್ ಮೇಬ್ಯಾಕ್ ಕಾರು 3.0 ವಿಸಿಕ್ಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 329 ಬಿಎಚ್ಪಿ ಪವರ್ ಇದ್ದು ಮತ್ತು 480 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಈ ಕಾರಿನಲ್ಲಿ ವೈಶಿಷ್ಟ ವನ್ನು ಗಮನಿಸುವುದಾದರೆ ಇದರಲ್ಲಿ 4.0 ಲೀಟರಿನ ಟ್ವಿನ್ ಟರ್ಬೋಚಾರ್ಜ್ ವಿ8 ಪೆಟ್ರೋಲ್ ಎಂಜಿನ್ ಹೊಂದಿದ್ದು, 700 ಎನ್ ಟಾರ್ಕ್ 48 ವೋಲ್ಟ್ ಹೈಬ್ರಿಡ್ ತಂತ್ರಜ್ಞಾನವನ್ನು ಒಳಗೊಂಡಿದೆ. ಇದು ಪ್ರತಿ ಗಂಟೆಗೆ ಬರೋಬ್ಬರಿ 250ಕಿಲೋ ಮೀಟರ್ ವೇಗದಲ್ಲಿ ಚಲಾಯಿಸಬಹುದು ಎಂದು ತಿಳಿಸಲಾಗಿದೆ. 12.8 ಇಂಚಿನ ನೂತನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್ ಹೊಂದಿದೆ. ನಟ ಶಾಹಿದ್ ಕಪೂರ್ ಅವರ ಬಳಿ ಈಗಾಗಲೇ ಅನೇಕ ಐಷಾರಾಮಿ ಕಾರುಗಳು, ದ್ವಿಚಕ್ರ ವಾಹನಗಳಿಗೆ ಅವುಗಳ ಜೊತೆಗೆ ಇದೀಗ ಈ ನೂತನ ಮರ್ಸಿಡಿಸ್ ಮೇಬ್ಯಾಕ್580 ಕಾರು ಕೂಡ ಸೇರ್ಪಡೆಗೊಂಡಿದೆ.