ತಮ್ಮ ಜೀವನದ ನಿಜವಾದ ಕೊಹಿನೂರ್ ವಜ್ರದ ಜೊತೆ ನಟ ಚೇತನ್ ಕುಮಾರ್

ಅಹಿಂಸಾ ಚೇತನ್ ಅಥವಾ ಆ ದಿನಗಳು ಚೇತನ್ ಎಂಬ ಹೆಸರು ಕರ್ನಾಟಕದಲ್ಲಿ ಬಲು ಪರಿಚಿತ ಹೆಸರು, ಈ ನಟ ತಮ್ಮ ವಿಶಿಷ್ಟ ಚಿತ್ರ ಹಾಗು ತಮ್ಮಲ್ಲಿರುವ ಸಾಮಾಜಿಕ ಕಳಕಳಿಯಿಂದ ಬಹಳ ಪ್ರಸಿದ್ದಿ ಹೊಂದಿದ್ದಾರೆ, ಅಪ್ಪ ಅಮ್ಮ ಅಮೇರಿಕಾದಲ್ಲಿ ದೊಡ್ಡ ಹುದ್ದೆಯಲ್ಲಿದ್ದರೂ ಸಹ ಚೇತನ್ ಅವರ ಮನಸ್ಸು ಯಾವಾಗಲೂ ಕನ್ನಡದ ಕಡೆಗೆ ಇದೆ. ಚೇತನ್ ಅವರದ್ದು ಯಾವಾಗಲೂ ಸಮಾನತೆಯ ಬದುಕು, ಸಮಾಜದಲ್ಲಿ ಎಲ್ಲರನ್ನು ಒಂದೇ ರೀತಿಯಲ್ಲಿ ಕಾಣಬೇಕು ಎಂಬುದು ಈ ನಟನ ವಾದ. ಅಪ್ಪಟ ಬಸವಣ್ಣ ಹಾಗು ಅಂಬೇಡ್ಕರ್ ಅವರ ಅಭಿಮಾನಿ ಹಾಗು ಸಾಮಾಜಿಕ ಹೋರಾಟಗಾರ.

ಚೇತನ್ ಅವರ ಬಗ್ಗೆ ಹೇಳಬೇಕಂದರೆ ಇವರು ಹದಿನೈದು ವರ್ಷಗಳ ಹಿಂದೆ ಅಮೇರಿಕಾ ಇಂದ ಕರ್ನಾಟಕಕ್ಕೆ ಬಂದು ಸಿನಿಮಾ ರಂಗದಲ್ಲಿ ಕೆಲಸ ಶುರು ಮಾಡಿದರು. 2007ರಲ್ಲಿ ಚೇತನ್ ಅವರ ಮೊಟ್ಟಮೊದಲ ಚಿತ್ರ ಆ ದಿನಗಳು ತೆರೆಕಂಡು ದೊಡ್ಡ ಯಶಸ್ಸನ್ನು ಗಳಿಸಿ ಚೇತನ್ ಅವರಿಗೆ ಹೆಸರು ತಂದು ಕೊಟ್ಟಿತು. ಬಳಿಕ ಬಂಡ ಕೆಲವು ಚಿತ್ರಗಳೂ ಸಹ ಚೇತನ್ ಅವರ ಸಿನಿಮಾ ಬದುಕನ್ನು ಬದಲಾಯಿಸಿದವು. ಆದರೆ ಕಳೆದ ಕೆಲ ವರ್ಷಗಳಿಂದ ಚೇತನ್ ಅವರು ಯಾವುದೇ ಚಿತ್ರಗಳನ್ನು ಮಾಡಿಲ್ಲ ಹಾಗು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

ಕಳೆದ ವರ್ಷವಷ್ಟೇ ಚೇತನ್ ಅವರು ಮದುವೆಯಾದರು, ಹಲವು ವರ್ಷಗಳ ಸ್ನೇಹಿತೆ ಮೇಘ ಎಂಬುವವರನ್ನು ತುಂಬಾ ಸರಳವಾಗಿ ಮದುವೆಯಾಗಿ ಎಲ್ಲರಿಗು ಮಾದರಿಯಾಗಿದ್ದಾರೆ, ಮಾಡು ಮದುವೆಯಾದ ನಂತರ ಇದೆ ಮೊದಲ ಬಾರಿಗೆ ಚೇತನ್ ಅವರು ತಮ್ಮ ಹೆಂಡತಿ ಜೊತೆ ಹೊರಗಡೆ ಹೋಗಿದ್ದು ಆಂಧ್ರ ಮತ್ತು ತೆಲಂಗಾಣ ಪ್ರವಾಸದಲ್ಲಿದ್ದಾರೆ. ಈ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ನಟ ಚೇತನ್ ಅವರು ‘ಕೊಹಿನೂರ್ ವಜ್ರದ ತವರಾದ ಹೈದೆರಾಬಾದಿನ ಗೋಲ್ಕೊಂಡ ಕೋಟೆಯಲ್ಲಿ ನನ್ನ ಜೀವನದ ನಿಜವಾದ ಕೊಹಿನೂರ್ ಜೊತೆ ಇದ್ದೇನೆ’ ಎಂಬ ಅಡಿಬರಹ ಹಾಕಿ ತಮ್ಮ ಪತ್ನಿ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಈ ಮಧ್ಯೆ ಚೇತನ್ ಅವರು ನಿಮಗೆಲ್ಲಾ ಗೊತ್ತೇ ಇರುವಂತೆ ತೆಲುಗು ಚಿತ್ರದಲ್ಲಿ ಅಭಿನಯಿಸುತ್ತಿದ್ದು ಸಧ್ಯಕ್ಕೆ ಆ ಚಿತ್ರಕ್ಕೆ ಇನ್ನು ಹೆಸರನ್ನು ಇಟ್ಟಿಲ್ಲ. ಕಳೆದ ವಾರವಷ್ಟೇ ಹೊಸ ತೆಲುಗು ಚಿತ್ರದ ಮಹೂರ್ತ ಹೈದೆರಾಬಾದಿನಲ್ಲಿ ನಡೆಯಿತು. ಈ ಚಿತ್ರ ತೆಲುಗು ಮಾತ್ರವಲ್ಲದೆ ಕನ್ನಡಲ್ಲಿಯೂ ಸಹ ಮೂಡಿಬರಲಿದ್ದು ಇನ್ನೇನು ಚಿತ್ರದ ಟೈಟಲ್ ಘೋಷಣೆ ಆಗಲಿದೆ. ಚೇತನ್ ಅವರು ಸದ್ಯ ತೆಲಂಗಾಣ ಪ್ರವಾಸದಲ್ಲಿದ್ದು ಹೀಗೆಯೇ ತಮ್ಮ ಹೊಸ ತೆಲುಗು ಕನ್ನಡ ಚಿತ್ರ ಬಗ್ಗೆಯೂ ಚರ್ಚಿಸಲಿದ್ದಾರೆ. ಕನ್ನಡಲ್ಲಿ ಒಳ್ಳೆಯ ಚಿತ್ರಗಳನ್ನು ಕೊಟ್ಟಿರುವ ಚೇತನ್ ಅವರಿಗೆ ಟಾಲಿವುಡ್ ಚಿತ್ರರಂಗದಲ್ಲಿಯೂ ಯಶಸ್ಸು ಸಿಗಲಿ ಎಂದು ಹಾರೈಸೋಣ.

%d bloggers like this: