ತಮ್ಮ ಮದುವೆಯಿಂದ ಭಾರತಾದ್ಯಂತ ಸದ್ದು ಮಾಡ್ತಿದ್ದಾರೆ ಕರ್ನಾಟಕದ ಈ ಕಾನ್ಸ್‌ಟೇಬಲ್

ಮದುವೆ ಅಂದಾಕ್ಷಣ ಅಲ್ಲಿ ಕಂಡು ಬರುವುದು ಹಬ್ಬದ ಸಂಭ್ರಮ, ಆಡಂಬರ, ವಿಜೃಂಭಣೆಯ ವೈಭವ ಅದು ಚಪ್ಪರದಿಂದ ಹಿಡಿದು ಮಧುಮಗಳ ರೇಷ್ಮೆ ಸೀರೆಯ ಅಂಚಿನವರೆಗೂ ವಿಶೇಷವಾಗಿರಬೇಕು ಎಂಬ ತೋರ್ಪಡಿಕೆಯ ಜನರು ನಮ್ಮ ನಡುವೆ ಇರುವಾಗ ತನ್ನ ವೃತ್ತಿಯ ಬದ್ದತೆ, ಸಾಮಾಜಿಕ ಕಳಕಳಿ ಹೊಂದಿರುವ ಮನೋಭಾವನೆ ಕಾಣುವುದು ಇಂದಿನ ದಿನಮಾನಗಳಲ್ಲಿ ಅಪರೂಪ ಮತ್ತು ವಿರಳವಾಗಿದೆ. ಹೌದು ಕಾನ್ಸ್ ಟೇಬಲ್ ಮಂಜುನಾಥ್ ಎಂಬುವವರು ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಸಂಚಾರಿ ನಿಯಮಗಳನ್ನು ಸುರಕ್ಷತಾ ಕ್ರಮಗಳನ್ನು ಮುದ್ರಣ ಮಾಡಿಸಿ ಇಲಾಖೆಯ ಮೆಚ್ಚುಗೆಗೆ ಪಾತ್ರವಾಗಿದಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಂದ ಪ್ರಶಂಸೆ ಪಡೆಯುತ್ತಿದ್ದಾರೆ.

ಕೆಲಸದಲ್ಲಿ ಭಕ್ತಿ, ಶ್ರದ್ದೆ, ಬದ್ದತೆ ನಿಷ್ಠೆಯೊಂದಿಗೆ ವೃತ್ತಿಪರತೆ, ವೃತ್ತಿಗೌರವ ಎಂಬುದನ್ನು ಮೈಗೂಡಿಸಿಕೊಂಡರೆ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಈ ಪೊಲೀಸ್ ಕಾನ್ಸ್ಟೇಬಲ್ ಮಾದರಿಯಾಗಿದ್ದಾರೆ. ವಿನೂತನವಾದ ಆಲೋಚನೆಯು ಇವರನ್ನು ಎಲ್ಲರು ಮೆಚ್ಚುಗೆ ವ್ಯಕ್ತ ಪಡಿಸುವಂತಾಗಿದೆ. ಹೌದು ಕಾನ್ಸಟೇಬಲ್ ಮಂಜುನಾಥ್ ಅವರು ಬೆಂಗಳೂರು ಗ್ರಾಮಾಂತರ ನೆಲಮಂಗಲದಲ್ಲಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದೇ ಡಿಸೆಂಬರ್ ತಿಂಗಳು 16 ಮತ್ತು 17 ರಂದು ಇವರ ಮದುವೆಯು ನಿಶ್ಚಯಗೊಂಡಿದ್ದು ಸ್ನೇಹಿತರನ್ನು ಬಂಧು ಬಳಗ, ಹಿತೈಷಿಯರನ್ನು ಆಹ್ವಾನ ಕೊಡುವುದಕ್ಕಾಗಿ ಆಮಂತ್ರಣ ಪತ್ರಿಕೆ ಮುಖ್ಯವಾಗಿರುತ್ತದೆ.

ಇದೇ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಇಲಾಖೆಯ ನಿಯಮಗಳನ್ನು ಅಂದರೆ ಸಂಚಾರಿ ನೀತಿ ನಿಯಮಗಳನ್ನು ತಮ್ಮ ಆಮಂತ್ರಣ ಪತ್ರಿಕೆಯಲ್ಲಿ ಅಚ್ಚಾಗಿಸಿದ್ದಾರೆ. ತುರ್ತು ಸಂಧರ್ಭಗಳಲ್ಲಿ ಸಾರ್ವಜನಿಕರಿಗೆ ಉಪಯುಕ್ತ ವಾಗುವಂತಹ ಮಾಹಿತಿಯನ್ನು ಈ ಆಮಂತ್ರಣದಲ್ಲಿ ಮುದ್ರಣ ಮಾಡಿಸಿದ್ದಾರೆ. ಪೊಲೀಸ್ ಇಲಾಖೆಯು ಸುರಕ್ಷತಾ ಕ್ರಮಗಳನ್ನು ಜನರಿಗೆ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಉದಾಹರಣೆಗೆ ಸ್ಟಾರ್ ನಟರನ್ನು ರಾಯಭಾರಿ ಆಗಿ ನೇಮಿಸುವಂತದ್ದು, ಭಿತ್ತಿ ಪತ್ರ ಅಂಟಿಸುವುದು ಹೀಗೆ ವಿವಿಧ ಪ್ರಯತ್ನ ಮಾಡುತ್ತಾರೆ.

ಆದರೆ ಕಾನ್ಸ್ ಟೇಬಲ್ ಮಂಜುನಾಥ್ ಅವರ ಈ ಆಲೋಚನೆ ಎಲ್ಲರನ್ನು ಆಶ್ಚರ್ಯ ಮತ್ತು ಆಸಕ್ತಿದಾಯಕವಾಗಿ ಗಮನ ಸೆಳೆದಿದ್ದಾರೆ. ಇವರ ಈ ನೂತನ ಆಲೋಚನೆಯನ್ನು ಗಮನಿಸಿದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ವರ್ಗ ಸಹೋದ್ಯೋಗಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಇನ್ನು ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಜನ ಮೆಚ್ಚುಗೆ ಪಡೆದಿದ್ದು ಇವರಂತೆ ಮಾದರಿಯಾಗಿ ಮದುವೆಯಾಗಿರಿ ಆಡಂಬರದ ತೋರ್ಪಡಿಕೆ ಮದುವೆ ಬೇಡ ಎಂದು ನೆಟ್ಟಿಗರು ಜಾಲತಾಣಗಳಲ್ಲಿ ಈ ಪೋಸ್ಟ್ ಅನ್ನು ಹಂಚಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

%d bloggers like this: