ತಮ್ಮ ಮನೆಯ ಬಣ್ಣಕ್ಕೆ ಹೊಂದುವಂತೆ ತಮ್ಮ 16 ಕೋಟಿ ಬೆಲೆಯ ಕಾರಿಗೆ ಪೇಂಟಿಂಗ್ ಮಾಡಿಸಿದ ಖ್ಯಾತ ಮಾಡೆಲ್

ಅಮೇರಿಕಾದ ರಿಯಾಲಿಟಿ ಸ್ಟಾರ್ ಕಿಮ್ ಕಾರ್ಡಶಿಯನ್ ಅತಿ ಹೆಚ್ಚು ಸುದ್ದಿಯಲ್ಲಿರುವ ನಟಿ. ಯಾವಾಗಲೂ ತನ್ನ ವಿಶೇಷ ಅಭ್ಯಾಸಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ರಿಯಾಲಿಟಿ ಸ್ಟಾರ್ ಗಳು ಜನಪ್ರಿಯರಾದರೆ ಸಾಕು. ಕಾಲೆಳೆಯುವ ಜನರು ಕೂಡ ಹೆಚ್ಚಾಗುತ್ತಾರೆ. ಹೀಗೆ ಅನೇಕ ಜನರು ಈಕೆಯ ಬಗ್ಗೆ ಸಾಕಷ್ಟು ಟೀಕಿಸಿದರೂ ಆಕೆಯ ಸ್ಟಾರ್ ಡಮ್ ಹೆಚ್ಚಾಗುತ್ತಲೇ ಇದೆ. ನಟಿ ಕಿಮ್ ಎಲ್ಲ ವಿಷಯದಲ್ಲೂ ಡಿಫರೆಂಟ್. ಈಕೆ ವಿಶೇಷವಾದ ಅಭಿರುಚಿಗೆ ಹೆಸರುವಾಸಿ. ತನ್ನ ಸ್ಟಾರ್ ಡಮ್ ಹೆಚ್ಚಾಗುತ್ತಿದ್ದಂತೆ ಈಕೆಯ ಐಷಾರಾಮಿ ಮತ್ತು ಕ್ರೀಡಾ ಕಾರುಗಳ ಖರೀದಿಯೊಂದಿಗೆ ಸುದ್ದಿಯಾಗಿದ್ದರು. ಇತ್ತೀಚೆಗೆ ಇವರ ಕಾರುಗಳ ವೈಯಕ್ತೀಕರಣದ ಸುದ್ದಿ ಬಾರಿ ವೈರಲ್ ಆಗಿತ್ತು.

ಹಲವಾರು ಸೆಲಿಬ್ರಿಟಿಗಳು ದುಬಾರಿ ಕಾರುಗಳನ್ನು ಹೊಂದಿರುತ್ತಾರೆ. ಭಾರತದಲ್ಲೂ ಕೂಡ ದುಬಾರಿ ಕಾರುಗಳನ್ನು ಕೆಲವೇ ಕೆಲವು ಜನ ಮಾತ್ರ ಹೊಂದಿದ್ದಾರೆ. ಲ್ಯಾಂಬೋರ್ಗಿನಿ ಕಾರನ್ನು ಶ್ರೀಮಂತ ಉದ್ಯಮಿಗಳು ಮತ್ತು ಚಿತ್ರನಟರು ಕೊಂಡುಕೊಳ್ಳುತ್ತಾರೆ. 2019ರಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಪತ್ನಿಗೆ ಲ್ಯಾಂಬೋರ್ಗಿನಿ ಉರುಸ್ ಕಾರ್ ನ್ನು ಉಡುಗೊರೆಯಾಗಿ ನೀಡಿದ್ದರು. ಹಲವಾರು ಸೆಲೆಬ್ರಿಟಿಗಳಿಗೆ ಮತ್ತು ಶ್ರೀಮಂತರಿಗೆ ಕಾರುಗಳ ಕ್ರೇಜ್ ತುಂಬಾ ಇರುತ್ತದೆ. ತಮ್ಮ ಕಾರುಗಳೆಂದರೆ ಎಲ್ಲರಿಗೂ ಪ್ರೀತಿ ಇರುವುದು ಸಾಮಾನ್ಯ. ಆದರೆ ಕೆಲವರು ತಮ್ಮ ಕಾರುಗಳನ್ನು ತಮಗಿಷ್ಟದ ರೀತಿಯಲ್ಲಿ ಮಾಡಿಫೈ ಮಾಡಿಕೊಳ್ಳುತ್ತಾರೆ.

ಜನರು ತಮ್ಮ ಅನುಕೂಲಕ್ಕಾಗಿ ಅಥವಾ ಅಗತ್ಯಗಳಿಗಾಗಿ ಕಾರ್ ಗಳನ್ನು ಮಾಡಿಫೈ ಮಾಡಿಕೊಂಡರೆ. ಕಿಮ್ ಕಾರ್ಡಶಿಯನ್ ತಮ್ಮ ಮನೆಯ ಬಣ್ಣಕ್ಕೆ ಹೊಂದಿಕೆಯಾಗುವಂತೆ ತಮ್ಮ ಮೂರು ಕಾರುಗಳ ಬಣ್ಣ ಬದಲಾಯಿಸಿ ಸುದ್ದಿಯಾಗಿದ್ದಾರೆ. ಹೌದು ಅಮೆರಿಕದ ಪ್ರಸಿದ್ಧ ಫ್ಯಾಷನ್ ಮತ್ತು ಜೀವನಶೈಲಿ ನಿಯತಕಾಲಿಕೆ ವೋಗ್ ತನ್ನ ಸಾಮಾಜಿಕ ಮಾಧ್ಯಮದ ಪ್ಲಾಟ್ ಫಾರಂಗಳಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಕಿಮ್ ಕಾರ್ಡಶಿಯನ್ ತಮ್ಮ ಬಂಗಲೆ ಮತ್ತು ಅವರ ಮೂರು ಕಾರುಗಳನ್ನು ತೋರಿಸುತ್ತಿರುವ ಚಿತ್ರವಿದೆ. ವಿಶೇಷವೆಂದರೆ ಈ ಮೂರು ಐಶಾರಾಮಿ ಕಾರುಗಳಾದ ಲ್ಯಾಂಬೋರ್ಗಿನಿ ಉರುಸ್, ಮರ್ಸಿಡಿಸ್ ಮೇ ಬ್ಯಾಕ್, ಎಸ್ 600 ಮತ್ತು ರೋಲ್ಸ್ ರಾಯ್ಸ್ ಘೋಸ್ಟ್ ಕಾರುಗಳು ಕಿಮ್ ಕಾರ್ಡಶಿಯನ್ ಅವರ ಮನೆಯ ಬಣ್ಣಕ್ಕೆ ಹೊಂದಾಣಿಕೆಯಾಗುತ್ತವೆ.

ಮೂಲಗಳ ಪ್ರಕಾರ ಕಿಮ್ ಕಾರ್ಡಶಿಯನ್ ವೈಯಕ್ತಿಕವಾಗಿ ಪೇಂಟ್ ಕೆಲಸದ ನಿಗಾ ವಹಿಸಿದ್ದು, ಇದಕ್ಕಾಗಿ ಸುಮಾರು ಒಂದು ಲಕ್ಷ ಡಾಲರ್ ವೆಚ್ಚ ಮಾಡಿದ್ದಾರೆ. ಲಾಸ್ ಎಂಜಲೀಸ್ ಮೂಲದ ಪ್ಲಾಟಿನಮ್ ಮೋಟಾಸ್ಪೋರ್ಟ್ಸ್ ಈ ಪೇಂಟಿಂಗ್ ಕಾರ್ಯ ನಿರ್ವಹಿಸಿದೆ. ಇದಕ್ಕಾಗಿ ಪ್ಲಾಟಿನಮ್ ಮೋಟಾರ್ ಸ್ಪೋರ್ಟ್ಸ್ ತೆಗೆದುಕೊಂಡ ಸಮಯ ಒಂದು ತಿಂಗಳು. ಕಿಮ್ ಅವರು ತಮ್ಮ ಬಂಗಲೆಯ ಬಣ್ಣಕ್ಕೆ ಹೊಂದಿಕೆಯಾಗುವಂತೆ ಬೂದುಬಣ್ಣವನ್ನು ತಮ್ಮ ಕಾರುಗಳಿಗೆ ಪೇಂಟ್ ಮಾಡಿಸಿದ್ದಾರೆ. ಈ ಕಾರುಗಳು ಅವರ ಇಷ್ಟದ ಕಾರುಗಳಲ್ಲಿ ಕೆಲವು ಎಂದು ಹೇಳಲಾಗುತ್ತಿದೆ.

ವೋಗ್ ಹಂಚಿಕೊಂಡ ವಿಡಿಯೋ ಕ್ಲಿಪ್ ನಲ್ಲಿ ಕಿಮ್ ಕಾರ್ಡಶಿಯನ್ ಅವರು ತಮ್ಮ ಕಾರುಗಳ ಮೇಲಿನ ಪ್ರೀತಿಯನ್ನು ವಿವರಿಸಿದ್ದಾರೆ. ಕಿಮ್ ಅವರು ಹೊಸ ಮತ್ತು ವಿಶೇಷ ಪೇಂಟ್ ಸ್ಕೀಮ್ ನೊಂದಿಗೆ ತಮ್ಮ ಮನೆಗೆ ಹೊಂದಿಕೆಯಾಗುವಂತೆ ವಿಭಿನ್ನವಾಗಿ ಪೇಯಿಂಟ್ ಮಾಡಿಸಲು ಬಯಸಿದ್ದರು. ಈ ಮೂರು ಕಾರುಗಳಲ್ಲಿ ಲ್ಯಾಂಬೋರ್ಗಿನಿ ಊರುಸ್ ಹೆಚ್ಚು ಆಕರ್ಷಣೆ ಪಡೆದುಕೊಳ್ಳುತ್ತದೆ. 2.18 ಲಕ್ಷ ಡಾಲರ್ ಮೌಲ್ಯದ ಕಾರು ಎಸ್.ಯು.ವಿ ಗಳಲ್ಲಿ ಅತ್ಯಂತ ದುಬಾರಿ ಕಾರು ಎಂದು ಗುರುತಿಸಿಕೊಂಡಿದೆ. ಈ ಕಾರನ್ನು ಅದರ ಮುಂಭಾಗದಲ್ಲಿ ವಿಶೇಷ ಬಾಡಿ ಯೊಂದಿಗೆ ಈಗಾಗಲೇ ಕಸ್ಟಮೈಸ್ ಮಾಡಲಾಗಿದೆ. ಊರುಸ್ ಹೊರತಾಗಿ ರೋಲ್ಸ್ ರಾಯ್ಸ್ ಘೋಸ್ಟ್ ಮತ್ತು ಮೆಬ್ಯಾಕ್ ಎಸ್600 ಸಹ ವಿಭಿನ್ನವಾಗಿ ಕಾಣುತ್ತದೆ.

%d bloggers like this: