ಬಡ ಮಕ್ಕಳ ಜೊತೆಗೂಡಿ ಕ್ರಿಸ್ ಮಸ್ ಹಬ್ಬ ಆಚರಿಸಿ ಅವರಿಗೆ ಪುಸ್ತಕಗಳನ್ನ ನೀಡಿದ ಕಿರುತೆರೆ ಸ್ಟಾರ್ ನಟ, ರೀಲ್ ಲೈಫ್ ನಲ್ಲಿ ಮಾತ್ರ ಅಲ್ಲ ರಿಯಲ್ ಲೈಫ್ ನಲ್ಲಿಯೂ ಕೂಡ ರಿಯಲ್ ಹೀರೋನೇ ಎಂಬುದನ್ನ ಈ ನಟ ಮತ್ತೆ ಮತ್ತೆ ಸಾದರ ಪಡಿಸುತ್ತಿದ್ದಾರೆ. ಹೌದು ಸಿನಿಮಾಗಳಲ್ಲಿ ತಮ್ಮ ಅಭಿನಯ, ಪಂಚ್ ಡೈಲಾಗ್ ಮತ್ತು ಎದುರಾಳಿಗಳಿಗೆ ಮಣ್ಣು ಮುಕ್ಕಿಸುವುದು ಹೀರೋಯಿಸಂ ಅಲ್ಲ. ತಮ್ಮ ವೈಯಕ್ತಿಕ ಜೀವನದಲ್ಲಿ ಆ ಕಲಾವಿದ ಯಾವ ರೀತಿಯ ಆದರ್ಶವಾಗಿ ಸಮಾಜದ ಜೊತೆ ಬೆರೆಯುತ್ತಾನೋ ಅದರ ಮೇಲೆ ಆ ನಟ ಅಥವಾ ನಟಿ ನಿಜವಾದ ಹೀರೋ ಆಗುತ್ತಾರೆ. ಅಂತೆಯೇ ಕನ್ನಡ ಕಿರುತೆರೆಯ ಜನಪ್ರಿಯ ನಟ ಕಿರಣ್ ರಾಜ್ ಅವರು ತಮ್ಮ ಅಭಿನಯದ ಜೊತೆಗೆ ಸಾಮಾನ್ಯ ಜನರೊಂದಿಗೆ ಬೆರೆಯುವಿಕೆ, ಸಾಮಾಜಿಕ ಕಳಕಳಿ, ಸೇವಾ ಮನೋಭಾವ ಗುಣಗಳಿಂದ ನಾಡಿನಾದ್ಯಂತ ಅಪಾರ ಮೆಚ್ಚುಗೆ ಪಡೆದಿದ್ದಾರೆ.

ಜನರು ಇವರ ನಟನೆ ನೋಡಿ ಎಷ್ಟು ಇಷ್ಟ ಪಡುತ್ತಾರೋ ಅದಕ್ಕಿಂತ ನೂರು ಪಟ್ಟು ಇವರ ಸೇವಾ ಮನೋಭಾವದ ವ್ಯಕ್ತಿತ್ವಕ್ಕೆ ಇವರಿಗೆ ಫಿದಾ ಆಗಿದ್ದಾರೆ. ಅದರಲ್ಲಿಯೂ ಇವರ ಸ್ಪೂರ್ತಿದಾಯಕ ಡೈಲಾಗ್ ಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಇವರ ಒಂದೊಂದು ಡೈಲಾಗ್ ಗಳು ಯುವ ಸಮೂಹದ ವಾಟ್ಸಪ್ ಸ್ಟೇಟಸ್ ಗಳಲ್ಲಿ ಮಿಂಚುತ್ತಿರುತ್ತವೆ. ಅಷ್ಟರ ಮಟ್ಟಿಗೆ ನಟ ಕಿರಣ್ ರಾಜ್ ಅವರ ಜನಪ್ರಿಯತೆ ಉತ್ತುಂಗ ಮಟ್ಟದಲ್ಲಿದೆ. ಈಗಿನ ಒಂದಷ್ಟು ಸ್ಟಾರ್ ನಟ-ನಟಿಯರು ಯಾವ ಹಮ್ಮು ಬಿಮ್ಮು ಇಲ್ಲದೆ ನೇರವಾಗಿ ಸಂಕಷ್ಟದಲ್ಲಿರುವ ಜನರಿಗೆ ಸ್ವತಃ ನೆರವಾಗುತ್ತಿದ್ದಾರೆ. ಅದರಲ್ಲಿಯೂ ಕೋವಿಡ್ ಸಂಕಷ್ಟದ ದಿನಗಳನ್ನ ಕಂಡ ಬಹುತೇಕ ಸಿನಿಮಾ , ಕಿರುತೆರೆ ಸ್ಟಾರ್ ನಟ-ನಟಿಯರು, ಸಮಾಜದ ಗಣ್ಯ ವ್ಯಕ್ತಿಗಳು, ಉದ್ಯಮಿಗಳು ಸಮಾಜದಲ್ಲಿರುವ ಅಸಹಾಯಕರಿಗೆ ತಮ್ಮ ಕೈಲಾದಷ್ಟು ನೆರವು ನೀಡುತ್ತಿದ್ದಾರೆ.

ಅಂತೆಯೇ ಕನ್ನಡತಿ ಸೀರಿಯಲ್ ಖ್ಯಾತಿಯ ನಟ ಕಿರಣ್ ರಾಜ್ ಕೂಡ ತಮ್ಮ ಕಿರಣ್ ರಾಜ್ ಫೌಂಡೇಷನ್ ಮುಖಾಂತರ ಒಂದಷ್ಟು ಸಾಮಾಜಿಕ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರಣ್ ರಾಜ್ ಅವರು ಕೋವಿಡ್ ಸಂಕಷ್ಟದ ಸಂಧರ್ಭದಲ್ಲಿ ಅನೇಕರಿಗೆ ಆಹಾರ ಧಾನ್ಯ ಕಿಟ್, ಅಗತ್ಯ ಮಾತ್ರೆ ಔಷಧಿಗಳನ್ನು ತಲುಪಿಸಿದ್ದರು. ಇದೇ ರೀತಿಯಾಗಿ ಆಗಾಗ ಸೋಶಿಯಲ್ ಸರ್ವಿಸ್ ಮಾಡುವ ಕಿರಣ್ ರಾಜ್ ಅವರು ಇತ್ತೀಚೆಗೆ ಕ್ರಿಸ್ ಮಸ್ ಹಬ್ಬವನ್ನ ವಿಶಿಷ್ಟವಾಗಿ ಆಚರಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಹೌದು ಕಿರಣ್ ರಾಜ್ ಅವರು ಕ್ರಿಸ್ ಮಸ್ ಹಬ್ಬದಂದು ಬಡ ಮಕ್ಕಳಿಗೆ ಒಂದಷ್ಟು ಪುಸ್ತಕಗಳನ್ನು ನೀಡಿ ಅವರೊಟ್ಟಿಗೆ ಒಂದಷ್ಟು ಸಮಯ ಕಳೆದು ಅವರನ್ನ ಸಂತಸ ಪಡಿಸಿದ್ದಾರೆ. ಕ್ರಿಸ್ ಮಸ್ ಹಬ್ಬವನ್ನ ಬಡ ಮಕ್ಕಳಿಗೆ ನೆರವಾಗುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ್ದು, ಅದರ ಒಂದಷ್ಟು ಫೋಟೋಗಳನ್ನು ಕಿರಣ್ ರಾಜ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿವೆ.