ತಮ್ಮ ಸೋಶಿಯಲ್ ಮೀಡಿಯಾದಲ್ಲಿ 500ನೇ ಪೋಸ್ಟಿಗೆ ಕುಟುಂಬದ ವಿಶೇಷ ಪೋಟೋ ಹಂಚಿಕೊಂಡ ನಟಿ ರಾಧಿಕಾ ಪಂಡಿತ್ ಅವರು

ಚಂದನವನದ ಯಶಸ್ವಿ ತಾರಾ ಜೋಡಿ ಅಂದಾಕ್ಷಣ ಥಟ್ಟನೆ ನೆನಪಿಗಿ ಬರುವುದು ಅದು ಒನ್ ಅಂಡ್ ಓನ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್. ಈ ಜೋಡಿ ತೆರೆ ಮೇಲೆ ಎಷ್ಟು ಮುದ್ದಾಗಿ ಕಾಣಿಸಿಕೊಂಡು ಸಿನಿ ಪ್ರೇಕ್ಷಕರ ಮನ ಗೆದ್ದಿದ್ರೋ ಅಷ್ಟೇ ತಮ್ಮ ವೈಯಕ್ತಿಕ ಜೀವನದಲ್ಲಿ ಕೂಡ ಅಷ್ಟೇ ಆದರ್ಶ ದಂಪತಿಗಳಾಗಿ ಸಾರ್ವಜನಿಕ ಜೀವನದಲ್ಲಿ ಉತ್ತಮವಾಗಿ ಬದುಕು ನಡೆಸುತ್ತಿದ್ದಾರೆ. ಈ ಜೋಡಿ ನೋಡಿದ್ರೆ ಎಷ್ಟೋ ಜನಕ್ಕೆ ಅರೇ ನಾವು ಕೂಡ ಇವರ ರೀತಿ ಬದುಕು ನಡೆಸಬೇಕಲ್ಲ ಎಂದುಕೊಳ್ಳುವುದು ಸುಳ್ಳಲ್ಲ. ಯಾಕಂದ್ರೆ ನಟ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಇಬ್ಬರು ಸಹ ಪರಸ್ಪರ ಅರ್ಥ ಮಾಡಿಕೊಂಡು ಎಲ್ಲಿಯೂ ಕೂಡ ತಮ್ಮಿಬ್ಬರ ಬಗ್ಗೆ ಕಪ್ಪು ಚುಕ್ಕೆ ಬರದಂತೆ ಜೀವನ ನಡೆಸುತ್ತಿದ್ದಾರೆ. ಕಿರುತೆರೆಯ ಮೂಲಕ ಪರಿಚಯವಾಗಿ ತದ ನಂತರ ಸ್ನೇಹವಾಗಿ ಮುಂದೆ ಒಂದೇ ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿ ಬಳಿಕ ಇಬ್ಬರ ನಡುವೆ ಪ್ರೀತಿಯ ಮೊಳಕೆ ಹೊಡೆದು ಇದೀಗ ಮದುವೆಯಾಗಿ ಇಬ್ಬರು ಮುದ್ದಾದ ಮಕ್ಕಳ ಪೋಷಕರಾಗಿದ್ದಾರೆ ಈ ತಾರಾ ಜೋಡಿ.

ಯಶ್ ಸ್ಟಾರ್ ನಟಯಾಗಿರುವಂತೆ ನಟಿ ರಾಧಿಕಾ ಪಂಡಿತ್ ಕೂಡ ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದವರು. ತಮ್ಮ ಅಭಿನಯದ ಮೂಲಕ ನಟಿ ರಾಧಿಕಾ ಪಂಡಿತ್ ನಾಡಿನ ಮನೆಮಗಳಾಗಿ ಸ್ಥಾನ ಪಡೆದವರು. ರಾಧಿಕಾ ಪಂಡಿತ್ ಕೆಲವು ವರ್ಷಗಳ ಹಿಂದೆ ಕನ್ನಡದ ಬಹುಬೇಡಿಕೆಯ ನಟಿಯಾಗಿ ಮಿಂಚಿದವರು. ನಟಿ ರಾಧಿಕಾ ಪಂಡಿತ್ ಅವರು ಯಶ್ ಅವರೊಟ್ಟಿಗೆ ಮದುವೆಯಾದ ನಂತರ ಸಿನಿಮಾಗಳಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಇಬ್ಬರು ಮಕ್ಕಳ ಹಾರೈಕೆ ಮಾಡಿಕೊಂಡು ಮುದ್ದಾದ ಮಕ್ಕಳೊಂದಿಗೆ ಸಮಯ ಕಳೆಯುತ್ತಿರುವ ರಾಧಿಕಾ ಪಂಡಿತ್ ಸಿನಿಮಾಗಳಿಂದ ದೂರ ಉಳಿದರು ಸಹ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಸಖತ್ ಆಕ್ಟೀವ್ ಆಗಿರ್ತಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರೀಯರಾಗಿರುವ ನಟಿ ರಾಧಿಕಾ ಪಂಡಿತ್ ಅವರು ಇತ್ತೀಚೆಗೆ ಕೆಲವು ಆಕರ್ಷಕ ಫೋಟೋಗಳನ್ನ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ರಾಧಿಕಾ ಪಂಡಿತ್ ಅವರ ಈ ಫೋಟೋಗಳನ್ನ ನೋಡಿದರೆ ಮತ್ತೆ ಕಮ್ ಬ್ಯಾಕ್ ಮಾಡಲಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಇದರ ನಡುವೆ ರಾಧಿಕಾ ಪಂಡಿತ್ ಅವರು ಒಂದು ಸ್ಪೆಷಲ್ ಫೋಟೋವೊಂದನ್ನ ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೋದ ವಿಶೇಷತೆ ಅಂದರೆ ಈ ಫೋಟೋದಲ್ಲಿ ಯಶ್ ರಾಧಿಕಾ ಪಂಡಿತ್ ಮತ್ತು ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಫ್ಯಾಮಿಲಿ ಫೋಟೋ ಶೇರ್ ಮಾಡಿಕೊಳ್ಳುವ ಉದ್ದೇಶ ಏನಾಗಿತ್ತು ಅಂದರೆ ರಾಧಿಕಾ ಪಂಡಿತ್ ಅವರು ಪೋಸ್ಟ್ ಮಾಡಿದ ಐನೂರನೇ ಫೋಟೋ ಇದಾಗಿತ್ತಂತೆ. ಹಾಗಾಗಿ ರಾಧಿಕಾ ಪಂಡಿತ್ ಅವರು ತಮ್ಮ ಕ್ಯೂಟ್ ಫ್ಯಾಮಿಲಿ ಫೋಟೋವನ್ನು ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಪೋಟೋಗೆ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಮೆಚ್ಚುಗೆ ವ್ಯಕ್ತವಾಗಿವೆ.

%d bloggers like this: