ತಮ್ಮ ವಿದೇಶಿ ಗೆಳೆಯನ ಜೊತೆ ಸಪ್ತಪದಿ ತುಳಿದ ನಟಿ

ಯೇ ಮೇರಿ ಲೈಫ್ ಹೈ ಧಾರಾವಾಹಿ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ನಟಿ ಶಮಾ ಸಿಕಂದರ್ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ನಟಿ ಶಮಾ ಅವರು ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ಏನೆಂದರೆ ಮಾರ್ಚ್ 14 ರಂದು ಗೋವಾದಲ್ಲಿ ಜೇಮ್ಸ್ ಮಿಲಿರಾನ್ ಎಂಬ ಅಮೇರಿಕಾದ ಹುಡುಗನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈನಲ್ಲಿ ಭೇಟಿಯಾಗಿದ್ದ ಈ ಜೋಡಿ 2015 ರಿಂದ ಡೇಟಿಂಗ್ ಶುರು ಮಾಡಿಕೊಂಡಿದ್ದರು. ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡ ನಟಿ ಶಮಾ ಅವರು, ನಾವಿಬ್ಬರೂ ತುಂಬಾನೇ ಕಾಮ್ ಅಂಡ್ ಸೇಫ್ ರೀತಿಯ ವ್ಯಕ್ತಿಗಳು. ನಮ್ಮಿಬ್ಬರ ಸ್ವಭಾವಗಳು ಇಬ್ಬರಿಗೂ ಹೊಂದಾಣಿಕೆಯಾಗುತ್ತವೆ. ನಾವಿಬ್ಬರೂ ಜೀವನಪೂರ್ತಿ ಒಟ್ಟಿಗೆ ಇರಬೇಕು ಎಂದು ಬಯಸಿದ್ದೇನೆ ಎಂದು ಈ ಹಿಂದೆ ಶಮಾ ಹೇಳಿಕೊಂಡಿದ್ದರು.

ಮೂಲತಃ ನಾನು ಮುಸ್ಲಿಂ, ಜೇಮ್ಸ್ ಕ್ರಿಶ್ಚಿಯನ್, ಹೀಗಾಗಿ ನಾವು ಯಾವ ಜಾತಿ ಪದ್ಧತಿಗಳನ್ನು ಅನುಸರಿಸುವುದಿಲ್ಲ. ಜೇಮ್ಸ್ ತುಂಬಾನೇ ಸ್ಪಿರಿಚುವಲ್ ವ್ಯಕ್ತಿ ಅವರು ನಮ್ಮ ಪ್ರೀತಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಹಾಗೂ ನಾನು ಕೂಡ. ಶಾಸ್ತ್ರ ಸಂಪ್ರದಾಯದಂತಹ ಮದುವೆಯಲ್ಲಿ ಒತ್ತಡ ಹೆಚ್ಚಾಗಿರುತ್ತದೆ. ನಾನು ನನ್ನ ಮದುವೆಯನ್ನು ಕಂಪ್ಲೀಟ್ ಆಗಿ ಎಂಜಾಯ್ ಮಾಡಲು ಬಯಸುತ್ತೇನೆ. ಹೀಗಾಗಿ ಮದುವೆಯಾಗಲು ಗೋವಾ ಬೆಸ್ಟ್ ಡಿಸಿಶನ್ ಎಂದು ಈ ಹಿಂದೆ ಖಾಸಗಿ ಸಂದರ್ಶನದಲ್ಲಿ ತಮ್ಮ ಮದುವೆ ಬಗ್ಗೆ ಶಮಾ ಹೇಳಿಕೊಂಡಿದ್ದರು. ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಆಗಬೇಕು ಎಂಬುದು ನನ್ನ ಬಾಲ್ಯದ ಕನಸು. ನನಗೆ ಬೀಚ್ ಗಳೆಂದರೆ ತುಂಬಾ ಇಷ್ಟ.

ಎರಡು ವರ್ಷಗಳ ಹಿಂದೆ ನಾವು ಟರ್ಕಿನಲ್ಲಿ ಮದುವೆಯಾಗಬೇಕೆಂದು ನಿರ್ಧಾರ ಮಾಡಿದ್ದೆವು. ಏಕೆಂದರೆ ನಮ್ಮ ಹಲವಾರು ಆಪ್ತರು ಹಾಗೂ ಸ್ನೇಹಿತರು ವಿದೇಶದಲ್ಲಿಯೇ ಇದ್ದಾರೆ. ಆದರೆ ಕೋರೋಣ ಕಾರಣದಿಂದಾಗಿ ನಾವು ನಮ್ಮ ಮದುವೆಯ ಸ್ಥಳ ಬದಲಾಯಿಸಿಕೊಂಡೆವು. ಆದರೂ ಕುಟುಂಬಸ್ಥರಿಗಾಗಿ ಅಲ್ಲಿಯೂ ಒಂದು ಸಣ್ಣ ಕಾರ್ಯಕ್ರಮ ಮಾಡುತ್ತೇವೆ. ನನ್ನ ಮದುವೆಗೂ ಕೆಲವು ದಿನಗಳ ಹಿಂದೆ ನಾಯಿ ಕೈಯಲ್ಲಿ ಕಟ್ಟಿಸಿಕೊಂಡಿದ್ದೇ. ನನ್ನ ಜೀವನದಲ್ಲಿ ತುಂಬಾನೆ ನಡೆಯುತ್ತಾ ಇದೆ ಎಂದು ಶರ್ಮ ಹೇಳಿಕೊಂಡಿದ್ದರು. ನಾವು ವೈಟ್ ವೆಡ್ಡಿಂಗ್ ಆಗುತ್ತಿದ್ದೇವೆ. ನನಗೆ ಕ್ರಿಶ್ಚಿಯನ್ ಮದುವೆ ಆಗಬೇಕು ಎಂದು ತುಂಬಾ ಇಷ್ಟ.

ಮ್ಯೂಸಿಕ್ ಪಾರ್ಟಿ ಇರಬೇಕು, ಮದುವೆಯಲ್ಲಿ ಸಕ್ಕತ್ ಫನ್ ಇರಬೇಕು. ಜನರನ್ನು ವೈಟ್ ಮದುವೆಯಲ್ಲಿ ನೋಡುವುದಕ್ಕೆ ಖುಷಿಯಾಗುತ್ತದೆ ಆದರೆ ನನ್ನ ಮದುವೆ ಹೇಗಿರಬೇಕು ಎಂದು ಕಂಪ್ಲೀಟ್ ಆಗಿ ಪ್ಲಾನ್ ಮಾಡಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಶಮಾ ಹೇಳಿಕೊಂಡಿದ್ದರು. ಮಾರ್ಚ್ 14 ರಂದು ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಮಾ ಹಾಗೂ ಜೇಮ್ಸ್ ಅವರು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿ ಉಂಗುರದ ಫೋಟೋ ಹಂಚಿಕೊಂಡು ವೋಲ್ ಎಂದು ಬರೆದುಕೊಂಡಿದ್ದಾರೆ. ಮದುವೆಯಲ್ಲಿ ಶಮಾ ಸಿಕಂದರ್ ಬಿಳಿಬಣ್ಣದ ಡೀಪ್ ಡಿಸೈನ್ ಗೌನ್ ಧರಿಸಿದ್ದಾರೆ.

ಜೇಮ್ಸ್ ಮಿಲಿರಾನ್ ಕೂಡ ವೈಟ್ ಸೂಟ್ ಧರಿಸಿದ್ದಾರೆ. ಇವರ ಬಟ್ಟೆಗಳನ್ನು ಮಿಲ್ಲಾನೋವ ಮತ್ತು ನಿವೇದಿತಾ ಸಾಬೂ ಕೋರ್ಟಿಯೂರ್ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಮಿನಿಮಲ್ ಮೇಕ್ಅಪ್ ಹಾಕಿಕೊಂಡು ಮೆಸ್ಸಿ ಬನ್ ಹೇರ್ ಸ್ಟೈಲ್ ಮಾಡಿಕೊಂಡು, ಕಿವಿಯಲ್ಲಿ ಓಲೆ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ ನಟಿ ಶಮಾ. ತಮ್ಮ ಮದುವೆಯ ಸುಮಧುರ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಇಂಡಿಯಾ ಅಮೇರಿಕ ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ಅಪ್ಲೋಡ್ ಮಾಡಿದ್ದು, ಬ್ಯಾಚುಲರ್ ಪಾರ್ಟಿ, ಮದುವೆ ಪಾರ್ಟಿ, ಪ್ರತಿಯೊಂದರ ಫೋಟೋಗಳನ್ನು ನಟಿ ಅಪ್ ಲೋಡ್ ಮಾಡಿದ್ದಾರೆ. ಹಾಗೂ ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ಕ್ಷಣ ಎಂದು ಬರೆದುಕೊಂಡಿದ್ದಾರೆ.

%d bloggers like this: