ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳುತ್ತಿದ್ದಾರೆ ಮೂಗುತಿ ಸುಂದರಿ

ಹೈದರಾಬಾದ್ ಮೂಲದ ಸಾನಿಯಾ ಮಿರ್ಜಾ, 2003ರಿಂದ ತಮ್ಮ ಪ್ರೊಫೆಷನಲ್ ಟೆನಿಸ್ ಆಟವನ್ನು ಶುರುಮಾಡಿದ ಸಾನಿಯಾ ಮಿರ್ಜಾ ಅವರು ಇದುವರೆಗೂ ಒಟ್ಟು ಆರು ಗ್ರಾಂನ್ ಸ್ಲಾಂ ಗಳನ್ನು ಜಯಿಸಿದ್ದಾರೆ. ಅದರಲ್ಲಿ ಮೂರು ಗ್ರಾಂನ್ ಸ್ಲಾಂ ಗಳು ಮಹಿಳಾ ಡಬಲ್ಸ್ ವಿಭಾಗದಲ್ಲಿ ದೊರಕಿದ್ದರೆ, ಮತ್ತೆ ಮೂರು ಗ್ರಾಂನ್ ಸ್ಲಾಂ ಗಳು ಮಿಶ್ರ ಡಬಲ್ಸ್ ವಿಭಾಗದಲ್ಲಿ ದೊರಕಿದೆ. ಸಾನಿಯಾ ಮಿರ್ಜಾ ಅವರು ಭಾರತ ಕಂಡ ಅತ್ಯಂತ ಯಶಸ್ವಿ ಮಹಿಳಾ ಟೆನಿಸ್ ಆಟಗಾರ್ತಿ ಎಂದರೆ ತಪ್ಪಾಗಲಾರದು. ಮೂಗುತಿ ಸುಂದರಿ ಎಂದೇ ಖ್ಯಾತಿಯಾಗಿರುವ ಸಾನಿಯಾ ಮಿರ್ಜಾ ಅವರು ತಮ್ಮ ಟೆನಿಸ್ ವೃತ್ತಿ ಬದುಕಿಗೆ ವಿದಾಯ ಹೇಳಲು ಸಜ್ಜಾಗಿದ್ದಾರೆ. ಹೌದು 2022ನೇ ಸಾಲಿನ WTA ಟೆನಿಸ್ ಸೀಸನ್ ಸಾನಿಯಾ ಮಿರ್ಜಾ ಅವರ ಪಾಲಿನ ಕಟ್ಟಕಡೆಯ ಟೆನಿಸ್ ವರ್ಷವಾಗಲಿದೆ. 2022ರ ಆವೃತ್ತಿಯ ಬಳಿಕ ಟೆನ್ನಿಸ್ಗೆ ವಿದಾಯ ಪಡೆಯುವುದಾಗಿ ಅವರು ತಿಳಿಸಿದ್ದಾರೆ.

ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಗ್ರಾಂಡ್ ಸ್ಲಾಮ್ ನಲ್ಲಿ ಪಾಲ್ಗೊಂಡಿರುವ ಸಾನಿಯಾ ಮಿರ್ಜಾ ಅವರು ಉಕ್ರೆನ್ ನ ನಾಡಿಯಾ ಕಿಚೋನಾಕ್ ಜೊತೆಯಾಗಿ ಕಣಕ್ಕಿಳಿದಿದ್ದರು. ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್ ನಲ್ಲಿ ಮೊದಲ ಸುತ್ತಿನಲ್ಲಿಯೇ ನಾಡಿಯಾ ವಿರುದ್ಧ ಸೋಲು ಕಂಡ ಸಾನಿಯಾ ಮಿರ್ಜಾ, ಜನೆವರಿ 20ರಂದು ಮಿಶ್ರ ಡಬಲ್ಸ್ ನಲ್ಲಿ ಯುಎಸ್ಎ ಆಟಗಾರ ರಾಜೀವ್ ರಾಮ್ ಜೊತೆಗೂಡಿ ಕಣಕ್ಕಿಳಿಯಲಿದ್ದಾರೆ. ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್ ನಲ್ಲಿ ಸೋಲು ಕಂಡ ಬೆನ್ನಲ್ಲೇ ಸಾನಿಯಾ ಮಿರ್ಜಾ ಅವರು ತಮ್ಮ ಟೆನ್ನಿಸ್ ನಿಂದ ನಿವೃತ್ತಿಯಾಗುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಅಂತೆಯೇ ತಮ್ಮ ವೃತ್ತಿ ಬದುಕಿನ ವಿದಾಯದ ತೀರ್ಮಾನಕ್ಕೆ ಹಲವು ಕಾರಣಗಳನ್ನು ನೀಡಿದ್ದಾರೆ. ಈ ಹಿಂದೆ ತಮ್ಮ ಮೊನಕಾಲು ನೋವಿನಿಂದ ಬ್ರೇಕ್ ತೆಗೆದುಕೊಂಡಿದ್ದ ಸಾನಿಯಾ ಅವರು ಇದೀಗ ತಮ್ಮ ಮೊನಕಾಲು ನೋವು ಅವರನ್ನು ಸಾಕಷ್ಟು ಬಾಧಿಸುತ್ತಿದೆ ಎಂದು ಹೇಳಿದ್ದಾರೆ.

ವಯಸ್ಸಾದಂತೆ ನನ್ನ ದೇಹವೂ ಕ್ಷೀಣಿಸುತ್ತಿರುವ ಕಾರಣ ಪ್ರತಿಬಾರಿಯೂ ಸ್ಪೂರ್ತಿಯಿಂದ ಕಣಕ್ಕಿಳಿಯಲು ಮೊದಲಿನಂತೆ ಸಾಧ್ಯವಾಗುತ್ತಿಲ್ಲ. ನಾನು ಚೇತರಿಸಿಕೊಳ್ಳಲು ಸಾಕಷ್ಟು ಸಮಯವನ್ನು ತೆಗೆದುಕೊಂಡೆ ಆದರೆ ಚೇತರಿಸಿಕೊಳ್ಳಲು ಸಾಕಷ್ಟು ಸಮಯಬೇಕಾಗಬಹುದು ಎಂದು ಎನಿಸುತ್ತಿದೆ ಎಂದು ಸಾನಿಯಾ ಹೇಳಿದ್ದಾರೆ. ಅಲ್ಲದೆ ನನ್ನ ಮೂರು ವರ್ಷದ ಮಗುವಿನ ಜೊತೆಗೆ ಹಲವು ಕಡೆ ಟೂರ್ನಿಯಲ್ಲಿ ಪಾಲ್ಗೊಳ್ಳಲು ಪ್ರಯಾಣ ಬೆಳೆಸುವುದು ಸದ್ಯಕ್ಕೆ ಅಷ್ಟು ಸುರಕ್ಷಿತವಲ್ಲ ಎಂಬುದು ನನ್ನ ಅಭಿಪ್ರಾಯ. ಇವೆಲ್ಲವುಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ನಾನು ಮೊದಲೇ ಹೇಳಿದಂತೆ ಎಲ್ಲಿಯವರೆಗೆ ನಾನು ಟೆನಿಸ್ ಎಂಜಾಯ್ ಮಾಡಲು ಸಾಧ್ಯವೋ ಅಲ್ಲಿಯವರೆಗೆ ಮಾತ್ರ ನಾನು ಟೆನ್ನಿಸ್ ಆಡಬಲ್ಲೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನಾನು ದೀರ್ಘಕಾಲದವರೆಗೆ ಟೆನ್ನಿಸ್ ಕೋರ್ಟ್ ನಲ್ಲಿ ಎಂಜಾಯ್ ಮಾಡಲು ಆಗುತ್ತಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

%d bloggers like this: