ತಮ್ಮದೇ ಬ್ಯೂಟಿ ಪ್ರಾಡಕ್ಟ್ ಶುರು ಮಾಡಿದ ದಕ್ಷಿಣ ಭಾರತದ ಸ್ಟಾರ್ ನಟಿ, ಬ್ಯೂಟಿ ಉದ್ಯಮದತ್ತ ನಟಿ

ಇತ್ತೀಚೆಗೆ ಸ್ಯಾಂಡಲ್ ವುಡ್ ಸ್ಟಾರ್ಸ್ಸ್ ಸೇರಿದಂತೆ ಅನೇಕ ಸಿನಿಮಾ ಸೆಲೆಬ್ರಿಟಿಗಳು ತಮ್ಮ ನಟನಾ ವೃತ್ತಿಯ ಜೊತೆಗೆ ಇತರೆ ಕ್ಷೇತ್ರಗಳತ್ತಲೂ ಕೂಡ ಗಮನ ಹರಿಸುತ್ತಿದ್ದಾರೆ. ಬಾಲಿವುಡ್ ನಲ್ಲಿ ಒಂದಷ್ಟು ಮಂದಿ ಪ್ರತಿಷ್ಟಿತ ಏರಿಯಾಗಳಲ್ಲಿ ಪ್ರಾಪರ್ಟಿ ಖರೀದಿ ಮಾಡಿ ಸುದ್ದಿಯಾದರೆ, ಕನ್ನಡದ ಒಂದಷ್ಟು ಕಲಾವಿದರು ದುಬಾರಿ ಬೆಲೆಯ ಐಷಾರಾಮಿ ಕಾರ್ ಕೊಳ್ಳುವ ಮೂಲಕ ಸುದ್ದಿಯಾಗುತ್ತಿದ್ದಾರೆ. ಅದರಂತೆ ಇದೀಗ ತಮಿಳು ಚಿತ್ರರಂಗದ ಜನಪ್ರಿಯ ನಟಿ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಟಿ ನಯನಾ ತಾರಾ ಕೂಡ ಸುದ್ದಿಯಾಗಿದ್ದಾರೆ. ಆಗಂತ ನಟಿ ನಯನ ತಾರಾ ಅವರು ಯಾವುದೇ ಪ್ರಾಪರ್ಟಿ ಅಥವಾ ಕಾರ್ ಕೊಳ್ಳುವುದರ ಮೂಲಕ ಸುದ್ದಿಯಾಗುತ್ತಿಲ್ಲ.

ನಟಿ ನಯನಾತಾರ ದಕ್ಷಿಣ ಭಾರತದ ಬಹು ಬೇಡಿಕೆಯ ನಟಿ. ಅವರ ಕೈಯಲ್ಲಿ ಇಂದಿಗೂ ಕೂಡ ಅನೇಕ ಸಿನಿಮಾಗಳಿವೆ. ಇತ್ತೀಚೆಗೆ ಸೂಪರ್ ಸ್ಟಾರ್ ರಜಿನಿಕಾಂತ್ ಅವರೊಟ್ಟಿಗೆ ನಟಿಸಿದ್ದ ಅಣ್ಣಾತೆ ಸಿನಿಮಾ ರಿಲೀಸ್ ಆಗಿ ಸೂಪರ್ ಡೂಪರ್ ಹಿಟ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು. ನಟಿ ನಯನತಾರಾ ಅವರು ಸದ್ಯಕ್ಕೆ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ಇದೇ ಮೊದಲ ಬಾರಿಗೆ ಹಿಂದಿಯಲ್ಲಿ ನಿರ್ದೇಶನ ಮಾಡುತ್ತಿರುವ ಲಯನ್ ಎಂಬ ಚಿತ್ರದಲ್ಲಿ ನಟಿ ನಯನ ತಾರಾ ಬಾಲಿವುಡ್ ಬಾದ್-ಶಾ ಶಾರುಖ್ ಖಾನ್ ಅವರೊಟ್ಟಿಗೆ ನಟಿಸುತ್ತಿದ್ದಾರೆ. ಇದರ ಜೊತೆಗೆ ಪೃಥ್ವಿರಾಜ್ ಸುಕುಮಾರನ್ ಅವರ ಜೊತೆ ಗೋಲ್ಡ್ ಎಂಬ ಸಿನಿಮಾ, ಕೂಳಂಗಳ್ ಮತ್ತು ತ್ರಿಷಾ ಎಂಬ ತಮಿಳು ಚಿತ್ರ, ಮೆಗಾಸ್ಟಾರ್ ಚಿರಂಜೀವಿ ಅವರೊಟ್ಟಿಗೆ ಗಾಡ್ ಫಾದರ್ ಎಂಬ ಚಿತ್ರ.

ಮತ್ತು ಮಲೆಯಾಳಂನ ಪಾಟು ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿ ನಯನ ತಾರಾ ನಟಿಸುತ್ತಿದ್ದಾರೆ. ಜೊತೆಗೆ ನಯನ ತಾರಾ ಕೇವಲ ನಟನೆ ಮಾತ್ರ ಅಲ್ಲ ತಮ್ಮದೇಯಾದ ಒಂದು ನಿರ್ಮಾಣ ಸಂಸ್ಥೆಯೊಂದನ್ನ ಕೂಡ ಹೊಂದಿದ್ದಾರೆ. ಇಷ್ಟೆಲ್ಲಾ ಬಿಝಿ಼ ಇರುವ ನಟಿ ನಯನತಾರಾ ಇದೀಗ ದಿ ಲಿಪ್ ಬಾಮ್ ಎಂಬ ಸೌಂದರ್ಯ ವರ್ಧಕ ಉದ್ಯಮ ಆರಂಭಿಸಿದ್ದಾರೆ. ಪ್ರಸಿದ್ದ ಸೌಂದರ್ಯ ತಜ್ಞೆ ಆಗಿರುವ ರೆನಿತಾ ರಾಜನ್ ಅವರ ಜೊತೆಗೂಡಿ ಈ ದಿ ಲಿಪ್ ಬಾಮ್ ಎಂಬ ಸೌಂದರ್ಯ ವರ್ಧಕ ಉದ್ಯಮಕ್ಕೆ ಬಂಡವಾಳ ಹೂಡಿಕೆ ಮಾಡಿದ್ದಾರೆ. ಈ ದಿ ಲಿಪ್ ಬಾಮ್ ನಲ್ಲಿ ಅನೇಕ ಬ್ಯೂಟಿ ಪ್ರೊಡಕ್ಟ್ ಗಳಿದ್ದು, ನಟಿ ನಯನತಾರಾ ಅವರೇ ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ.

ಇನ್ನು ಈ ತಮ್ಮ ದಿ ಲಿಪ್ ಬಾಮ್ ಬ್ಯೂಟಿ ಪ್ರಾಡಕ್ಟ್ ಗಳ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ನಟಿ ನರನತಾರಾ ಅವರು ಸ್ಕಿನ್ ಕೇರ್ ವಿಚಾರದಲ್ಲಿ ನಾನು ಯಾವುದೇ ಕಾರಣಕ್ಕೂ ರಾಜಿ ಆಗುವುದಿಲ್ಲ. ನಾನು ವೈಯಕ್ತಿಕವಾಗಿ ಯಾವ ಕಂಪನಿಯ ಬ್ಯೂಟಿ ಪ್ರಾಡಕ್ಟ್ ಗಳನ್ನ ಉಪಯೋಗಿಸುತ್ತೇನೆ ಮತ್ತು ಅವುಗಳ ಗುಣಮಟ್ಟ ಸುರಕ್ಷತೆಯಲ್ಲಿ ನಂಬಿಕೆ ವಿಶ್ವಾಸ ಇದ್ದರೆ ಮಾತ್ರ ಅದನ್ನ ನಾನು ಸಲಹೆ ಮಾಡುತ್ತೇನೆ. ಇಲ್ಲವಾದಲ್ಲಿ ನಾನು ಮಾಡುವುದಿಲ್ಲ. ಈ ಲಿಪ್ ಬಾಮ್ ನಲ್ಲಿ ನಿಮಗೆ ಬೇಕಾದ ಎಲ್ಲಾ ಅಂಶಗಳು ಇದೆ. ನಿಮ್ಮ ನೈಸರ್ಗಿಕ ಸ್ನೇಹಿ ಆಗಿರುವ ದಿ ಲಿಪ್ ಬಾಮ್ ನಿಮ್ಮ ತುಟಿಗಳ ಸುರಕ್ಷತೆಗೆ ಇದು ಉತ್ತಮವಾಗಿದೆ ತಿಳಿಸಿದ್ದಾರೆ.

%d bloggers like this: