ತಮ್ಮದೇ ದೇಶಕ್ಕಿಂತ ಮೊದಲು ಭಾರತದಲ್ಲಿ ಬಿಡುಗಡೆಯಾಗುತ್ತಿದೆ ವಿಶ್ವದ ಬಹುನಿರೀಕ್ಷಿತ ಸಿನಿಮಾ

ವಿಶ್ವ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ಆಗಿರುವ ಸ್ಪೈಡರ್ ಮ್ಯಾನ್ ಸಿನಿಮಾ ಯೌಟ್ಯೂಬ್ ಅಲ್ಲಿ ಒಂದೇ ದಿನದಲ್ಲೇ ಬರೋಬ್ಬರಿ 35.5 ಕೋಟಿಗೂ ಅಧಿಕ ವಿಕ್ಷಣೆ ಪಡೆದು ದಾಖಲೆ ಮಾಡಿ ಜಗತ್ತಿನಾದ್ಯಂತ ಭಾರಿ ಸುದ್ದಿಯಾಗಿತ್ತು. ಈ ಸೂಪರ್ ಸ್ಪೈಡರ್ ಮ್ಯಾನ್ ಸರಣಿಯ ನೋವೇ ಹೋಮ್ ಸಿನಿಮಾದ ಟ್ರೇಲರ್ ನೋಡಿದ ಸಿನಿ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಅಭೂತಪೂರ್ವ ಪ್ರತಿಕ್ರಿಯೆಗೆ ಚಿತ್ರತಂಡ ಮತ್ತಷ್ಟು ಉತ್ಸುಕರಾಗಿ ವಿಶ್ವದಾದ್ಯಂತ ಅತಿ ಹೆಚ್ಚು ಸಿನಿಮಾ ಥಿಯೇಟರ್ ಗಳಲ್ಲಿ ರಿಲೀಸ್ ಮಾಡಲು ಸಿದ್ದವಾಗಿದೆ. ಇದೀಗ ಈ ಸ್ಪೈಡರ್ ಮ್ಯಾನ್ ಚಿತ್ರದಿಂದ ಹೊಸದೊಂದು ಸುದ್ದಿ ಹೊರ ಬಿದ್ದಿದೆ.

ಹೌದು ಮಾರ್ವೆಲ್ ಸ್ಟುಡಿಯೋಸ್, ಕೊಲಂಬಿಯಾ ಪಿಕ್ಚರ್ಸ್, ಪಾಸ್ಕಲ್ ಪಿಕ್ಚರ್ಸ್ ಸಂಸ್ಥೆಯಡಿಯಲ್ಲಿ ಕೆವಿನ್ ಅವರ ನಿರ್ಮಾಣದಲ್ಲಿ ಜಾನ್ ವಾಟ್ಸ್ ಅವರ ಸಾರಥ್ಯದಲ್ಲಿ ಮೂಡಿ ಬಂದಿರುವ ಈ ಸ್ಪೈಡರ್ ಮ್ಯಾನ್ ಸಿನಿಮಾ ಜಗತ್ತಿನಾದ್ಯಂತ ಡಿಸೆಂಬರ್ 17ರಂದು ಬಿಡುಗಡೆ ಆಗುತ್ತಿದೆ. ಅದಕ್ಕೂ ಒಂದು ದಿನದ ಮುಂಚೆ ಅಂದರೆ ಡಿಸೆಂಬರ್ 16ರಂದು ಭಾರತದಲ್ಲಿ ಸ್ಪೈಡರ್ ಮ್ಯಾನ್ ಸಿನಿಮಾ ಬಿಡುಗಡೆ ಆಗಲಿದೆ ಎಂದು ಭಾರತದಲ್ಲಿ ಡಿಸ್ಟ್ರಿಬ್ಯೂಶನ್ ರೈಟ್ಸ್ ಪಡೆದುಕೊಂಡಿರುವ ಸೋನಿ ಪಿಕ್ಚರ್ಸ್ ಸಂಸ್ಥೆ ಮಾಹಿತಿ ನೀಡಿದೆ. ಈ ಸ್ಪೈಡರ್ ಮ್ಯಾನ್ ಸಿನಿಮಾಗೆ ಮೈಕಲ್ ಜಿಯಾ ಚಿನೋ ಮ್ಯೂಸಿಕ್ ನೀಡಿದ್ದು, ಟಿಮ್ ಹಾಲೆಂಡ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಭಾರತದಲ್ಲಿ ಸ್ಪೈಡರ್ ಮ್ಯಾನ್ ಸಿನಿಮಾ ಇಂಗ್ಲಿಷ್ ಮಾತ್ರವಲ್ಲದೆ ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳ ಅವತರಣೆಕೆಯಲ್ಲಿ ರಿಲೀಸ್ ಆಗುತ್ತಿದೆ. ಒಟ್ಟಾರೆಯಾಗಿ ಇಂಗ್ಲೀಷ್ ಸಿನಿಮಾವೊಂದು ತಮ್ಮ ದೇಶದಲ್ಲಿ ಮೊದಲು ಬಿಡುಗಡೆಯಾಗದೇ ಹೊರ ದೇಶಗಳಲ್ಲಿ ಪ್ರಥಮವಾಗಿ ರಿಲೀಸ್ ಮಾಡುತ್ತಿರುವ ಈ ಸೂಪರ್ ಸ್ಪೈಡರ್ ಮ್ಯಾನ್ ಸಿನಿಮಾ ತಂಡದ ಆಲೋಚನೆ ವಿಭಿನ್ನವಾಗಿದೆ ಎನ್ನಬಹುದಾದರು ಕೂಡ ಇದು ವ್ಯಾಪಾರದ ದೃಷ್ಟಿಕೋನದಲ್ಲಿ ನೋಡುವುದಾದರೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಗೆದ್ದರೆ ಇನ್ನುಳಿದಂತೆ ಎಲ್ಲಾ ದೇಶಗಳಲ್ಲಿಯೂ ಕೂಡ ಚಿತ್ರವನ್ನು ಗೆಲ್ಲಿಸಿಕೊಳ್ಳಬಹುದು, ಹೆಚ್ಚು ಲಾಭ ಮಾಡಿಕೊಳ್ಳಬಹುದು ಎಂಬುದು ನಿರ್ಮಾಣ ವಿತರಕರ ಉದ್ದೇಶವಾಗಿದೆ ಎಂದು ಸಿನಿಮಾ ಪಂಡಿತರ ಅಭಿಪ್ರಾಯವಾಗಿದೆ.

%d bloggers like this: