ತಮ್ಮದೇ ಸ್ವಂತ ಹೊಸ ನಿರ್ಮಾಣ ಸಂಸ್ಥೆ ಶುರು ಮಾಡಿದ ‘ಅಧೀರ’

ಬಾಲಿವುಡ್ ನ ಮುನ್ನಾಭಾಯಿ ಎಂದೇ ಖ್ಯಾತಿಯಾಗಿರುವ ನಟ ಸಂಜಯ್ ದತ್ ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿರುವ ನಟ. ಹೀರೋ ಆಗಿ ತಮ್ಮ ಸಿನಿಪಯಣವನ್ನು ಶುರು ಮಾಡಿದ ಈ ನಟ, ಇದುವರೆಗೆ ಎಲ್ಲ ರೀತಿಯ ಪಾತ್ರಗಳಿಗೆ ಜೀವ ನೀಡಿದ್ದಾರೆ. ತಮ್ಮ ಸಿನಿ ಪಯಣವನ್ನು ಹೀರೋಯಿಸಂನಿಂದ ಶುರು ಮಾಡಿ ನಂತರ ಹೀರೋಯಿಕ್ ರೋಲ್ ಮಾಡಿ, ಲವ್, ಮಾಸ್ ಚಿತ್ರಗಳ ಮೂಲಕ ನಮ್ಮೆಲ್ಲರನ್ನೂ ಸಂಜಯ್ ರಂಜಿಸಿದ್ದಾರೆ. ನಮ್ಮ ಕನ್ನಡದ ಕೆಜಿಎಫ್ ಚಾಪ್ಟರ್2 ನಲ್ಲೂ ಅಧೀರನಾಗಿ, ಖಡಕ್ ವಿಲ್ಲನ್ ಆಗಿ ಸಂಜಯ್ ಮಿಂಚಿದ್ದಾರೆ.

ಇದೀಗ ಗೋಲ್ಡನ್ ಏಜ್ ಆಫ್ ಹೀರೋಯಿಸಮ್ ನ ತೆರೆಮೇಲೆ ತರಲು ಹೊಸ ನಿರ್ಮಾಣ ಸಂಸ್ಥೆಯೊಂದನ್ನು ಸಂಜಯ್ ತೆಗೆದಿದ್ದಾರೆ. ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುತ್ತಿದ್ದಂತೆ ಅನೇಕ ನಟ ನಟಿಯರು ತಮ್ಮದೇಯಾದ ನಿರ್ಮಾಣ ಸಂಸ್ಥೆಯನ್ನು ತೆಗೆದು ಹೊಸ ಕಲಾವಿದರಿಗೆ ಅವಕಾಶ ನೀಡುತ್ತಾರೆ. ನಟ ನಟಿಯಾಗಿದ್ದವರು ನಿರ್ಮಾಪಕರಾಗುತ್ತಿರುವುದು ಸರ್ವೇಸಾಮಾನ್ಯ. ಈಗ ಅದೇ ಹಾದಿಯಲ್ಲಿ ಬಾಲಿವುಡ್ ನಟ ಸಂಜಯ್ ದತ್ ಸಾಗುತ್ತಿದ್ದಾರೆ. ಹೌದು ಸಂಜಯ್ ದತ್ ತಮ್ಮ ನಿರ್ಮಾಣ ಸಂಸ್ಥೆಗೆ ತ್ರೀ ಡೈಮೆನ್ಶನ್ ಮೋಷನ್ ಪಿಕ್ಚರ್ ಎಂದು ಹೆಸರಿಟ್ಟಿದ್ದಾರೆ.

ಈಗಾಗಲೇ ಇವರ ನಿರ್ಮಾಣ ಸಂಸ್ಥೆಯಿಂದ ಚಿತ್ರವೊಂದು ರೆಡಿಯಾಗುತ್ತಿದೆ. ಈ ಸಂಸ್ಥೆಯಿಂದ ರೆಡಿಯಾಗುತ್ತಿರುವ ಮೊದಲ ಸಿನಿಮಾದ ಹೆಸರನ್ನು ಕೂಡ ರಿವೀಲ್ ಮಾಡಲಾಗಿದೆ. ಸಿದ್ಧಾರ್ಥ ಸಜದೇವ್ ಅವರು ಆಕ್ಷನ್ ಕಟ್ ಹೇಳುತ್ತಿರುವ ದಿ ವರ್ಜಿನ್ ಟ್ರೀ ಸಿನಿಮಾವನ್ನು ಸಂಜಯ್ ಅವರ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿದೆ. ದಿ ವರ್ಜಿನ್ ಟ್ರೀ ಚಿತ್ರದ ಮೂಲಕ ನಾಲ್ಕು ಹೊಸ ಕಲಾವಿದರನ್ನು ಚಿತ್ರರಂಗಕ್ಕೆ ಸಂಜಯ್ ದತ್ ಬರ ಮಾಡಿಕೊಂಡಂತಾಗಿದೆ. ನಿರ್ಮಾಣದ ಜೊತೆ ಜೊತೆಗೆ ಸಂಜಯ್ ಅವರು ತಮ್ಮ ಸಿನಿಮಾ ಕೆಲಸಗಳಲ್ಲಿ ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

%d bloggers like this: