ತಮ್ಮದೇ ಸ್ವಂತ ಓಟಿಟಿ ಕಂಪನಿ ಶುರು ಮಾಡಲು ಸಜ್ಜಾದ ಶಾರುಖ್ ಖಾನ್ ಅವರು

ಹಿಂದೆ ಸಿನಿಮಾಗಳು ಥಿಯೇಟರ್ ಗಳಲ್ಲಿ ಮಾತ್ರ ರಿಲೀಸ್ ಆಗುತ್ತಿದ್ದವು. ಆದರೆ ಇದೀಗ ಒಟಿಟಿ ಫ್ಲಾಟ್ ಫಾರ್ಮಗಳದ್ದೇ ಕಾರುಬಾರು. ಹೊಸತಾಗಿ ರಿಲೀಸ್ ಆಗುವ ಎಲ್ಲ ಚಿತ್ರಗಳು ಒಟಿಟಿ ಫ್ಲಾಟ್ ಫಾರ್ಮ್ ಗಳಲ್ಲೂ ಲಭ್ಯವಿರುತ್ತವೆ. ಹೊಸತಾಗಿ ರಿಲೀಸ್ ಆಗುವ ಎಷ್ಟೋ ಸಿನಿಮಾಗಳನ್ನು ಡಿಜಿಟಲ್ ಹಕ್ಕು ಪಡೆಯುವುದರ ಮೂಲಕ ಕೋಟಿ ಕೋಟಿ ರೂಪಾಯಿ ಕೊಟ್ಟು ಚಿತ್ರಗಳನ್ನು ಕಂಡುಕೊಳ್ಳಲಾಗುತ್ತದೆ. ನಂತರ ಅವುಗಳನ್ನು ಒಟಿಟಿ ಗಳಲ್ಲಿ ಹಾಕುವುದರ ಮೂಲಕ ಹಣಮಾಡಿಕೊಳ್ಳುತ್ತಾರೆ. ಸದ್ಯ ಒಟಿಟಿಗಳ ಬಗ್ಗೆ ಮಾತನಾಡಲು ಕಾರಣವಿದೆ. ಬಾಲಿವುಡ್ ಕಿಂಗ್ ಖಾನ್ ನಟ ಶಾರುಖ್ ಯಾರೂ ಊಹಿಸಲಾರದಂತಹ ಸಾಹಸಕ್ಕೆ ಕೈಹಾಕಿದ್ದಾರೆ. ಸಾಮಾನ್ಯವಾಗಿ ನಟರು ನಿರ್ಮಾಪಕರಾಗುತ್ತಾರೆ. ನಟರಾಗಿ ತಾವು ಗಳಿಸಿದ ದುಡ್ಡನ್ನು ನಿರ್ಮಾಣಕ್ಕಾಗಿ ಸುರಿದು ಲಾಭ ಗಳಿಸಿಕೊಳ್ಳುತ್ತಾರೆ.

ಆದರೆ ನಟ ಶಾರುಖ್ ಖಾನ್ ವಿಭಿನ್ನ ರೀತಿಯಲ್ಲಿ ಇನ್ವೆಸ್ಟ್ ಮಾಡುತ್ತಿದ್ದಾರೆ. ನಟ ಶಾರುಖ್ ಖಾನ್ ತಮ್ಮದೇ ಸ್ವಂತ ಒಟಿಟಿಯನ್ನು ಆರಂಬಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಹೌದು ಸದ್ಯಕ್ಕೆ ನಟ ಶಾರುಖ್ ಖಾನ್ ರವರ ಯಾವ ಸಿನಿಮಾಗಳು ಕೂಡ ರಿಲೀಸ್ ಆಗಿಲ್ಲ. ಶಾರುಖ್ ಖಾನ್ ಅವರನ್ನು ದೊಡ್ಡ ಪರದೆಯ ಮೇಲೆ ನೋಡದೆ ನಾಲ್ಕೈದು ವರ್ಷಗಳೆ ಆಗಿವೆ. ಸದ್ಯಕ್ಕೆ ಶಾರುಖ್ ಖಾನ್ ಅವರು ಜಾಹೀರಾತುಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಶಾರುಖಾನ್ ರೆಡ್ ಚಿಲ್ಲಿ ನಿರ್ಮಾಣ ಸಂಸ್ಥೆಯ ಮೂಲಕ ಅನೇಕ ಸಿನಿಮಾಗಳನ್ನು ಮತ್ತು ರಿಯಾಲಿಟಿ ಶೋ ಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇವೆಲ್ಲದರ ಜೊತೆಗೆ ಒಟಿಟಿಗೆ ಎಂಟ್ರಿ ಕೊಡುವ ಮೂಲಕ ಹೊಸ ದಾಖಲೆಯೊಂದನ್ನು ಬರೆಯಲು ಸಜ್ಜಾಗಿದ್ದಾರೆ.

ಏಕೆಂದರೆ ಇದುವರೆಗೆ ಯಾವ ನಟನೂ ಸಹ ಇಂತಹ ಸಾಹಸಕ್ಕೆ ಕೈ ಹಾಕಿಲ್ಲ. ಈಗಾಗಲೇ ಅಮೆಜಾನ್ ಪ್ರೈಮ್, ಡಿಸ್ನಿ ಪ್ಲಸ್ ಹಾಟ್ಸ್ಟಾರ್, ಸೋನಿ ಲಿವ್, ಜಿ 5 ಸೇರಿದಂತೆ ದೊಡ್ಡ ಒಟಿಟಿಗಳು ಪ್ರೇಕ್ಷಕರ ಗಮನ ಸೆಳೆದಿವೆ. ಈ ನಡುವೆ ಶಾರುಖ್ ಖಾನ್ ಅವರ ಸ್ವಂತ ಒಟಿಟಿ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಅಂದಹಾಗೆ ಶಾರುಖ್ ಖಾನ್ ಅವರು ಒಟಿಟಿಗೆ ಎಸ್ ಆರ್ ಕೆ ಪ್ಲಸ್ ಎಂದು ಹೆಸರಿಟ್ಟಿದ್ದಾರೆ. ಇತ್ತೀಚಿಗೆ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಿಂದ ಶಾರುಖ್ ಅವರು ಸಾಕಷ್ಟು ಮುಜುಗರವನ್ನು ಅನುಭವಿಸಿದ್ದರು. ಈ ಪ್ರಕರಣದ ಬಳಿಕ ಸಾಮಾಜಿಕ ಮಾಧ್ಯಮಗಳಿಂದ ಸ್ವಲ್ಪ ದೂರವೇ ಉಳಿದಿದ್ದ ಶಾರುಖ್ ಅವರು ಸಹಜ ಸ್ಥಿತಿಗೆ ಮರಳುವ ಮೂಲಕ ಹೊಸ ಸುದ್ದಿಯೊಂದನ್ನು ತಮ್ಮ ಅಭಿಮಾನಿಗಳಿಗೆ ನೀಡಿದ್ದಾರೆ.

ಈ ನಡುವೆ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಕೂಡ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬುತ್ತಿದೆ. ಆರ್ಯನ್ ಖಾನ್ ಅವರು ನಟರಾಗಿ ಅಲ್ಲದೆ ನಿರ್ದೇಶಕರಾಗಿ ಮತ್ತು ಸ್ಕ್ರಿಪ್ಟ್ ಬರಹಗಾರರಾಗಿ ಸಿನಿಮಾರಂಗಕ್ಕೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಆದರೆ ಇದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಇದುವರೆಗೆ ಶಾರುಖಾನ್ ನೀಡಿಲ್ಲ. ಶಾರುಖ್ ಖಾನ್ ತಮ್ಮ ಮಗ ಹಾಗೂ ಮಗಳನ್ನು ಬಣ್ಣದಲೋಕಕ್ಕೆ ಕರೆತರುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತದೆ.

ನಟರಾಗಿ, ನಿರ್ಮಾಪಕರಾಗಿ ಯಶಸ್ಸುಕಂಡ ಶಾರುಖ್ ಖಾನ್ ಅವರು ತಮ್ಮದೇ ಸ್ವಂತ ಒಟಿಟಿ ಪ್ಲಾಟ್ಫಾರಂ ಮೂಲಕ ಯಶಸ್ಸು ಕಾಣುತ್ತಾರಾ ಎಂಬುದನ್ನು ಕಾದುನೋಡಬೇಕು. ಶಾರುಖ್ ಖಾನ್ ಅವರ ಈ ಹೊಸ ಪ್ರಯತ್ನಕ್ಕೆ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಹೊಸ ಒಟಿಟಿ ಎಸ್ ಆರ್ ಕೆ ಪ್ಲಸ್ ಗೆ ಅಭಿನಂದನೆಗಳು, ಈ ಬಗ್ಗೆ ತುಂಬಾ ಎಗ್ಸೈಟ್ ಆಗಿದ್ದೇನೆ ಎಂದು ಹೇಳಿದ್ದಾರೆ. ಸಲ್ಮಾನ್ ಖಾನ್ ಮಾತ್ರವಲ್ಲದೆ ನಿರ್ದೇಶಕ ಕರಣ್ ಜೋಹರ್, ಅನುರಾಗ ಕಶ್ಯಪ್ ಸೇರಿದಂತೆ ಅನೇಕ ಗಣ್ಯರು ಶಾರುಖಾನ್ ಅವರಿಗೆ ಶುಭ ಹಾರೈಸಿದ್ದಾರೆ.

%d bloggers like this: