ತಮ್ಮ ಮಗಳಿಗೆ ಮುದ್ದಾದ ಹೆಸರಿಟ್ಟ ಕನ್ನಡ ಕಿರುತೆರೆಯ ಹೆಸರಾಂತ ದಂಪತಿ

ನಮ್ಮ ಕಿರುತೆರೆಯ ಕ್ಯೂಟ್ ಜೋಡಿ ಎಂದರೆ ಅಮೃತಾ ರಾಮಮೂರ್ತಿ ಮತ್ತು ರಾಘವೇಂದ್ರ. ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸಿದ್ದ ಇವರಿಬ್ಬರು, ರೀಲ್ ಲೈಫ್ ನಲ್ಲಿ ಮಾತ್ರವಲ್ಲದೆ, ರಿಯಲ್ ಲೈಫ್ ನಲ್ಲೂ ಮಿಸ್ಟರ್ ಅಂಡ್ ಮಿಸ್ಸೆಸ್ ಆದರು. 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ ಕಿರುತೆರೆಯಲ್ಲಿ ಒಂದಾದಮೇಲೊಂದು ಹಿಟ್ ಧಾರಾವಾಹಿಗಳನ್ನು ನೀಡಿದ್ದಾರೆ. ಇವರಿಬ್ಬರು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳ ಮೂಲಕ ಜನಮನ್ನಣೆಗಳಿಸಿ ಕೊಂಡಿದ್ದಾರೆ. ಕುಲವಧು ಧಾರಾವಾಹಿಯ ಮೂಲಕ ಎಲ್ಲರ ಮನೆ ಮಾತಾಗಿರುವ ಅಮೃತಾ ಅವರು ಸದ್ಯಕ್ಕೆ ಯಾವುದೇ ಧಾರಾವಾಹಿಯಲ್ಲಿ ಅಭಿನಯಿಸುತ್ತಿಲ್ಲ. ರಾಘವೇಂದ್ರ ಅವರು ಸದ್ಯಕ್ಕೆ ನಮ್ಮನೆ ಯುವರಾಣಿ ಸೀರಿಯಲ್ ನಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಈ ಕ್ಯೂಟ್ ಜೋಡಿ ತಮ್ಮದೇ ಆದ ಫ್ಯಾನ್ ಫಾಲ್ಲೋವರ್ಸ್ ಹೊಂದಿದ್ದಾರೆ. ಗುಂಗುರು ಕೂದಲಿನ ಚೆಲುವೆ ಅಮೃತಾ ರಾಮಮೂರ್ತಿ ಹೆಚ್ಚಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅಲ್ಲದೇ ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಹಲವು ತಿಂಗಳುಗಳ ಹಿಂದೆ ತಾವು ತಾಯಿಯಾಗುತ್ತಿರುವ ವಿಷಯವನ್ನು ಹಂಚಿಕೊಂಡಿದ್ದ ನಟಿ ಅಮೃತಾ ರಾಮಮೂರ್ತಿ ಅವರು, ತಮ್ಮ ಸೀಮಂತದ ಫೋಟೋಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಅಮೃತ ಅವರು ನಮ್ಮ ಮನೆಗೆ ದೇವತೆಯ ಆಗಮನವಾಗಿದೆ ಎಂದು ಇನ್ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದರು. ಇತ್ತೀಚೆಗೆ ತಮ್ಮ ಮಗಳಿಗೆ ನಾಮಕರಣ ಮಾಡಿರುವುದಾಗಿ ತಿಳಿಸಿರುವ ಇವರು, ಮಗಳ ಫೋಟೋವನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ಹಂಚಿಕೊಂಡಿದ್ದಾರೆ.

ಆದರೆ ಇದುವರೆಗೆ ತಮ್ಮ ಮಗಳ ಮುಖವನ್ನು ಮಾತ್ರ ತೋರಿಸಿಲ್ಲ. ಇತ್ತೀಚೆಗೆ ತಮ್ಮ ಮಗಳೊಂದಿಗೆ ಕ್ಲಿಕ್ಕಿಸಿರುವ ಫೋಟೋ ಒಂದನ್ನು ಹಂಚಿಕೊಂಡಿರುವ ಅಮೃತ ಅವರು ನಾವು ನಮ್ಮ ಮಗಳಿಗೆ ದೃತಿ ಎಂದು ನಾಮಕರಣ ಮಾಡಿದ್ದೇವೆ. ಅವಳನ್ನು ಪ್ರೀತಿಯಿಂದ ದೃತಿ ಪುಟ್ಟಿ ಎಂದು ಕರೆಯುತ್ತೇವೆ ಎಂದು ಬರೆದುಕೊಂಡಿದ್ದಾರೆ. ಇದಷ್ಟೇ ಅಲ್ಲದೆ ಈ ಸಮಯದಲ್ಲಿ ಪುನೀತ್ ರಾಜಕುಮಾರ್ ಅವರನ್ನು ಮಿಸ್ ಮಾಡಿಕೊಂಡ ಈ ನಟಿ, ಅಪ್ಪು ಸರ್ ನೀವು ನಮ್ಮ ಜೀವನದ ಬೆಳಕು ಎಂದು ಬರೆದುಕೊಂಡಿದ್ದಾರೆ. ಅಮೃತ ಅವರು ಮಗಳ ಹೆಸರಿನ ಅನಾವರಣದ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ಹಂಚಿಕೊಂಡಿದ್ದು, ವಿಡಿಯೋಗೆ ಪುನೀತ್ ರಾಜಕುಮಾರ್ ಅಭಿನಯದ ಸಿನಿಮಾದ ಸಾಂಗ್ ಮ್ಯೂಸಿಕ್ ನ್ನು ಬಳಸಿದ್ದಾರೆ.

%d bloggers like this: