ತಮ್ಮೂರಿನ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಸೈಕಲ್ ನೀಡಿದ ಖ್ಯಾತ ನಟ

ಕೋವಿಡ್ ಸಂಕಷ್ಟದ ಸಂಧರ್ಭದಲ್ಲಿ ಕೊರೋನ ಸೋಂಕಿಗೆ ಒಳಗಾದ ಅನೇಕ ಅಸಹಾಯಕ ಬಡ ಬಗ್ಗರ ಆಪತ್ಭಾಂಧವರಾಗಿ ನೆರವಾಗಿದ್ದ ಬಾಲಿವುಡ್ ಖ್ಯಾತ ನಟ ಸೋನುಸೂದ್ ಅವರು ತಮ್ಮ ಸೂದ್ ಫೌಂಡೇಶನ್ ಚಾರಿಟಿ ಮೂಲಕ ಉಚಿತವಾಗಿ ತಮ್ಮೂರಿನ ಮತ್ತು ಸುತ್ತ ಮುತ್ತ ಇರುವ ಸರಿ ಸುಮಾರು ಒಂದು ಸಾವಿರ ಶಾಲಾ ವಿಧ್ಯಾರ್ಥಿನಿಯರಿಗೆ ಬೈಸಿಕಲ್ ನೀಡಿದ್ದಾರೆ. ನಟ ಸೋನುಸೂದ್ ಅವರು ತೆರೆಯಲ್ಲಿ ಭಯಂಕರ ವಿಲನ್ ಆಗಿ ನಟಿಸುತ್ತಾರೋ ನಿಜ ಜೀವನದಲ್ಲಿ ಅಷ್ಟೇ ಮೃದು ಸ್ವಭಾವದ ಅಂತಃಕರಣ ಹೊಂದಿರುವ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಉದಾರತೆ ಗುಣ ಹೊಂದಿರುವ ವ್ಯಕ್ತಿಯಾಗಿದ್ದಾರೆ.

ಕೋವಿಡ್ ಎರಡನೇ ಅಲೆಯ ಆರಂಭದಲ್ಲಿ ಉಂಟಾದ ಆಕ್ಸಿಜಿನ್ ಕೊರತೆ, ಐಸಿಯು ಬೆಡ್, ಮೆಡಿಕಲ್ ಕಿಟ್ ಅಂತಹ ವೈದ್ಯಕೀಯ ಅಗತ್ಯ ಉಪಕರಣಗಳನ್ನ ಸೂಕ್ತ ಸಮಯಕ್ಕೆ ಒದಗಿಸಿಕೊಟ್ಟು ಗಂಭೀರ ಸ್ಥಿತಿಯಲ್ಲಿದ್ದ ನೂರಾರು ಕೊರೋನ ಸೋಂಕಿತರ ಜೀವ ಉಳಿಯಲು ನೆರವಾಗಿದ್ದಾರೆ. ಅದಲ್ಲದೆ ಕೋವಿಡ್ ಲಾಕ್ ಡೌನ್ ನಲ್ಲಿ ಉದ್ಯೋಗ ಕಳೆದುಕೊಂಡ ಅಸಹಾಯಕ, ನಿರ್ಗತಿಕ ಕುಟುಂಬಗಳಿಗೆ ಅಗತ್ಯ ಆಹಾರ ಧಾನ್ಯ ಕಿಟ್, ಮೆಡಿಕಲ್ ಕಿಟ್ ನೀಡಿ ನೆರವಾಗಿದ್ದರು. ಇದೀಗ ಸೋನುಸೂದ್ ಅವರು ತಮ್ಮ ಹುಟ್ಟೂರಾದ ಮೊಗಾದಲ್ಲಿನ ಒಂದು ಸಾವಿರ ವಿಧ್ಯಾರ್ಥಿನಿಯರಿಗೆ ಉಚಿತವಾಗಿ ಸೈಕಲ್ ನೀಡಿದ್ದಾರೆ.

ಇದು ಮೊಗದಲ್ಲಿನ ಅಕ್ಕ ಪಕ್ಕದ ನಲವತ್ತರಿಂದ ನಲತ್ತೈದು ಗ್ರಾಮದ ವಿಧ್ಯಾರ್ಥಿನಿರಿಗೆ ಸಹಾಯಕವಾಗಿದೆ. ಈ ಉದಾರತೆಯ ಕಾರ್ಯದಲ್ಲಿ ನಟ ಸೋನುಸೂದ್ ಅವರ ಸೋದರಿ ಮಾಳವಿಕಾ ಸೂದ್ ಕೂಡ ಭಾಗಿಯಾಗಿದ್ದರು‌. ಮಾಳವಿಕಾ ಸೂದ್ ಅವರು ಕೂಡ ತನ್ನ ಅಣ್ಣನಂತೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ತಮ್ಮ ಸೂದ್ ಫೌಂಡೇಶನ್ ಚಾರಿಟಿಯ ಮೂಲಕ ಸಾಧ್ಯವಾದಷ್ಟು ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇನ್ನು ಸೋನುಸೂದ್ ಫೌಂಡೇಶನ್ ಅವರ ಈ ಕಾರ್ಯಕ್ಕೆ ಫಲಾನುಭವಿಗಳು ಕೃತಜ್ಞತೆ ತಿಳಿಸಿದ್ದಾರೆ.

%d bloggers like this: