ತಂದೆ ಆದ ಖುಷಿಯಲ್ಲಿ ವಿರಾಟ್ ಕೊಹ್ಲಿ, ವಿರುಷ್ಕಾ ಜೀವನದಲ್ಲಿ ಶುರು ಹೊಸ ಅಧ್ಯಾಯ

ವಿರುಷ್ಕಾ ಬದುಕಿಗೆ ಲಕ್ಷ್ಮಿ ಆಗಮನ! ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ದಂಪತಿಗೆ ಹೆಣ್ಣು ಮಗು ಜನನವಾಗಿದೆ. ಇಬ್ಬರ ಕುಟುಂಬದಲ್ಲಿ ಮನೆಮಾಡಿದ ಸಂಭ್ರಮ, ಕುಟುಂಬದ ಸದಸ್ಯರು, ಆತ್ಮಿಯರು,ಬಾಲಿವುಡ್ ಸಿನಿ ದಿಗ್ಗಜರು ವಿರಾಟ್ ಅನುಷ್ಕಾ ದಂಪತಿಗಳಿಗೆ ಶುಭ ಕೋರುತ್ತಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬೇಬಿ ಬಂಪ್ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಆ ಫೋಟೋಗಳನ್ನು ಹಂಚಿಕೊಂಡಿದ್ದರು. ಕೆಲವು ಜ್ಯೋತಿಷಿಗಳು ಇವರಿಗೆ ಗಂಡು ಮಗು ಜನಿಸುತ್ತದೆ ಎಂದು ಭವಿಷ್ಯ ಕೂಡ ನುಡಿದಿದ್ದರು. ಅವರ ಭವಿಷ್ಯ ಸುಳ್ಳಾಗಿ ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ತಂದೆಯಾದ ಖುಷಿಯಲ್ಲಿ ವಿರಾಟ್ ಕೊಹ್ಲಿ ತನ್ನ ಮಡದಿ ಅನುಷ್ಕಾ ಶರ್ಮಾ ಅವರ ಬಳಿ ಕೊಂಚ ಕಾಲ ಭಾವುಕರಾಗಿ ಮಗುವನ್ನು ಮುದ್ದಾಡಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಕೊಹ್ಲಿ ನಾಯಕತ್ವದಲ್ಲಿ ಆಸ್ಟ್ರೇಲಿಯಾ ವಿರುದ್ದ ಸೋಲನ್ನು ಕಂಡಿತ್ತು, ತದನಂತರ ಪತ್ನಿ ಅನುಷ್ಕಾ ಶರ್ಮಾ ತುಂಬು ಗರ್ಭಿಣಿಯಾಗಿದ್ದು ವೈದ್ಯರು ನೀಡಿದ ಸಲಹೆ ಮೇರೆಗೆ ಪತ್ನಿಯ ಆರೈಕೆಯಲ್ಲಿ ತೊಡಗಿದ್ದರು. ಇದೀಗ ಹೆಣ್ಣು ಮಗುವಿನ ತಂದೆಯಾಗಿ ವಿರಾಟ್ ಕೊಹ್ಲಿ ತಂದೆಯ ಸ್ಥಾನವನ್ನು ಬಡ್ತಿ ಪಡೆದಿದ್ದಾರೆ. ಸದ್ಯಕ್ಕೆ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

%d bloggers like this: