ಸಿನಿಮಾ ಹೀರೋ ಕೇವಲ ಬೆಳ್ಳಿಪರದೆಯಲ್ಲಿ ಮಾತ್ರ ಹೀರೋ ಆಗಿರುವುದಿಲ್ಲ, ತಮ್ಮ ವೈಯಕ್ತಿಕ ಜೀವನದಲ್ಲಿಯೂ ಸಹ ನೈಜ ಹೀರೋ ವ ಆಗಿರುತ್ತಾರೆ ಎಂಬುದಕ್ಕೆ ಮತ್ತೊಮ್ಮೆ ಕಿಚ್ಚ ಸುದೀಪ್ ಸಾಕ್ಷಿಯಾಗಿದ್ದಾರೆ. ನಟ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ, ತೆಲುಗು, ಹಿಂದಿ ಭಾಷೆಗಳಲ್ಲಿ ನಟಿಸಿ, ಅಷ್ಟೇ ಅಲ್ಲದೆ ಅಲ್ಲಿನ ನಟ, ನಟಿಯರ ಜೊತೆ ಉತ್ತಮವಾದ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ. ಕಿಚ್ಚ ಸುದೀಪ್ ತನ್ನದೇಯಾದ ವಿಶಿಷ್ಟ ನಟನೆಯ ಜೊತೆಗೆ ಹೃದಯ ವೈಶಾಲ್ಯ ಹೊಂದಿರುವ ವ್ಯಕ್ತಿಯಾಗಿ ಕರ್ನಾಟಕದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದು. ಕೆಲವು ಸಲ ಕಷ್ಟದಲ್ಲಿರುವವರನ್ನು ಕಂಡಾಗ ಸಾಂತ್ವಾನ ಹೇಳಿ, ಕಷ್ಟಕ್ಕೆ ಕರಗಿ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಾರೆ. ಹಾಗೇ ಆರು ವರ್ಷದ ಹಿಂದೆ ಅಭಿಮಾನಿಯೊಬ್ಬ ತಮ್ಮ ಬಾಡಿಗಾರ್ಡ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.

ಆ ಅಭಿಮಾನಿಯೇ ಕಿಚ್ಚ ಸಾಯಿಕಿರಣ್, ಸಾಯಿ ಕಿರಣ್ ಕಿಚ್ಚ ಎಂದು ತಮ್ಮ ಹೆಸರಿನ ಮುಂದೆ ಹಾಕಿರುವುದೇ ಅವರು ಸುದೀಪ್ ಮೇಲೆ ಎಷ್ಟು ಅಭಿಮಾನವನ್ನು ಹೊಂದಿದ್ದಾರೆ ಎಂದು ತೋರುತ್ತದೆ. ಸಾಯಿಕಿರಣ್ ಕಿಚ್ಚನ ಮೊದಲ ಸಿನಿಮಾದಿಂದಲೂ ಅಪ್ಪಟ ಅಭಿಮಾನಿ, ಅವರ ಸ್ಪರ್ಶ ಸಿನಿಮಾದಿಂದ ಆರಂಭವಾದ ಈ ಅಭಿಮಾನ ಈಗ ಅವರ ಬಾಡಿಗಾರ್ಡ್ ಆಗುವವರೆಗೆ ಆ ಪ್ರೀತಿ, ಅಭಿಮಾನ ಹೆಚ್ಚಾಗುತ್ತಲೆ ಇದೆ. ಈಗ ಸುದೀಪ್ ಅವರು ಸಾಯಿಕಿರಣ್ ಅವರಿಗೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಉಡುಗೊರೆಯಾಗಿ ರಾಯಲ್ ಎನ್ ಫೀಲ್ಡ್ ಬೈಕ್ ಕೊಡಿಸಿದ್ದಾರೆ ಇದರಿಂದ ಆಶ್ಚರ್ಯಗೊಂಡ ಕಿಚ್ಚ ಸಾಯಿಕಿರಣ್ ಭಾವುಕರಾಗಿಯೂ, ಸಂತೋಷ ಪಟ್ಟಿದ್ದಾರೆ.

ಸುದೀಪಣ್ಣನ ಬಳಿ ಕೆಲಸ ಮಾಡುತ್ತಿರುವುದು ನನ್ನ ಭಾಗ್ಯ ಕೊನೆಯವರೆಗೂ ಅವರ ಜೊತೆ ಇರುವುದಕ್ಕೆ ಇಚ್ಚಿಸುತ್ತೇನೆ. ಸುದೀಪಣ್ಣ ಮತ್ತು ಅವರ ಇಡೀ ಕುಟುಂಬಕ್ಕೆ ನಾನು ಜೀವಮಾನದ ಪೂರ್ತಿ ಋಣಿಯಾಗಿರುತ್ತೇನೆ ಎಂದು ತಮ್ಮ ಕೃತಜ್ಞತೆಯ ನುಡಿಗಳನ್ನು ಹಂಚಿಕೊಂಡರು, ಸುದೀಪ್ ಇತ್ತೀಚೆಗೆ ಮೈಸೂರಿನ ಚಾಮುಂಡಿಬೆಟ್ಟಕ್ಕೆ ತೆರಳಿದಾಗ ಅಂಗವಿಕಲ ಅಭಿಮಾನಿಯೊಬ್ಬ ಸುದೀಪ್ ಅವರನ್ನು ನೋಡಲು ದೂರದ ಊರಿಂದ ಬಂದಿದ್ದು, ದೂರದಲ್ಲಿ ಅವರನ್ನು ನೋಡಲು ಹರ ಸಾಹಸ ಪಡುತ್ತಿದ್ದ ಇವರನ್ನು ಗಮನಿಸಿ ಸುದೀಪ್ ಅವರೇ ಬಳಿ ಹೋಗಿ ಮಾತನಾಡಿಸಿ ಅವರ ಅಂಗವಿಕಲ ರಾಗಿದ್ದಕ್ಕೆ ಕಾರಣ ಕೇಳಿ, ಕುಶಲೋಪಚಾರ ವಿಚಾರಿಸಿ ಅವರ ಕಾಲಿನ ಚಿಕಿತ್ಸೆಗೆ ಬೇಕಾದ ಆರ್ಥಿಕ ಸಹಾಯ ಮಾಡಿದ್ದಾರೆ. ಇಂತಹ ಅನೇಕ ಸಹಾಯವನ್ನು ಮಾನವೀಯತೆಯನ್ನು ಮೆರೆದಿದ್ದಾರೆ.