ತನ್ನ ತಂಗಿಯ ಹುಟ್ಟುಹಬ್ಬಕ್ಕೆ ತಾನೇ ಮಾಂಸದೂಟ ತಯಾರಿಸಿ ಬಡಿಸಿದ ಸ್ಟಾರ್ ಕ್ರಿಕೆಟ್ ಆಟಗಾರ

ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಜಾನಿ ಬೈರ್ಸ್ಟೌ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ನೋಡೋಣ. ಅದರಲ್ಲೂ ಐಪಿಎಲ್ ಪಂದ್ಯಾವಳಿಗಳಲ್ಲಿ ಅವರ ಅದ್ಭುತ ಪ್ರದರ್ಶನದಿಂದಲೇ ಸನ್ ರೈಸ್ ಹೈದರಾಬಾದ್ ತಂಡ ಯಾವಾಗಲೂ ಉತ್ತಮ ಲಯದಲ್ಲಿರುತ್ತದೆ. 2019ರ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ತಂಡ ಮೊದಲ ಬಾರಿ ವಿಜಯಶಾಲಿ ಆಗಿತ್ತು. ಆ ತಂಡ ಫೈನಲ್ ತಲುಪಲು ಈ ಜಾನಿ ಬೈರ್ಸ್ಟೋ ಪ್ರಮುಖ ಕಾರಣಿಕರ್ತರಲ್ಲಿ ಒಬ್ಬರಾಗಿದ್ದರು. ಯಾವಾಗಲು ನಗು ಮುಖದಲ್ಲೇ ಇರುವ ಜಾನಿ ತುಂಬಾ ಸೌಮ್ಯ ಸ್ವಭಾವದ ವ್ಯಕ್ತಿ ಮತ್ತು ವಿಶ್ವ ಕ್ರಿಕೆಟ್ ನ ತಾಂತ್ರಿಕ ಆಟಗಾರ. ಈ ನಡುವೆ ಜಾನಿ ತಮ್ಮ ತಂಗಿಯ ಮೂವತ್ತನೆ ವರ್ಷದ ಹುಟ್ಟುಹಬ್ಬಕ್ಕಾಗಿ ಚೆಫ್ ಆಗಿದ್ದಾರೆ. ಹೌದು ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿರುವ ಜಾನಿ ಬೈರ್ಸ್ಟೌ ಅವರು ತಮ್ಮ ತಂಗಿಯ ಹುಟ್ಟು ಹಬ್ಬಕ್ಕೆಂದು ಸ್ವತಃ ತಾವೇ ತಮ್ಮ ತಂಗಿಗೆ ಇಷ್ಟವಾದ ಮಾಂಸದ ಖಾದ್ಯವನ್ನು ಮಾಡಿದ್ದಾರೆ ಮತ್ತು ಇದನ್ನು ತಮ್ಮ ಇನ್ಸ್ತಗ್ರಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಮತ್ತು ತಮ್ಮ ಅಡುಗೆ ಪ್ರಯತ್ನಕ್ಕೆ ಉತ್ತಮ ಫಲಿತಂಶಕ್ಕಾ ಕೂಡ ಸಿಕ್ಕಿದೆ ಎಂದು ಹೇಳಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಾವು ತಯಾರಿಸಿದ ಮಾಂಸದ ತಟ್ಟೆಯನ್ನು ಹಿಡಿದು ಮನೆಯಲ್ಲಿ ನನ್ನ ತಂಗಿಯ ಹುಟ್ಟುಹಬ್ಬಕ್ಕೆ ನಾನೇ ಅಡುಗೆ ತಯಾರಿಸಿರುವುದು ತುಂಬಾ ಖುಷಿ ಕೊಟ್ಟಿದೆ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಜಾನಿ ಬೈರ್ಸ್ಟೌ ಅವರು ಈಗ ನಡೆಯುತ್ತಿರುವ ಸೌತ್ ಆಫ್ರಿಕಾ ಹಾಗು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಕೊನೆಯ ನಾಲ್ಕು ಓವರ್ ಅಲ್ಲಿ ಐವತ್ತು ರನ್ ಕಲೆ ಹಾಕಿ ಇಂಗ್ಲೆಂಡ್ ಗೆಲುವಿಗೆ ಕಾರಣರಾಗಿದ್ದಾರೆ, ಅವರು ಚೆಫ್ ಆಗಿ ಹಂಚಿಕೊಂಡಿರುವ ಫೋಟೋಗಳನ್ನು ನೀವೂ ಅವರ ಇನ್ಸ್ಟಾಗ್ರಾಮ್ ಅಲ್ಲಿ ನೋಡಬಹುದು.

%d bloggers like this: