ಬ್ರಿಟನ್ ದೇಶದಲ್ಲಿ ಸಾಫ್ಟ್ ವೇರ್ ಮತ್ತು ಮಾಹಿತಿ ತಂತ್ರಜ್ಞಾನ ಸೇವೆಯಲ್ಲಿ ಭಾರತದ್ದೇ ಮೇಲುಗೈ. ಹೌದು ಇಂದಿನ ಆಧುನಿಕ ತಂತ್ರಜ್ಞಾನ ಎಷ್ಟು ಮುಂದುವರಿದಿದೆ ಅಂದರೆ ಕ್ಷಣಾರ್ಧದಲ್ಲಿ ಕುಳಿತಲ್ಲೇ ವಿವಿಧ ದೇಶಗಳ ಎಲ್ಲಾ ಮಾಹಿತಿ ಮತ್ತು ಹೊರ ಜಗತ್ತಿನ ಅನೇಕ ವಿಚಾರಗಳನ್ನ ವಿನಮಯ ಮಾಡಿಕೊಳ್ಳಬಹುದಾಗಿದೆ. ಇದಕ್ಕೆ ಪ್ರಮುಖ ಕಾರಣ ಅಂದರೆ ಮಾಹಿತಿ ತಂತ್ರಜ್ಞಾನ. ಜಗತ್ತಿನ ಅಭಿವೃದ್ದಿ ಹೊಂದಿರುವ ರಾಷ್ಟಗಳ ಪೈಕಿ ಭಾರತ ದೇಶ ಇಂದಿಗೂ ಕೂಡ ಬೆಳೆಯುತ್ತಿರುವ ಅಭಿವೃದ್ದಿ ಹೊಂದುತ್ತಿರುವ ದೇಶ ಅಂತಾನೇ ಕರೆಸಿಕೊಳ್ಳುತ್ತಿದೆ. ಆದರೆ ಇತ್ತೀಚೆಗಿನ ಕೆಲವು ವರ್ಷಗಳಿಂದ ಸಾಫ್ಟ್ ವೇರ್ ಮತ್ತು ಐಟಿ ಕ್ಷೇತ್ರದಲ್ಲಿ ಭಾರತ ಅಭಿವೃದ್ದಿ ನೋಡಿದರೆ ನಿಜಕ್ಕೂ ಕೂಡ ಭಾರತ ದೇಶ ಸಹ ಮುಂದುವರಿದ ರಾಷ್ಟ್ರವಾಗಿ ಹೊರ ಹೊಮ್ಮಲಿದೆ ಎಂದು ಹೇಳಬಹುದು. ಇದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ ಭಾರತದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್.

ಹೌದು ಭಾರತದ ಟಾಟಾ ಕನ್ಸಲ್ಟೆನ್ಸಿ ಸಂಸ್ಥೆ ಬ್ರಿಟನ್ ದೇಶದಲ್ಲಿ ಇದೀಗ ನಂಬರ್ ಒನ್ ಸಾಫ್ಟ್ ವೇರ್ ಅಂಡ್ ಐಟಿ ಸರ್ವೀಸ್ ಎಂದು ಹೆಸರು ಮಾಡಿದೆ. ನಮ್ಮ ಭಾರತದ ಟಾಟಾ ಕನ್ಸಲ್ ಟೆನ್ಸಿ ಕಂಪನಿ ಬ್ರಿಟನ್ ದೇಶಕ್ಕೆ ಒದಗಿಸುತ್ತಿರುವ ಮಾಹಿತಿ ತಂತ್ರಜ್ಞಾನ ಸೇವೆಯಲ್ಲಿ ಟಾಪ್ ಮೂವತ್ತು ಸಂಸ್ಥೆಗಳಲ್ಲಿ ಭಾರತದ ಟಿ.ಸಿ.ಎಸ್ (ಟಾಟಾ ಕನ್ಸಲ್ ಟೆನ್ಸಿ ) ಸಂಸ್ಥೆ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಇತ್ತೀಚೆಗೆ ನಡೆದ ಸಮೀಕ್ಷೆವೊಂದರಲ್ಲಿ ಇನ್ನೂರಕ್ಕೂ ಅಧಿಕ ಕಂಪನಿಗಳ ಆದಾಯದ ಮಾಹಿತಿ ಮತ್ತು ಅದರ ವಿಶ್ಲೇಷಣೆಯನ್ನ ಸಂಗ್ರಹ ಮಾಡಲಾಗಿದ್ದು, ಎಸ್.ಐ.ಟಿ.ಎಸ್. ಪೂರೈಕೆದಾರ ಕಂಪನಿಯಾಗಿ ಟಾಟಾ ಕನ್ಸಲ್ ಟೆನ್ಸಿ ಸಂಸ್ಥೆ ಬ್ರಿಟನ್ ದೇಶದಲ್ಲಿ ಉತ್ತಮ ಹೆಸರನ್ನ ಸಂಪಾದಿಸಿದೆ.



ಈ ವಿಚಾರವನ್ನು ಸ್ವತಃ ಟಿಸಿಎಸ್ ಸಂಸ್ಥೆಯೇ ತಮ್ಮ ಜಾಲತಾಣದ ಮೂಲಕ ಮಾಹಿತಿ ನೀಡಿದೆ. ಇದರ ಜೊತೆಗೆ ಟಾಟಾ ಕನ್ಸಲ್ ಟೆನ್ಸಿ ಕಂಪನಿಯು ಐಟಿ ಮತ್ತು ಬಿಟಿ ಸರ್ವೀಸ್ ಗಳಲ್ಲಿ ಎರಡನೇ ಸ್ಥಾನ ಪಡೆದು, ಸಲಹಾ ಮತ್ತು ಪರಿಹಾರಗಳ ವಿಭಾಗದಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಬ್ರಿಟನ್ ನಲ್ಲಿ ಕೋವಿಡ್ ಸಂಕಷ್ಟದ ಸಂಧರ್ಭದಲ್ಲಿ ಟಾಟಾ ಕನ್ಸಲ್ ಟೆನ್ಸಿ ಸಂಸ್ಥೆ ಸಾಕಷ್ಟು ಕೆಲಸ ಮಾಡಿತ್ತು. ಒಟ್ಟಾರೆಯಾಗಿ ನಮ್ಮ ದೇಶದ ಪ್ರಮುಖ ಉದ್ದಿಮೆ ಸಂಸ್ಥೆಯಾಗಿರುವ ಟಾಟಾ ಕನ್ಸಲ್ ಟೆನ್ಸಿ ಸಂಸ್ಥೆ ರಾಯಲ್ ಲಂಡನ್,ವರ್ಜಿನ್ ಅಟ್ಲಾಂಟಿಕ್, ಪೆನ್ಶನ್ ಡಿಪಾರ್ಟ್ಮೆಂಟ್ ಮತ್ತು ಲಂಡನ್ನಿನ ಟ್ರಾನ್ಸ್ ಪೋರ್ಟ್ ಗೆ ಸಂಬಂಧಪಟ್ಟಂತಹ ಇಲಾಖೆಗಳ ಜೊತೆ ಒಂದಷ್ಟು ಮಹತ್ತರವಾದ ಒಪ್ಪಂದ ಮಾಡಿಕೊಂಡಿದೆ.