ತವರೂರಿನಲ್ಲೇ ಅದ್ದೂರಿಯಾಗಿ ಹೊಸ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮಕ್ಕೆ ಸಜ್ಜಾದ ನಿಖಿಲ್ ಕುಮಾರಸ್ವಾಮಿ ಅವರು

ಸ್ಯಾಂಡಲ್ ವುಡ್ ಯುವರಾಜ ಖ್ಯಾತಿಯ ನಟ ನಿಖಿಲ್ ಕುಮಾರ್ ಅಭಿನಯದ ರೈಡರ್ ಸಿನಿಮಾ ಚಿತ್ರಮಂದಿರದ ಅಂಗಳಕ್ಕೆ ಎಂಟ್ರಿ ಕೊಡಲು ಸಿದ್ದವಾಗಿದೆ. ಕೋವಿಡ್ ಮೂರನೇ ಅಲೆಯ ಆತಂಕದ ನಡುವೆಯೂ ಕೂಡ ರೈಡರ್ ಸಿನಿಮಾ ತಂಡ ಧೈರ್ಯವಾಗಿ ಇದೇ ಕ್ರಿಸ್ಮಸ್ ಹಬ್ಬಕ್ಕೆ ಅಂದರೆ ಡಿಸೆಂಬರ್ 24 ರಂದು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಈಗಾಗಲೇ ಕನ್ನಡದ ಸ್ಟಾರ್ ನಟರ ಸಿನಿ‌ಮಾಗಳು ಬಿಡುಗಡೆಯಾಗಿ ಸದ್ಯಕ್ಕೆ ಯಾವುದೇ ಪೈಪೋಟಿ ನೀಡುವಂತಹ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಇಂತಹ ಸಂಧರ್ಭದಲ್ಲಿ ನಾವು ಆರಾಮಾಗಿ ರಿಲೀಸ್ ಮಾಡಿ ಗೆಲ್ಲಬಹುದು ಎಂಬುದು ರೈಡರ್ ಚಿತ್ರತಂಡದ ಪ್ಲಾನ್ ಆಗಿದೆ. ರೈಡರ್ ಸಿನಿಮಾ ಕೂಡ ಕನ್ನಡದ ಬಹು ನಿರೀಕ್ಷೆ ಹುಟ್ಟು ಹಾಕಿರುವ ಸಿನಿಮಾ.

ಏಕೆಂದರೆ ಈ ರೈಡರ್ ಸಿನಿಮಾದಲ್ಲಿ ನಟ ನಿಖಿಲ್ ಕುಮಾರ್ ಬ್ಯಾಸ್ಕೆಟ್ ಬಾಲ್ ಆಟಾಗಾರನಾಗಿ ಕಾಣಿಸಿಕೊಂಡಿದ್ದಾರೆ. ‌ಕ್ರೀಡಾಧಾರಿತ ಆಕ್ಷನ್ ಕಥಾ ಹಂದರ ಹೊಂದಿರುವ ರೈಡರ್ ಸಿನಿಮಾಗೆ ಟಾಲಿವುಡ್ ಖ್ಯಾತ ನಿರ್ದೇಶಕ ವಿಜಯ್ ಆಕ್ಷನ್ ಕಟ್ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದಕ್ಕೆ ನಿರ್ದೇಶನ ಮಾಡಿರುವ ನಿರ್ದೇಶಕ ವಿಜಯ್ ಕುಮಾರ್ ಕೊಂಡ ಅವರಿಗೆ ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇದೆಯಂತೆ. ಲಹರಿ ಮ್ಯುಸಿಕ್ ಟಿ ಸೀರಿಸ್ ಪ್ರೊಡಕ್ಷನ್ ಮತ್ತು ಶಿವನಂದಿ ಎಂಟರ್ಟೈನ್ ಮೆಂಟ್ಸ್ ಅಡಿಯಲ್ಲಿ ಸುನಿಲ್ ಗೌಡ ಬಂಡವಾಳ ಹೂಡಿದ್ದಾರೆ. ವಿಶೇಷ ಪಾತ್ರದಲ್ಲಿ ಕೆಜಿಎಫ್ ಸಿನಿಮಾ ಖ್ಯಾತಿಯ ನಟ ಗರುಡರಾಮ್ ಕೂಡ ನಟಿಸಿದ್ದು, ನಿಖಿಲ್ ಕುಮಾರ್ ಅವರಿಗೆ ಜೋಡಿಯಾಗಿ ನಟಿ ಕಶ್ಮೀರ ಪರದೇಶಿ ನಟಿಸಿದ್ದಾರೆ.

ಪೋಷಕ ಪಾತ್ರಗಳಲ್ಲಿ ಕಾಮಿಡಿ ಕಿಲಾಡಿ ಶೋ ಖ್ಯಾತಿಯ ಶಿವರಾಜ್ ಕೆಆರ್ ಪೇಟೆ, ದತ್ತಣ್ಣ, ಅಚ್ಯೂತ್ ಕುಮಾರ್, ಚಿಕ್ಕಣ್ಣ ಅಭಿನಯಿಸಿದ್ದಾರೆ. ಇನ್ನು ಈ ಸ್ಪೋರ್ಟ್ಸ್ ಕಥಾಹಂದರ ಹೊಂದಿರುವ ರೈಡರ್ ಸಿನಿಮಾಗೆ ಮ್ಯಾಜಿ಼ಕಲ್ ಕಂಪೋಸರ್ ಅರ್ಜುನ್ ಜನ್ಯ ರಾಗ ಸಂಯೋಜನೆ ಮಾಡಿದ್ದು, ಶ್ರೀಶ ಕೂದುವಳ್ಳಿ ಅವರ ಕ್ಯಾಮೆರ ಕೈ ಚಳಕವಿದೆ. ಸೀತಾ ರಾಮ ಕಲ್ಯಾಣ ಸಿನಿಮಾದ ನಂತರ ನಿಖಿಲ್ ಕುಮಾರ್ ಅವರ ರೈಡರ್ ಸಿನಿಮಾ ಅವರ ಅಭಿಮಾನಿಗಳಿಗೆ ಭಾರಿ ಕುತೂಹಲ ಮೂಡಿಸಿದೆ. ಇನ್ನು ಇದೇ ಡಿಸೆಂಬರ್ 19ರಂದು ರೈಡರ್ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಮಂಡ್ಯದಲ್ಲಿ ಹಮ್ಮಿಕೊಳ್ಳಲಾಗಿದೆ. ರೈಡರ್ ಚಿತ್ರದಲ್ಲಿ ನಟ ನಿಖಿಲ್ ಕುಮಾರ್ ಅವರು ಯಾವ ರೀತಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಈ ಬಾರಿ ಪ್ರೇಕ್ಷಕ ಪ್ರಭು ಎಷ್ಟು ಮಾರ್ಕ್ಸ್ ನೀಡುತ್ತಾನೆ ಎಂದು ಡಿಸೆಂಬರ್ 24ರಂದು.

%d bloggers like this: