ತವರು ನಾಡು ಕರ್ನಾಟಕಕ್ಕೆ ಆಗಮಿಸಿದ ಮಿಸ್ ಇಂಡಿಯಾ ಸುಂದರಿ ಸಿನಿ ಶೆಟ್ಟಿ ಅವರಿಗೆ ಅದ್ದೂರಿ ಸ್ವಾಗತ

ಕರ್ನಾಟಕದಿಂದ ಹೊರಗಡೆ ಹೋಗಿ ಅನೇಕ ಪ್ರತಿಭೆಗಳು ನಾಡಿಗೆ ಗೌರವ ತಂದಿದ್ದಾರೆ. ನಮ್ಮ ಉಡುಪಿ ಮೂಲದ ಸಿನಿ ಶೆಟ್ಟಿ ಅವರು ಫೆಮಿನಾ ಮಿಸ್ ಇಂಡಿಯಾ ಕಾಂಪಿಟೇಶನ್ ನಲ್ಲಿ ಜಯಶೀಲರಾಗಿ ಮಿಸ್ ಇಂಡಿಯಾ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ರೂಪದರ್ಶಿ ಸಿನಿ ಶೆಟ್ಟಿ ಅವರು ಹುಟ್ಟಿ ಬೆಳೆದಿದ್ದೆಲ್ಲಾ ಮುಂಬೈನಲ್ಲೇ. ಇವರ ತಂದೆ ಸದಾನಂದ ಶೆಟ್ಟಿ ಮುಂಬೈನಲ್ಲಿ ಹೋಟೇಲ್ ಉದ್ಯಮ ನಡೆಸುತ್ತಿದ್ದಾರೆ. ನವವತ್ತು ವರ್ಷಗಳಿಂದ ಮುಂಬೈನಲ್ಲಿ ನೆಲೆಸಿರುವ ಸದಾನಂದ ಶೆಟ್ಟಿ ಅವರು ಉಡುಪಿಯ ಕಾಪು ತಾಲ್ಲೂಕಿನ ಇನ್ನಂಜೆ ಗ್ರಾಮದ ಮಡುಂಬು ನಿವಾಸಿ. ಸಿನಿ ಶೆಟ್ಟಿ ಮಿಸ್ ಇಂಡಿಯಾ ಆದ ನಂತರ ಅವರ ತಾತ ರಾಮಣ್ಣ ಅವರು ತಮ್ಮ ಮೊಮ್ಮಗಳು ಮಿಸ್ ಇಂಡಿಯಾ ಆಗಿರೋದನ್ನ ತಿಳಿದು ಸಂಭ್ರಮ ಪಟ್ಟಿದ್ದರು.

ಅದೇ ರೀತಿ ಸಿನಿ ಶೆಟ್ಟಿ ಅವರ ಅಜ್ಜಿ ಶಶಿಕಲಾ ಅವರು ಕೂಡ ಮೊಮ್ಮಗಳು ಸಿನಿಶೆಟ್ಟಿ ಬಗ್ಗೆ ಅಪಾರ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಇದೀಗ ಮಿಸ್ ಇಂಡಿಯಾ ಆದ ನಂತರ ಇದೇ ಮೊದಲ ಬಾರಿಗೆ ಸಿನಿ ಶೆಟ್ಟಿ ಅವರು ಕರ್ನಾಟಕಕ್ಕೆ ಬಂದಿದ್ದಾರೆ. ಹೌದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿನಿ ಶೆಟ್ಟಿ ಅವರು ತಮ್ಮ ಅಜ್ಜ ಅಜ್ಜಿ, ಸ್ನೇಹಿತರು, ಕುಟುಂಬ ವರ್ಗದವರನ್ನ ನೋಡಿ ಖುಷಿ ಪಟ್ಟಿದ್ದಾರೆ. ಇದೇ ಸಂಧರ್ಭದಲ್ಲಿ ಸಿನಿ ಶೆಟ್ಟಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ ಮುಂದೆ ನಾನು ಮಾಡೇಲಿಂಗ್ ಕ್ಷೇತ್ರದಲ್ಲಿ ಉತ್ತಮ ಅವಕಾಶ ಸಿಕ್ಕರೆ ಖಂಡಿತಾ ಮುಂದುವರಿಸುತ್ತೇನೆ. ಆದರೆ ಮೊದಲು ನಾನು ನನ್ನ ಉನ್ನತ ಶಿಕ್ಷಣದ ಕಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತೇನೆ.

ಅದರ ಜೊತೆಗೆ ಬಾಲಿವುಡ್ ನಲ್ಲಿ ಉತ್ತಮ ಕಥೆ ಸಿಕ್ಕರೆ ನಾನು ನಟಿಸುತ್ತೇನೆ ಎಂದು ತಮ್ಮ ಕನಸನ್ನ ಬಿಚ್ಚಿಟ್ಟಿದ್ದಾರೆ. ಇನ್ನು ಮಂಗಳೂರಿಗೆ ಆಗಮಿಸಿದ ಸಿನಿ ಶೆಟ್ಟಿ ಅವರು ಅಪ್ಪಟ ತುಳುನಾಡಿನ ಬಂಟ ಸಮುದಾಯ ಮನೆತನದ ಹೆಣ್ಣು ಮಗಳಂತೆ ಸೀರೆಯನ್ನು ಉಟ್ಟು, ಹಣೆಗೆ ಕುಂಕುಮ ಇಟ್ಟುಕೊಂಡು ತನ್ನ ಎರಡೂ ಕೈಗಳಿಗೆ ಲಕ್ಷ್ಮಿ ಪದಕ ಇರುವ ಬಳೆ ಮತ್ತು ಕಿವಿಯೋಲೆ ಧರಿಸಿ ಮಿಂಚುತ್ತಿದ್ದರು. ಸಿನಿ ಶೆಟ್ಟಿ ಅವರನ್ನ ರೂಪ ಲಾವಣ್ಯ, ಅವರ ಸೌಜನ್ಯದ ನಡತೆ ಕಂಡ ಅನೇಕರು ಇವರೇನಾ ಮಿಸ್ ಇಂಡಿಯಾ ಅನ್ನೋಷ್ಟರ ಮಟ್ಟಿಗೆ ವಿಮಾನ ನಿಲ್ದಾಣದಲ್ಲಿ ಸಿನಿ ಶೆಟ್ಟಿ ಅವರು ಕಾಣಿಸಿಕೊಂಡರು. ಒಟ್ಟಾರೆಯಾಗಿ ಸಿನಿ ಶೆಟ್ಟಿ ಅವರು ಮಿಸ್ ಇಂಡಿಯಾ ಆಗಿರುವುದು ನಮ್ಮ ನಾಡಿಗೆ ಹೆಮ್ಮೆಯೇ ಸರಿ ಎನ್ನಬಹುದು.

%d bloggers like this: