ಕನ್ನಡ ಚಿತ್ರರಂಗದ ಮಿಸ್ಟರ್ ಪರ್ಫೆಕ್ಟ್ ತಾವೇ ಎಂಬುದನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪದೇ ಪದೇ ಸಾಬೀತು ಮಾಡುತ್ತಿರುತ್ತಾರೆ, ಅದೇ ರೀತಿ ಈಗ ಮತ್ತೊಮ್ಮೆ ತಾವೊಬ್ಬ ಮಿಸ್ಟರ್ ಪರ್ಫೆಕ್ಟ್ ಎಂದು ತೋರಿಸಿಕೊಟ್ಟಿದ್ದಾರೆ. ಹೌದೂ ವರನಟ ಡಾಕ್ಟರ್ ರಾಜಕುಮಾರ್ ಅವರ ಕೊನೆಯ ಪುತ್ರನಾಗಿ ಜನಿಸಿದ ಅಪ್ಪು ಬಾಲನಟನಾಗಿ ಚಿತ್ರರಂಗಕ್ಕೆ ಬಂದು ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದು ನಮ್ಮೆಲ್ಲರಿಗೂ ಗೊತ್ತೇ ಇದೆ. ತಂದೆಯಿಂದ ವಿನಯವಂತಿಕೆ ಅನ್ನು ಸಂಪೂರ್ಣವಾಗಿ ಬಳವಳಿ ಪಡೆದುಕೊಂಡ ಅಪ್ಪು ಎಲ್ಲ ಸಿನಿರಸಿಕರ ಮತ್ತು ಚಿತ್ರೋದ್ಯಮದ ಸದಸ್ಯರ ಅಚ್ಚುಮೆಚ್ಚಿನ ನಟ ಮತ್ತು ವ್ಯಕ್ತಿ.

ಪುನೀತ್ ರಾಜಕುಮಾರ್ ಅವರು ಯಾವಾಗಲೂ ಕಾಂಟ್ರೋವರ್ಸಿಗಳಿಂದ ದೂರವೇ ಇರುತ್ತಾರೆ. ಒಂದು ಶಬ್ದವನ್ನು ಮಾತನಾಡುವಾಗ ಸಹ ತುಂಬಾ ಜಾಗರೂಕತೆಯಿಂದ ಮತ್ತು ಪ್ರಭುದ್ದವಾಗಿ ಮಾತನಾಡುವ ಅಪ್ಪು ಸುಖಾಸುಮ್ಮನೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಜಾಯಮಾನದವರಲ್ಲ. ಆದರೆ ಒಂದು ವೇಳೆ ಅವರು ಮಾತನಾಡಿದರೆ ಅದು ತುಂಬಾ ಅರ್ಥಪೂರ್ಣ ಮತ್ತು ಸರಿಯಾದ ಸಮಯಕ್ಕೆ ಆಡಿದ ಮಾತಾಗಿರುತ್ತದೆ. ವಿಜಯ್ ರಂಗರಾಜ ಎಂಬ ಒಬ್ಬ ತೆಲುಗು ಕಲಾವಿದ ನಾಡಿನ ಮೇರು ನಟ ವಿಷ್ಣುವರ್ಧನ್ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು ಭಾರತ ಚಿತ್ರ ಕಂಡ ಶ್ರೇಷ್ಠ ನಟರುಗಳಲ್ಲಿ ಒಬ್ಬರಾದ ಸಾಹಸಸಿಂಹ ವಿಷ್ಣುವರ್ಧನ್ ನಮ್ಮನ್ನಗಲಿ ಹಲವು ವರ್ಷಗಳೇ ಕಳೆದಿವೆ. ಹೀಗಿರುವಾಗ ತೆಲುಗಿನ ನಟನಾದ ವಿಜಯ್ ರಂಗರಾಜ್ ಎಂಬಾತ ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ವಿಷ್ಣುವರ್ಧನ್ ಅವರ ಬಗ್ಗೆ ಮಾತನಾಡುವಾಗ ನಾಲಿಗೆಯನ್ನು ಹರಿಬಿಟ್ಟಿದ್ದಾನೆ. ಇದಕ್ಕಾಗಿ ಈಗಾಗಲೇ ಕನ್ನಡ ನಟ ನಟಿಯರು ಚಾಟಿ ಬೀಸಿದ್ದು ತೆಲುಗು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೆಲುಗಿನ ಎಲ್ಲಾ ಸಿನಿರಸಿಕರು ಸಹ ಇಷ್ಟಪಡುವಂತಹ ನಮ್ಮ ವಿಷ್ಣುವರ್ಧನ್ ಅವರ ಬಗ್ಗೆ ಮಾತನಾಡಿದ ವಿಜಯ ರಂಗರಾಜುಗೆ ಈಗ ಅಪ್ಪು ಕೂಡ ಸರಿಯಾಗಿ ಕ್ಲಾಸ್ ತಗೊಂಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿದ ಅವರು ನಮ್ಮ ನಾಡು ಕಂಡ ಮೇರು ನಟರಲ್ಲಿ ವಿಷ್ಣುವರ್ಧನ್ ಸರ್ ಕೂಡ ಒಬ್ಬರು ಅಂತಹವರ ಬಗ್ಗೆ ಕೀಳಾಗಿ ಮಾತನಾಡಿದ ಆ ಕಲಾವಿದ ಕ್ಷಮೆ ಕೇಳಬೇಕು ಮತ್ತು ತಾನು ಆಡಿದ ಮಾತುಗಳನ್ನು ಹಿಂಪಡೆಯಬೇಕು, ಚಿತ್ರರಂಗ ನಮ್ಮೆಲ್ಲರ ಮನೆ ನಾವೆಲ್ಲ ಕಲಾವಿದರು ಒಂದು ಕುಟುಂಬ ಇದ್ದಂತೆ, ಕಲಾವಿದರಾಗಿ ಕಲೆಗೆ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂಬ ಪ್ರಭುದ್ದ ಸಂದೇಶ ನೀಡಿದ ಅಪ್ಪು ಕೊನೆಗೆ respect art and artist ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ಟ್ವೀಟ್ ಮಾಡಿದ್ದಾರೆ. ನೋಡಿ ಇದು ಅಲ್ಲವೇ ಪ್ರಭುದ್ಧತೆ ಎಂದರೆ. ನಾವೆಲ್ಲ ಭಾಷೆಯ ಚಿತ್ರರಂಗ ಒಂದು ಕುಟುಂಬ ಇದ್ದಂತೆ ಎಂದು ಹೇಳುವ ಅಪ್ಪು ಅವರ ವಯಸ್ಸೇನು ಮತ್ತು ಒಬ್ಬ ಮೇರು ನಟನ ಬಗ್ಗೆ ಅವಹೇಳನ ಮಾಡುವ ತೆಲುಗು ಕಲಾವಿದನ ವಯಸ್ಸೇನು. ಒಟ್ಟಾರೆಯಾಗಿ ವಿಜಯ್ ರಂಗರಾಜ ತಾನು ಆಡಿದ ಮಾತುಗಳಿಗೆ ಇನ್ನಾದರೂ ಕ್ಷಮೆ ಕೇಳಿ ಉಳಿದ ಮರ್ಯಾದೆಯನ್ನು ಉಳಿಸಿಕೊಂಡರೆ ಚಿತ್ರರಂಗದ ಮರ್ಯಾದೆ ಉಳಿದಂತೆ.