ತೆಲುಗಿನ ದೊಡ್ಡ ನಟನ ಚಿತ್ರಕ್ಕೆ ಮುಖ್ಯಅತಿಥಿ ಆಗಿ ರಾಕಿಂಗ್ ಸ್ಟಾರ್ ಯಶ್

ಟಾಲಿವುಡ್ಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ ಕೆಜಿಎಫ್ ಸೂತ್ರಧಾರಿ ಪ್ರಶಾಂತ್ ನೀಲ್! ಸಾಮಾನ್ಯವಾಗಿ ಸ್ಟಾರ್ ನಟರು ಒಂದು ಭಾಷೆಯಲ್ಲಿ ಯಶಸ್ವಿ ನಟನಾದ ಮೇಲೆ ಮತ್ತೊಂದು ಭಾಷೆಯಲ್ಲಿ ಚಿತ್ರ ಮಾಡಲು ಹೊರಟಾಗ ಒಂದಷ್ಟು ಅಬ್ಬರದ ಪ್ರಚಾರ ನಡೆದಿರುತ್ತದೆ. ಆದರೆ ನಿರ್ದೇಶಕನೊಬ್ಬ ಪರಭಾಷೆಯಲ್ಲಿ ಚಿತ್ರ ಮಾಡಲು ಹೊರಟಾಗ ಅದ್ದೂರಿಯಾದ ಸ್ವಾಗತ ನಿರೀಕ್ಷೆ ಕಷ್ಟ ಸಾಧ್ಯ. ಆದರೆ ಕೆಜಿಎಫ್ ನಂತಹ ಖಡಕ್ ಮಾಸ್ ಚಿತ್ರವನ್ನ ವಿಶ್ವದಾದ್ಯಂತ ಸದ್ದು ಮಾಡುವಂತೆ ನರಾಚಿ ಎಂಬ ಕಲ್ಪನಾ ಲೋಕ ರಾಕ್ಷಸ ಸಾಮ್ರಾಜ್ಯವನ್ನು ಕಟ್ಟಿ ಇಡೀ ಭಾರತೀಯ ಚಿತ್ರರಂಗ ಒಮ್ಮೆಲೆ ಆಶ್ಚರ್ಯದಿಂದ ದಂಗಾಗುವ ರೀತಿಯಲ್ಲಿ ತನ್ನ ನಿರ್ದೇಶನದ ಪ್ರತಿಭೆ ತೋರಿದ್ದಾರೆ ಪ್ರಶಾಂತ್ ನೀಲ್. ಈಗ ಕೆಜಿಎಫ್ ಚಾಪ್ಟರ್2 ಟೀಸರ್ ಬರೋಬ್ಬರಿ ನೂರು ಮಿಲಿಯನ್ ಕ್ಕಿಂತ ಹೆಚ್ಚು ವೀಕ್ಷಣೆ ಪಡೆದಿದೆ. ಇಂತಹ ಅದ್ಭುತ ಸಿನಿಮಾದ ರುವಾರಿಯಾಗಿರುವ ಪ್ರಶಾಂತ್ ನೀಲ್ ಇದೀಗ ಟಾಲಿವುಡ್ ಅಂಗಳಕ್ಕೆ ಸಲಾರ್ ಚಿತ್ರದ ಮೂಲಕ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ.

ಹೊಂಬಾಳೆ ಪಿಲ್ಮ್ ಸಂಸ್ಥೆಯು ಜನವರಿ (15) ಶುಕ್ರವಾರದಂದು ಹೈದರಾಬಾದ್ ನಲ್ಲಿ 11 ಗಂಟೆಗೆ ಸಲಾರ್ ಚಿತ್ರದ ಮುಹೂರ್ತ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ, ಇನ್ನು ಟಾಲಿವುಡ್ ಸ್ಟಾರ್ ಪ್ರಭಾಸ್ ನಾಯಕ ನಟನಾಗಿ ನಟಿಸುತ್ತಿರುವ ಈ ಸಲಾರ್ ಚಿತ್ರ ಹೊಂಬಾಳೆ ಬ್ಯಾನರಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.ಕೆಜಿಎಫ್ ನಿರ್ಮಾಪಕರಾದ ವಿಜಯ್ ಕಿರಂಗದೂರ್ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಈ ಸಲಾರ್ ಚಿತ್ರ ಮೂಹೂರ್ತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಮತ್ತು ಉಪ ಮುಖ್ಯಮಂತ್ರಿಯಾಗಿರುವ ಡಾ.ಅಶ್ವತ್ ನಾರಾಯಣ್ ಅವರು ಭಾಗವಹಿಸಲಿದ್ದಾರೆ.

ಇನ್ನು ಚಿತ್ರರಂಗದ ಗಣ್ಯರಾದ ನಿರ್ದೇಶಕ ಎಸ್.ಎಸ್.ರಾಜಮೌಳಿ, ರಾಕಿಂಗ್ ಸ್ಟಾರ್ ಯಶ್,ಪ್ರಭಾಸ್ ಸೇರಿದಂತೆ ಟಾಲಿವುಡ್ ಅಂಡ್ ಸ್ಯಾಂಡಲ್ ವುಡ್ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಈಗಾಗಲೇ ಸಲಾರ್ ಚಿತ್ರದ ಪೋಸ್ಟರ್ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು,ಪ್ರಭಾಸ್ ಅವರ ಹೊಸ ಲುಕ್ ಕುತೂಹಲ ಕೆರಳಿಸಿದೆ. ಯಶ್ ಅವರ ಅಭಿಮಾನಿಗಳು ಹಾಗು ಸುದ್ದಿಮೂಲಗಳ ಪ್ರಕಾರ ಯಶ್ ಅವರು ನಾಳೆಯ ‘ಸಲಾರ್’ ಚಿತ್ರದ ಮುಹೂರ್ತಕ್ಕೆ ಮುಖ್ಯ ಅತಿಥಿ ಆಗಿ ಹೋಗುತ್ತಿದ್ದಾರಂತೆ. ಕನ್ನಡದಲ್ಲಿ ಕಷ್ಟ ಪಟ್ಟು ಸಾಧನೆ ಮಾಡಿದ ಹಲವಾರು ನಟರಿದ್ದಾರೆ, ಅದರಂತೆಯೇ ಯಶ್ ಕೂಡಾ ಒಬ್ಬ ಕಷ್ಟ ಪಟ್ಟು ಮೇಲೆ ಬಂದ ಸ್ಟಾರ್ ನಟ. ಒಂದು ಕಾಲದಲ್ಲಿ ಅವಕಾಶ ಇಲ್ಲದೆ ಪರದಾಡುತ್ತಿದ್ದ ಯಶ್ ಅವರು ಇಂದು ತೆಲುಗಿನ ದೊಡ್ಡ ನಟನ ಹಾಗೂ ದೊಡ್ಡ ಚಿತ್ರಕ್ಕೆ ಮುಖ್ಯ ಅತಿಥಿ! ಇದಲ್ಲವೇ ನಿಜವಾದ ಯಶಸ್ಸು.

%d bloggers like this: