ಟಾಲಿವುಡ್ ನಲ್ಲಿ ಯಾವುದೇ ಸ್ಟಾರ್ ನಟರ ಸಿನಿಮಾಗಳ ಹವಾ ಇದ್ದರೂ, ಪವನ್ ಕಲ್ಯಾಣ್ ಅವರ ಸಿನಿಮಾ ಬಂತು ಅಂದರೆ ಎಲ್ಲಾ ಕಡೆಗೂ ಪವನ್ ಕಲ್ಯಾಣ್ ಅವರದ್ದೇ ಸೌಂಡು. ಅಷ್ಟರಮಟ್ಟಿಗೆ ಫ್ಯಾನ್ ಫಾಲೋವರ್ಸ್ ಅನ್ನು ಹೊಂದಿರುವ ಪವನ್ ಕಲ್ಯಾಣ್ ಅವರು ಟಾಲಿವುಡ್ ಪವರ್ ಸ್ಟಾರ್ ಎಂದೇ ಖ್ಯಾತಿಯಾದವರು. ಇತ್ತೀಚಿಗೆ ರಾಜಕೀಯವನ್ನು ಪ್ರವೇಶ ಮಾಡಿದ್ದ ಪವನ್ ಕಲ್ಯಾಣ್ ಅವರು ಸಿನಿಮಾ ಮಾಡುವುದನ್ನು ಬಿಡುತ್ತಾರೆ ಎಂದು ಅಭಿಮಾನಿಗಳು ನಿರಾಸೆ ಯಾಗಿದ್ದರು. ಆದರೆ ರಾಜಕೀಯ ರಂಗವನ್ನು ಪ್ರವೇಶಿಸಿದ ನಂತರ ಸ್ವಲ್ಪ ಬ್ರೇಕ್ ತೆಗೆದುಕೊಂಡು ಪವನ್ ಕಲ್ಯಾಣ್ ಕಂಬ್ಯಾಕ್ ಮಾಡಿದ್ದರು. ವಕೀಲ್ ಸಾಬ್ ಆಗಿ ಮತ್ತೆ ಅಭಿಮಾನಿಗಳನ್ನು ರಂಜಿಸಿದ ಪವನ್ ಕಲ್ಯಾಣ್ ಅವರ ಮತ್ತೊಂದು ಹೊಸ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ.

ಹೌದು ಪವನ್ ಕಲ್ಯಾಣ್ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ಭೀಮ್ಲಾ ನಾಯಕ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಭೀಮ್ಲಾ ನಾಯಕ್ ಸಿನಿಮಾ ಮಲಯಾಳಂ ಅಯ್ಯಪ್ಪನುಂ ಕೊಶಿಯುಂ ಚಿತ್ರದ ರೀಮೇಕ್ ಆಗಿದೆ. ಚಿತ್ರದ ಟ್ರೈಲರ್ ನಲ್ಲಿ ಪವನ್ ಕಲ್ಯಾಣ್ ಅವರ ಎಂಟ್ರಿಗೆ ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ಭೀಮ್ಲಾ ನಾಯಕ್ ಚಿತ್ರದಲ್ಲಿ ಪವನ್ ಕಲ್ಯಾಣ್ ಜೊತೆಗೆ ರಾಣಾ ದಗ್ಗುಬಾಟಿ ನಟಿಸಿದ್ದಾರೆ. ಇಲ್ಲಿ ಬಹಳಷ್ಟು ಜನಕ್ಕೆ ಗೊತ್ತಿರದ ವಿಷಯವೆಂದರೆ ರಾಣಾ ದಗ್ಗುಬಾಟಿ ಅವರು ಮಾಡುತ್ತಿರುವ ಈ ಪಾತ್ರಕ್ಕೆ ನಮ್ಮ ಕಿಚ್ಚ ಸುದೀಪ್ ಅವರಿಗೆ ಮೊದಲು ಅವಕಾಶ ನೀಡಲಾಗಿತ್ತು. ಆದರೆ ಕಾರಣಾಂತರಗಳಿಂದ ಸುದೀಪ್ ಅವರು ಈ ಚಿತ್ರ ಮಾಡಲಾಗಲಿಲ್ಲ. ಇದೀಗ ಭೀಮ್ಲಾ ನಾಯಕ್ ಚಿತ್ರದ ಟ್ರೈಲರ್ ನಿಂದ ವಿವಾದವೊಂದು ಸೃಷ್ಟಿಯಾಗಿದೆ.

ಟ್ರೈಲರ್ ನೋಡಿದ ಕಿಚ್ಚನ ಅಭಿಮಾನಿಗಳು ಅಬ್ಬಾ ನಮ್ಮ ಬಾಸ್ ಸಿನಿಮಾ ಕೈಬಿಟ್ಟಿದ್ದೆ ಒಳ್ಳೆಯದಾಯಿತು ಎಂದು ನಿಟ್ಟುಸಿರು ಬಿಡುತ್ತಿದ್ದಾರೆ. ಇನ್ನೊಂದು ಕಡೆ ಪವನ್ ಕಲ್ಯಾಣ್ ನಮ್ಮ ದೇವರು ಎನ್ನುವ ಇಬ್ಬರು ಸೆಲೆಬ್ರಿಟಿಗಳ ಜಗಳ ಎಲ್ಲೆಡೆ ವಿವಾದ ಸೃಷ್ಟಿ ಮಾಡಿದೆ. ಹೌದು ಮೂಲ ಮಲಯಾಳಂ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಮತ್ತು ಬಿಜು ಮೆನನ್ ನಟಿಸಿದ್ದರು. ಇಲ್ಲಿ ಎರಡು ಪಾತ್ರಗಳಿಗೂ ಸಮಾನ ಅವಕಾಶ ನೀಡಲಾಗಿತ್ತು. ಆದರೆ ತೆಲುಗುವಿನಲ್ಲಿ ಪವನ್ ಕಲ್ಯಾಣ್ ಅವರ ಮುಂದೆ ರಾಣಾ ಅವರ ಪಾತ್ರ ಅಷ್ಟೊಂದು ಇಂಪಾರ್ಟೆಂಟ್ ಆಗಿ ಕಾಣಿಸುತ್ತಿಲ್ಲ ಎನ್ನುವ ಭಾವನೆ ಅಭಿಮಾನಿಗಳಿಗೆ ಬಂದಿದೆ. ಇವರಿಬ್ಬರ ಕಾಂಬಿನೇಷನ್ ಚೆನ್ನಾಗಿದ್ದರೂ ರಾಣಾ ಅವರ ಇಮೇಜ್ ಗೆ ಕರೆಕ್ಟ್ ಆಗಿ ಕನೆಕ್ಟ್ ಆಗುತ್ತಿಲ್ಲ.

ಒಂದು ವೇಳೆ ಸುದೀಪ್ ಅವರು ಮಾಡಿದ್ದರೆ ಇದನ್ನು ಒಪ್ಪಿಕೊಳ್ಳೋಕೆ ಆಗುತ್ತಿರಲಿಲ್ಲ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಹೇಳಿಕೊಂಡಿದ್ದಾರೆ. ಇದಷ್ಟೇ ಅಲ್ಲದೇ ಭೀಮ್ಲಾ ನಾಯಕ್ ಟ್ರೈಲರ್ ನೋಡಿ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಪವನ್ ಕಲ್ಯಾಣ್ ಅವರ ಕಾಲೆಳೆದಿದ್ದಾರೆ. ನಿಜವಾಗಿ ಇದು ರಾಣಾ ಅವರ ಸಿನಿಮಾ ಆದರೂ ಟ್ರೈಲರ್ ನಲ್ಲಷ್ಟೇ ಪವನ್ ಇದ್ದಾರೆ. ರಾಣಾ ಅವರನ್ನು ಪ್ರಮೋಟ್ ಮಾಡೋಕೆ ಪವನ್ ಅವರು ಬಳಕೆಯಾಗಿದ್ದರೆ ಅಷ್ಟೇ. ಉತ್ತರ ಭಾರತ ಸೇರಿದಂತೆ ದೇಶಾದ್ಯಂತ ರಾಣಾ ಅವರ ಖ್ಯಾತಿ ಪವನ್ ಅವರಿಗಿಂತ ದೊಡ್ಡದಿದೆ. ಪವನ್ ಕಲ್ಯಾಣ್ ಅವರು ಹೇಗೆ ಚಿತ್ರವನ್ನು ಮಾಡೋಕೆ ಒಪ್ಪಿಕೊಂಡರು ಎಂದು ವ್ಯಂಗ್ಯವಾಡಿದ್ದಾರೆ. ಪವನ್ ಕಲ್ಯಾಣ್ ದೇವರು ಎನ್ನುವ ನಿರ್ದೇಶಕ ಬಂಡ್ಲಾ ಗಣೇಶ್ ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಅವರ ಜಗಳ ಕೂಡ ಬೀದಿಗೆ ಬಿದ್ದಿದೆ.

ನಾನು ಬಂದ್ರೆ ಅವರ ಮೈಲೇಜ್ ಕಡಿಮೆಯಾಗುತ್ತೆ. ಪವನ್ ಕಲ್ಯಾಣ್ ಮುಂದೆ ಶ್ರೀನಿವಾಸ್ ಡಮ್ಮಿ ಆಗ್ತಾನೆ. ಅದಕ್ಕೆ ನನ್ನ ಇನ್ವೈಟ್ ಮಾಡಬೇಡಿ ಎಂದು ಹೇಳಿದ್ದಾರೆ ಎಂದು ಭೀಮ್ಲಾ ನಾಯಕ್ ಪ್ರೀರಿಲೀಸ್ ಕಾರ್ಯಕ್ರಮಕ್ಕೆ ಬಂಡ್ಲಾ ಗಣೇಶ್ ಬಾರದಂತೆ ತ್ರಿವಿಕ್ರಮ್ ಅಡ್ಡ ಹಾಕುತ್ತಿದ್ದಾರೆ ಎಂದು ಅಭಿಮಾನಿಗಳ ಬಳಿ ಫೋನ್ ನಲ್ಲಿ ಮಾತನಾಡಿರುವ ಆಡಿಯೋ ಸೋರಿಕೆಯಾಗಿದೆ. ಇಷ್ಟೆಲ್ಲಾ ವಿವಾದಗಳ ಮಧ್ಯೆ ಬಿಮ್ಲಾ ನಾಯಕ್ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮ ಕ್ಯಾನ್ಸಲ್ ಆಗಿದೆ. ಮತ್ತು ಫೆಬ್ರುವರಿ 24ಕ್ಕೆ ಈ ಕಾರ್ಯಕ್ರಮ ನಡೆಯಲಿದ್ದು, ಫೆಬ್ರುವರಿ 25ಕ್ಕೆ ಭೀಮ್ಲಾ ನಾಯಕ್ ಸಿನಿಮಾ ರಿಲೀಸ್ ಆಗುತ್ತಿದೆ. ಕೇವಲ ಟ್ರೈಲರ್ ರಿಲೀಸ್ ನಿಂದ ಇಷ್ಟೆಲ್ಲಾ ವಿವಾದಗಳಿಗೆ ಕಾರಣವಾದ ಈ ಸಿನಿಮಾ ಎಷ್ಟರಮಟ್ಟಿಗೆ ಜನರನ್ನು ರಂಜಿಸಲು ಯಶಸ್ವಿಯಾಗುತ್ತದೆ ಎಂಬುದನ್ನು ಕಾದುನೋಡಬೇಕು.