ಮೆಗಾಸ್ಟಾರ್ ಚಿರಂಜೀವಿ ಸಿನಿಮಾದಲ್ಲಿ ಕನ್ನಡದ ಈ ಖ್ಯಾತ ನಟ ವಿಲನ್! ಹೌದು ದಕ್ಷಿಣ ಭಾರತದ ಪ್ರಖ್ಯಾತ ನಟರಾಗಿರುವ ಮೆಗಾಸ್ಟಾರ್ ಚಿರಂಜೀವಿಯವರ 152ನೇ ಸಿನಿಮಾವನ್ನು ಟಾಲಿವುಡ್ ಸ್ಟಾರ್ ನಿರ್ದೇಶಕ ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದು, ಈ ಚಿತ್ರಕ್ಕೆ ಆಚಾರ್ಯ ಎಂದು ಟೈಟಲ್ ಲಾಂಚ್ ಮಾಡಿದ್ದಾರೆ. ಈ ಆಚಾರ್ಯ ಸಿನಿಮಾದಲ್ಲಿ ಕಾಜಲ್ ಅಗರ್ವಾಲ್ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಇನ್ನು ಆಚಾರ್ಯ ಸಿನಿಮಾವನ್ನು ಚಿರಂಜೀವಿ ಪುತ್ರರಾದ ರಾಮ್ ಚರಣ್ ತೇಜ ಅವರು ಸ್ವತಃ ಕೋಣಿದೇಲಾ ಪ್ರೋಡಕ್ಷನ್ ಮತ್ತು ಮ್ಯಾಟಿನಿ ಪ್ರೊಡಕ್ಷನ್ ನಿರಂಜನ ರೆಡ್ಡಿಯವರ ಜೊತೆಗೂಡಿ ನಿರ್ಮಿಸುತ್ತಿದ್ದಾರೆ. ಆಚಾರ್ಯ ಸಿನಿಮಾ ಟಾಲಿವುಡ್ನ ಬಿಗ್ ಬಜೆಟ್ ಸಿನಿಮಾ ವಾಗುತ್ತಿದ್ದು, ಇದರಲ್ಲಿ ಕನ್ನಡದ ನಟ ಕಿಶೋರ್ ಮತ್ತು ಬಾಲಿವುಡ್ ಖ್ಯಾತ ನಟರಾದ ಸೋನು ಸೂದ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋನು ಸೂದ್ ಇತ್ತೀಚೆಗೆ ತಮ್ಮ ಮಾನವೀಯ ಗುಣಗಳಿಂದ ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ಸುದ್ದಿಯಾಗಿದ್ದರು.

ಕೊರಟಾಲ ಶಿವ ಆಚಾರ್ಯ ಸಿನಿಮಾದಲ್ಲಿ ವಿಲನ್ ಪಾತ್ರಕ್ಕಾಗಿ ಕನ್ನಡದಲ್ಲಿ ಹೊಸ ಪ್ರತಿಭೆಗಳನ್ನು ಹುಡುಕುತ್ತಿದ್ದಾಗ, ಕಣ್ಣಿಗೆ ಬಿದ್ದಿದ್ದು ಮಾತ್ರ ಕನ್ನಡದ ಈ ಖ್ಯಾತ ಖಳ ನಟ ಸೌರವ್ ಲೋಕಿ, ಸೌರವ್ ಲೋಕಿ ಅಂದರೆ ಇವರು ಗುರುತು ಸಿಗುವುದಿಲ್ಲ ಭಜರಂಗಿ ಲೋಕಿ ಅಂದಾಗ ಮಾತ್ರ ತಟ್ಟನೆ ಇವರು ನೆನಪಿಗೆ ಬರುತ್ತಾರೆ. ಹೌದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಭಜರಂಗಿ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದ ಲೋಕಿ ತನ್ನ ಅಮೋಘ ನಟನೆಯಿಂದ ಪ್ರಶಂಸೆ ಗಳಿಸಿದ್ದರು. ಅಂದಿನಿಂದ ಇವರು ಭಜರಂಗಿ ಲೋಕಿ ಎಂದು ಜನಪ್ರಿಯವಾದರು. ಇನ್ನು ಈ ಚಿತ್ರಕ್ಕೆ ಹರ್ಷ ಆಕ್ಷನ್ ಕಟ್ ಹೇಳಿದ್ದರು.

ಭಜರಂಗಿ ಲೋಕಿ ಮತ್ತೆ ಹರ್ಷ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಭಜರಂಗಿ2 ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಭಜರಂಗಿ 2 ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಭಾರಿ ಮೆಚ್ಚುಗೆ ಪಡೆದುಕೊಂಡಿದೆ. ಈ ಟ್ರೇಲರ್ ನಲ್ಲಿ ಶಿವಣ್ಣ ಅವರೊಂದಿಗೆ ಲೋಕಿ ಘರ್ಜಿಸಿದ್ದಾರೆ. ಭಜರಂಗಿ ಲೋಕಿ ತೆಲುಗಿನಲ್ಲಿ ಆಚಾರ್ಯ ಸಿನಿಮಾದ ನಂತರ ಸದ್ದಿಲ್ಲದೆ ಮತ್ತೊಂದು ಸ್ಟಾರ್ ನಟನ ತೆಲುಗು ಚಿತ್ರಕ್ಕೆ ಆಯ್ಕೆ ಆಗಿದ್ದು, ಈ ವಿಚಾರದ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುತ್ತೇನೆ ಎಂದು ಭಜರಂಗಿ ಲೋಕಿ ತಿಳಿಸಿದ್ದಾರೆ.