ತೆಲುಗು ಬಿಗ್ ಬಾಸ್ ಅಲ್ಲಿ ಕಿಚ್ಚ ಸುದೀಪ್ ಎಂಟ್ರಿ

ಬಿಗ್ ಬಾಸ್ ಮನೆ ಎಂಬುದು ಯಾರಿಗೆ ತಾನೇ ಗೊತ್ತಿರದೇ ಇರಲು ಸಾಧ್ಯ, ಹಿಂದಿ ಭಾಷೆಯಿಂದ ಹಿಡಿದು ದೇಶದ ವಿವಿಧ ಭಾಷೆಗಳಲ್ಲಿ ಈ ಮನರಂಜನಾ ಸ್ಪರ್ಧೆ ಪ್ರಸಿದ್ಧಿ ಪಡೆದಿದೆ. ಕನ್ನಡದ ಬಿಗ್ ಬಾಸ್ ಅನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರು ಹಲವು ವರ್ಷಗಳಿಂದ ತುಂಬಾ ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಬಿಗ್ ಬಾಸ್ ಎಂಬುದು ಎಷ್ಟರಮಟ್ಟಿಗೆ ಖ್ಯಾತಿಯನ್ನು ಪಡೆದಿದೆ ಎಂದರೆ ಅದರಲ್ಲಿ ಭಾಗವಹಿಸಿದ ಸ್ಪರ್ಧಿಗಳು ಸ್ಪರ್ಧೆ ಮುಗಿದಮೇಲೆ ಹೊರಗೆ ಬಂದು ವಿವಿಧ ರೀತಿಯಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆಯುತ್ತಾರೆ ಮತ್ತು ಎಲ್ಲೆಡೆ ಮನೆಮಾತಾಗುತ್ತಾರೆ. ಇಂತಹ ಮೆಚ್ಚುಗೆ ಪಡೆದ ಸ್ಪರ್ಧೆಯನ್ನು ಸುದೀಪ್ ಅವರು ಪ್ರೀತಿಯಿಂದ ನಡೆಸಿಕೊಡುತ್ತಾರೆ. ಈಗಾಗಲೇ ಕನ್ನಡದ ಮುಂದಿನ ಸೀಸನ್ ಗೆ ಸಿದ್ಧತೆಗಳು ನಡೆಯುತ್ತಿವೆ. ಆದರೆ ಈಗ ಸುದೀಪ್ ಅವರು ಸುದ್ದಿಯಲ್ಲಿರುವುದು ಕನ್ನಡದ ಬಿಗ್ ಬಾಸ್ ನಿಂದಲ್ಲ ಬದಲಾಗಿ ತೆಲುಗು ಬಿಗ್ ಬಾಸ್ ಸ್ಪರ್ಧೆಯಿಂದ. ಹೌದು ಸುದೀಪ್ ಅವರು ತೆಲುಗು ಭಾಷೆಯಲ್ಲಿ ಪ್ರಖ್ಯಾತ ನಟ ನಾಗಾರ್ಜುನ ಅವರು ನಡೆಸಿಕೊಡುವ ಬಿಗ್ ಬಾಸ್ ಸ್ಪರ್ಧೆಗೆ ಅತಿಥಿಯಾಗಿ ಭಾಗವಹಿಸಿದ್ದರು. ಇಷ್ಟು ವರ್ಷಗಳ ಕಾಲ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದ ಸುದೀಪ್ ಅವರು ಇದೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಹೋಗಿದ್ದರು. ಈ ವಿಶೇಷ ಅನುಭವದ ವಿಷಯವನ್ನು ಸ್ವತಃ ಸುದೀಪ್ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

%d bloggers like this: