ತೆಲುಗು ಚಿತ್ರಗಳಿಗೆ ಡಬ್ ಮಾಡಿ ಮಾಡಿ ಕನ್ನಡಾನೇ ಬರ್ತಿಲ್ಲ, ರಶ್ಮಿಕಾ ಮಂದಣ್ಣ ಉಡಾಫೆ ಮಾತು

ತೆಲುಗು ಮಾತಾಡಿ ಮಾತಾಡಿ ಕನ್ನಡನೇ ಬರ್ತಿಲ್ಲ ಎಂದ ನಟಿ, ಕನ್ನಡ ಚಿತ್ರರಂಗದಿಂದ ಬಣ್ಣದ ಲೋಕಕ್ಕೆ ಹೆಜ್ಜೆ ಇಟ್ಟ ಅನೇಕ ನಟ-ನಟಿಯರು ಇಂದು ಪರಭಾಷೆ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಅದರಲ್ಲೂ ನಟಿಯರಂತೂ ಸಿಕ್ಕಾಪಟ್ಟೆ ಸ್ಟಾರ್ ಢಮ್ ಬೆಳೆಸಿಕೊಂಡು ದಕ್ಷಿಣ ಭಾರತ ಚಿತ್ರರಂಗವನ್ನು ಆಳುತ್ತಿದ್ದಾರೆ. ಅಂತಹ ನಟಿಯರ ಪೈಕಿ ನ್ಯಾಷನಲ್ ಕ್ರಶ್ ಎಂದೇ ಕರೆಸಿಕೊಳ್ಳುವ ನಟಿ ರಶ್ಮಿಕಾ ಮಂದಣ್ಣ ಮೊದಲ ಪಂಕ್ತಿಯಲ್ಲಿ ಕಾಣ ಸಿಗುತ್ತಾರೆ. ಹೌದು ರಿಷಭ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಚಿತ್ರದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಬಣ್ಣದ ಲೋಕಕ್ಕೆ ಹೆಜ್ಜೆ ಇಟ್ಟಂತಹ ರಶ್ಮಿಕಾ ಮಂದಣ್ಣ ತಮ್ಮ ಮೊದಲ ಚಿತ್ರದಲ್ಲೇ ತಮ್ಮ ನಟನೆ ಮತ್ತು ಸೌಂದರ್ಯದಿಂದ ಸಿನಿ ಪ್ರೇಕ್ಷಕರ ಮನ ಗೆದ್ದರು.

ಕಿರಿಕ್ ಪಾರ್ಟಿ ಚಿತ್ರದ ಅಮೋಘ ಯಶಸ್ಸಿನ ನಂತರ ನಟಿ ರಶ್ಮಿಕಾ ಮಂದಣ್ಣ ಅವರಿಗೆ ತದ ಟಾಲಿವುಡ್ ನಲ್ಲಿ ಅಪಾರ ಅವಕಾಶಗಳು ಸಿಗುತ್ತವೆ. ವಿಜಯ್ ದೇವರಕೊಂಡ ಜೊತೆ ಗೀತಾ ಗೋವಿಂದಂ ಚಿತ್ರದಲ್ಲಿ ನಟಿಸಿದ ರಶ್ಮಿಕಾ ಮಂದಣ್ಣ ಅವರಿಗೆ ಅದೃಷ್ಟವೇ ಬದಲಾಯಿಸುತ್ತದೆ. ಅಷ್ಟರ ಮಟ್ಟಿಗೆ ತೆಲುಗು ಚಿತ್ರರಂಗದಲ್ಲಿ ಅವರ ಜನಪ್ರಿಯತೆ ಸೃಷ್ಟಿಯಾಗುತ್ತದೆ. ಇದಾದ ಬಳಿಕ ತಮಿಳಿನಲ್ಲಿ ಕಾರ್ತಿ, ಹಿಂದಿಯಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೊಟ್ಟಿಗೂ ಕೂಡ ನಟಿಸಿ ಸೈ ಎನಿಸಿಕೊಳ್ಳುತ್ತಾರೆ. ಹೀಗೆ ಕನ್ನಡ, ತೆಲುಗು, ತಮಿಳು ಹಿಂದಿ ಸಿನಿಮಾಗಳಲ್ಲಿ ನಟಿಸಿ ದಕ್ಷಿಣ ಭಾರತ ಚಿತ್ರರಂಗ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡು ಅಪಾರ ಜನಪ್ರಿಯತೆಯನ್ನು ಗಳಿಸಿದ್ದಾರೆ.

ಅತ್ಯಂತ ಕಡಿಮೆ ಅವಧಿಯಲ್ಲಿ ಇಡೀ ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ಜನಪ್ರಿಯ ನಟಿಯಾಗಿ ಹೊರಹೊಮ್ಮಿರುವ ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡತಿ ಎಂಬುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವೇ ಸರಿ. ಆದರೆ ನಟಿ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರಗಳಿಂದ ಕೊಂಚ ದೂರವಾದ ನಂತರ ತೆಲುಗು ಮತ್ತು ತಮಿಳಿನಲ್ಲಿ ಮಾತಾಡುವಷ್ಟು ಕೂಡ ರಶ್ಮಿಕಾ ಮಂದಣ್ಣ ಕನ್ನಡ ಭಾಷೆಯಲ್ಲಿ ಮಾತನಾಡುವುದಿಲ್ಲ. ಕನ್ನಡ ಭಾಷೆ ಗೊತ್ತೇ ಇಲ್ಲದಂತೆ ಇವೆಂಟ್ ಗಳಲ್ಲಿ ವರ್ತಿಸುತ್ತಾರೆ. ಅದಕ್ಕೆ ಸಾಕ್ಷಿಯಾಗಿ ನಿನ್ನೆ ಅಂದರೆ ಡಿಸೆಂಬರ್ 15ರಂದು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರದ ಪ್ರಮೋಷನ್ ಗಾಗಿ ರಶ್ಮಿಕಾ ಮಂದಣ್ಣ ಬೆಂಗಳೂರಿಗೆ ಆಗಮಿಸಿದ್ದರು.

ಪುಷ್ಪ ಚಿತ್ರದ ಈ ಪ್ರಮೋಶನ್ ವೇದಿಕೆ ಮೇಲೆ ಬಂದು ಮಾತನಾಡುತ್ತಿದ್ದ ರಶ್ಮಿಕಾ ಶೇಕಡ 70 ರಷ್ಟು ಇಂಗ್ಲೀಷ್ ನಲ್ಲಿಯೇ ಮಾತನಾಡಿದರು. ನಟಿ ರಶ್ಮಿಕಾ ಮಂದಣ್ಣ ನವರಿಗೆ ನಿರೂಪಕಿ ಪುಷ್ಪ ಚಿತ್ರದ ಡೈಲಾಡ್ ಅನ್ನು ಕನ್ನಡದಲ್ಲಿ ಎರಡು ಸಾಲು ಹೇಳಿ ಎಂದಾಗ ತಡಬಡಾಯಿಸಿದರು. ಇನ್ನು ಪುಷ್ಪ ಚಿತ್ರದಲ್ಲಿ ನೀವ್ಯಾಕೆ ಕನ್ನಡ ಡಬ್ ಮಾಡಿಲ್ಲ ಎಂಬುದಕ್ಕೆ ಸಮಯದ ಅಭಾವ ಎಂದು ಉತ್ತರಿಸಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರ ಈ ಹೇಳಿಕೆಯಿಂದ ಸೋಶಿಯಲ್ ಮೀಡಿಯಾಗಳಲ್ಲಿ ರಶ್ಮಿಕಾ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.

%d bloggers like this: