ತೆಲುಗು ಚಿತ್ರರಂಗದತ್ತ ಹೆಜ್ಜೆ ಇಟ್ಟ ಮತ್ತೊಬ್ಬ ಕನ್ನಡ ನಟಿ

ಕನ್ನಡ ಚಿತ್ರರಂಗದಿಂದ ತಮ್ಮ ಸಿನಿಪಯಣ ವನ್ನು ಶುರು ಮಾಡಿ, ತಮ್ಮ ನಟನೆಯಿಂದ ಎಲ್ಲರ ಮನಗೆದ್ದು ಬೇರೆ ಭಾಷೆಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ನಟಿಯರಲ್ಲಿ ಇದೀಗ ಮತ್ತೊಬ್ಬ ಕನ್ನಡದ ನಟಿ ಸೇರ್ಪಡೆಗೊಳ್ಳುತ್ತಿದ್ದಾರೆ. ಹೌದು ಕನ್ನಡದಲ್ಲಿ ತಮ್ಮ ಮೊದಲ ಡೆಬ್ಯೂ ಮಾಡಿ ಆನಂತರ ಬೇರೆ ಭಾಷೆಗಳಿಗೆ ಪಾದಾರ್ಪಣೆ ಮಾಡಿದ ನಟಿಯರಲ್ಲಿ ರಶ್ಮಿಕಾ ಮಂದಣ್ಣ ಹಾಗೂ ನಟಿ ಶ್ರೀಲೀಲಾ ಅವರ ನಂತರ ಇದೀಗ ಮತ್ತೊಬ್ಬ ನಟಿ ಈ ಲಿಸ್ಟ್ ಗೆ ಸೇರಿಕೊಳ್ಳುತ್ತಿದ್ದಾರೆ. ಹೌದು ಇತ್ತೀಚೆಗೆ ರಿಲೀಸ್ ಆಗಿ ಯಶಸ್ಸು ಕಂಡ ಸಲಗ ಚಿತ್ರದ ನಾಯಕ ನಟಿ ಸಂಜನಾ ಆನಂದ್ ಇದೀಗ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ಸಲಗ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿರುವ ಇವರನ್ನು ತೆಲುಗು ಸಿನಿಮಾ ಇಂಡಸ್ಟ್ರಿ ಕೈಬೀಸಿ ಕರೆಯುತ್ತಿದೆ. ನಟಿ ಸಂಜನಾ ಆನಂದ್ ಅವರು ಕೆಮೆಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಸಂಜನಾ ಆನಂದ್ ಅವರು ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ನಿರ್ದೇಶಕರ ಜೊತೆ ಹೊಸ ಹೊಸ ಚಿತ್ರಗಳಿಗೆ ಸಹಿ ಮಾಡಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಟಾಲಿವುಡ್ ಗೂ ಪದಾರ್ಪಣೆ ಮಾಡುತ್ತಿದ್ದಾರೆ. ಸಂಜನಾ ಅವರು ನಿರೂಪಕಿ ಹಾಗೂ ನಟಿಯಾಗಿರುವ ಶೀತಲ್ ಶೆಟ್ಟಿ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ವಿಂಡೋಸೀಟ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ರಂಗಿತರಂಗ ಸಿನಿಮಾ ಖ್ಯಾತಿಯ ನಟ ನಿರುಪ್ ಭಂಡಾರಿ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಇನ್ನು ಇದರ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ನಟಿ ಸಂಜನಾ ಅವರು ನಟನೆಗೆ ಆದ್ಯತೆ ಇರುವ ಚಿತ್ರಗಳಲ್ಲಿ ನಟಿಸಬೇಕು ಎಂಬುದು ನನ್ನ ಆಸೆ. ಸದ್ಯಕ್ಕೆ ಅನೇಕ ಕನ್ನಡ, ತೆಲುಗು, ತಮಿಳು ಕಥೆಗಳು ಬರುತ್ತಿವೆ. ಏಪ್ರಿಲ್ ನಲ್ಲಿ ಒಂದು ಕನ್ನಡ ಸಿನಿಮಾ ಫೈನಲ್ ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಸದ್ಯಕ್ಕೆ ತೆಲುಗು ಚಿತ್ರರಂಗದಲ್ಲಿ ಅಭಿನಯಿಸುತ್ತಿರುವ ಸಂಜನಾ ಅವರ ಚಿತ್ರದ ಹೆಸರು ನೇನು ಮೀಕು ಬಾಗಾ ಕವಾಲ್ಸಿನಿವಾಡಿನಿ. ಈ ಚಿತ್ರದಲ್ಲಿ ಸಂಜನಾ ಅವರದು ತೇಜು ಎಂಬ ಹುಡುಗಿಯ ಪಾತ್ರ.

ನೇನು ಮೀಕು ಬಾಗಾ ಕವಾಲ್ಸಿನಿವಾಡಿನಿ ಸಿನಿಮಾ ಒಂದು ಕಂಪ್ಲೀಟ್ ಲವ್ ಸ್ಟೋರಿ. ಈ ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ನಟಿ ಸಂಜನಾ ಅವರು, ಎರಡು ಶೇಡ್ ನಲ್ಲಿ ನನ್ನ ಪಾತ್ರವಿದೆ ಎಂದು ಹೇಳಿದ್ದಾರೆ. ಇನ್ನು ಸಂಜನಾ ಅವರಿಗೆ ನಾಯಕನಾಗಿ ಎಸ್ಆರ್ ಕಲ್ಯಾಣ ಮಂಟಪಂ ಚಿತ್ರದಲ್ಲಿ ನಾಯಕನಾಗಿ ನಟಿಸಿದ ಕಿರಣ್ ಅಬ್ಬಾವರಂ ನಾಯಕನಾಗಿ ನಟಿಸುತ್ತಿದ್ದಾರೆ. ತೆಲುಗು ಚಿತ್ರರಂಗದ ಹೆಸರಾಂತ ನಿರ್ದೇಶಕ ಕೋಡಿ ರಾಮಕೃಷ್ಣ ಅವರ ಮಗಳು ದಿವ್ಯ ದೀಪ್ತಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಒಂದು ಕ್ಯೂಟ್ ಲವ್ ಸ್ಟೋರಿ ಆಗಿರುವ ಈ ಚಿತ್ರದಲ್ಲಿ ಸಿನಿಮಾದುದ್ದಕ್ಕೂ ಟ್ವಿಸ್ಟ್ ಗಳಿವೆ. ಈ ಚಿತ್ರದ ಸಂಜನಾ ಅವರ ಫಸ್ಟ್ ಲುಕ್ ನ್ನು ಇತ್ತೀಚಿಗೆ ನೇನು ಮೀಕು ಬಾಗಾ ಕವಾಲ್ಸಿನಿವಾಡಿನಿ ಚಿತ್ರತಂಡ ಬಿಡುಗಡೆ ಮಾಡಿದೆ. ಈ ಮೂಲಕ ಮತ್ತೊಬ್ಬ ಕನ್ನಡದ ನಟಿ ಟಾಲಿವುಡ್ ಗೆ ಕಾಲಿಟ್ಟಂತಾಗಿದೆ.

%d bloggers like this: