ತೆಲುಗು ಚಿತ್ರರಂಗದತ್ತ ಹೊರಟ ರಚಿತಾರಾಮ್ ಹಾಗೂ ಪ್ರೇಮ್ ಅವರ ಚಿತ್ರತಂಡ

ಹ್ಯಾಟ್ರಿಕ್ ಡೈರೆಕ್ಟರ್ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಏಕ್.ಲವ.ಯಾ ಸಿನಿಮಾ ಈಗಾಗಲೇ ಹಾಡುಗಳು ಮತ್ತೆ ಟೀಸರ್, ಟ್ರೇಲರ್ ಯಿಂದ ರಾಜ್ಯಾದ್ಯಂತ ಸಖತ್ ಸೌಂಡ್ ಮಾಡುತ್ತಿದೆ. ಇದೀಗ ಟಾಲಿವುಡ್ ನಲ್ಲಿಯೂ ಸಹ ಏಕ್.ಲವ್.ಯಾ ಸಿನಿಮಾದ ಸೌಂಡ್ ಜೋರು ಮಾಡಲು ಭರ್ಜರಿಯಾಗಿ ತಯಾರಿ ನಡೆಸುತ್ತಿದ್ದಾರೆ ನಿರ್ಮಾಪಕಿ ರಕ್ಷಿತಾ ಪ್ರೇಮ್. ರಕ್ಷಿತಾ ಪ್ರೇಮ್ ಅವರ ಸೋದರ ರಾಣಾ ಏಕ್.ಲವ್.ಯಾ ಚಿತ್ರದ ಮೂಲಕ ಸ್ಯಾಂಡಲ್ ವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ. ಕೇವಲ ಕನ್ನಡ ಮಾತ್ರ ಅಲ್ಲದೇ ಏಕ ಕಾಲಕ್ಕೆ ಟಾಲಿವುಡ್ ನಲ್ಲಿಯೂ ಕೂಡ ಮಿಂಚಿಸಲು ಹೈದ್ರಾಬಾದ್ ನಲ್ಲಿ ಏಕ್.ಲವ್.ಯಾ ಸಿನಿಮಾದ ಪ್ರೀರಿಲೀಸ್ ಇವೆಂಟ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮಕ್ಕೆ ಟಾಲಿವುಡ್ ಸ್ಟಾರ್ ನಟರಾದ ಜ್ಯೂನಿಯರ್ ಎನ್.ಟಿ.ಆರ್ ರವಿ ತೇಜಾ, ಮಹೇಶ್ ಬಾಬು ಜಗಪತಿ ಬಾಬು, ನಿರ್ದೇಶಕ ಪೂರಿ ಜಗನ್ನಾಥ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಏಕ್.ಲವ್.ಯಾ ಸಿನಿಮಾಗೆ ಮ್ಯಾಜ಼ಕಲ್ ಕಂಪೋಸರ್ ಅರ್ಜುನ್ ಜನ್ಯ ರಾಗ ಸಂಯೋಜನೆ ಮಾಡಿದ್ದು, ಇತ್ತೀಚೆಗೆ ರಿಲೀಸ್ ಆದ ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಹಾಡು ಯೂಟ್ಯೂಬ್ ನಲ್ಲಿ ಬರೋಬ್ಬರಿ ಐದು ಮಿಲಿಯನ್ ವೀಕ್ಷಣೆ ಪಡೆದು ಸೂಪರ್ ಹಿಟ್ ಆಗಿದೆ. ನಾಯಕ ನಟ ರಾಣಾ ಅವರಿಗೆ ಜೋಡಿಯಾಗಿ ನಟಿ ರೀಷ್ಮಾ,ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸಿದ್ದಾರೆ.

ತೆಲುಗಿನಲ್ಲಿ ಜನಪ್ರಿಯ ಗಾಯಕಿಯಾಗಿ ಮಿಂಚುತ್ತಿರುವ ಸತ್ಯವತಿ ಮಂಗ್ಲಿ ಅವರು ಏಕ್ ಲವ್ ಯಾ ಚಿತ್ರದ ಎಣ್ಣೆ ಸಾಂಗ್ ಗೆ ದನಿಯಾಗಿದ್ದು ಈ ಹಾಡು ಆಂಧ್ರದಲ್ಲಿಯೂ ಕೂಡ ಸಖತ್ ಸೌಂಡ್ ಮಾಡಲು ಸಿದ್ದವಾಗಿದೆ. ಇನ್ನು ಏಕ್ ಲವ್ ಯಾ ಸಿನಿಮಾವನ್ನು ಜನವರಿ 21ರಂದು ಪಂಚಭಾಷೆಗಳಲ್ಲಿ ರಿಲೀಸ್ ಮಾಡಲು ಪ್ರೇಮ್ ಯೋಜನೆ ಹಾಕಿಕೊಂಡಿದ್ದಾರೆ. ಸಿನಿಮಾದ ಪ್ರಮೋಶನ್ ವಿಚಾರದಲ್ಲಿ ಪಂಟ್ರು ಆಗಿರುವ ಪ್ರೇಮ್ ಎಂದಿನಂತೆ ತಮ್ಮ ಸಿನಿಮಾಗಳಿಗೆ ಯಾವೆಲ್ಲಾ ರೀತಿಯ ಭರ್ಜರಿ ಪ್ರಚಾರ ಕಾರ್ಯ ಮಾಡುತ್ತಿದ್ದರೋ ಅದೇ ರೀತಿಯಾಗಿ ಏಕ್.ಲವ್.ಯಾ ಸಿನಿಮಾಗೂ ಕೂಡ ಭರ್ಜರಿಯಾಗಿಯೇ ಸಿದ್ದಮಾಡಿಕೊಂಡಿದ್ದಾರೆ.

%d bloggers like this: