ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟೇ ಬಿಟ್ರು ದರ್ಶನ್

ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದರೆ ಒಂದು ಬೇರೆಯದೇ ಹವಾ ಇದೆ. ಅವರ ನೇರ ನುಡಿ ಮಾಸ್ ಆಕ್ಟಿಂಗ್ ಮತ್ತು ನಿಜ ಜೀವನದಲ್ಲಿ ಅವರ ಲೈಫ್ ಸ್ಟೈಲ್ ಗೆ ಮೆಚ್ಚಿ ಅಭಿಮಾನಿಗಳು ದರ್ಶನ್ ಅವರನ್ನು ಆರಾಧಿಸುತ್ತಾರೆ. ಅವರ ಒಂದು ಚಿತ್ರ ಬಿಡುಗಡೆ ಆಗುವುದು ಎಂದರೆ ಸಾಕು ಅದನ್ನು ಹಬ್ಬದಂತೆ ಆಚರಿಸುವ ಸಾವಿರಾರು ಪಕ್ಕ ದರ್ಶನ್ ಅಭಿಮಾನಿಗಳು ನಮ್ಮಲ್ಲಿ ಸಿಗುತ್ತಾರೆ. ಒಬ್ಬ ಕನ್ನಡ ಚಿತ್ರರಂಗದ ಖಳ ನಾಯಕನ ಮಗನಾಗಿ ದರ್ಶನ್ ಅವರು ಸಂಪಾದಿಸಿದ ಜನರ ಪ್ರೀತಿ ಮತ್ತು ಮಮತೆ ನಿಜಕ್ಕೂ ಶ್ಲಾಘೀಯವಾದುದು.

ತೂಗುದೀಪ ಶ್ರೀನಿವಾಸ್ ಅವರಿಂದ ನಟನೆಯನ್ನು ರಕ್ತಗತವಾಗಿ ಪಡೆದುಕೊಂಡ ದರ್ಶನ್ ಸದ್ದಿಲ್ಲದೆ ಕನ್ನಡ ಸಿನಿವನದ ಟಾಪ್ ನಟನಾಗಿ ನಿಂತಿದ್ದು ಈಗ ಇತಿಹಾಸ. ಈಗ ದರ್ಶನ್ ಅವರ ಹೊಸ ಚಿತ್ರ ರಾಬರ್ಟ್ ಶೂಟಿಂಗ್ ಪ್ರಾರಂಭ ಆದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಎಲ್ಲೆಡೆ ಸದ್ದು ಮಾಡುತ್ತಿದೆ. ನಿರ್ದೇಶಕ ತರುಣ್ ಸುಧೀರ್ ಅವರು ದರ್ಶನ್ ಅವರನ್ನು ಹೊಸದೊಂದು ಆಯಾಮದಲ್ಲಿ ತೋರಿಸಿದ್ದು ಇದೀಗ ಅವರ ಲಕ್ಷಾಂತರ ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಈ ನಡುವೆ ರಾಬರ್ಟ್ ಚಿತ್ರತಂಡ ಮತ್ತೊಂದು ಘೋಷಣೆಯನ್ನು ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಮಾಡಿದೆ. ಅದೇನೆಂದರೆ ಮಾರ್ಚ್ 11 ರಂದು ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಬೇಕಿದ್ದ ಚಿತ್ರ ಇದೀಗ ಅದೇ ದಿನ ಕನ್ನಡದ ಜೊತೆ ತೆಲುಗು ಭಾಷೆಯಲ್ಲಿ ಸಹ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಈ ಕುರಿತು ಸ್ವತಃ ನಟ ದರ್ಶನ್ ಅವರು ನಿನ್ನೆ ಟ್ವೀಟ್ ಮೂಲಕ ತಿಳಿಸಿದ್ದಾರೆ. ಈ ಮೂಲಕ ಟಾಲಿವುಡ್ ಅಂಗಳಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಲಿಡಲಿದ್ದಾರೆ. ಈ ವಿಷಯ ತಿಳಿದ ಅವರ ತೆಲುಗು ಅಭಿಮಾನಿಗಳು ಸಹ ದರ್ಶನ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದು ಧನ್ಯವಾದಗಳನ್ನು ತಿಳಿಸಿದ್ದಾರೆ.

ಎಸ್ ಉಮಾಪತಿ ಅವರ ನಿರ್ಮಾಣದಲ್ಲಿ ರಾಬರ್ಟ್ ಚಿತ್ರ ತುಂಬಾ ಅದ್ದೂರಿಯಾಗಿ ಮೂಡಿಬರಲಿದೆ ಎಂಬ ಮಾತುಗಳು ಸಿಕ್ಕಾಪಟ್ಟೆ ಕೇಳಿಬರುತ್ತಿವೆ. ಇನ್ನೇನು ಕೆಲವೇ ದಿನಗಳಲ್ಲಿ ತೆಲುಗು ಅವತಾರಣಿಕೆಯ ಟೀಸರ್ ರಿಲೀಸ್ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ. ಅರ್ಜುನ್ ಜನ್ಯ ಈ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದು ಈಗಾಗಲೇ ಹಾಡುಗಳು ನಿರೀಕ್ಷೆಗೂ ಮೀರಿದಂತೆ ವೈರಲ್ ಆಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಮಾರ್ಚ್ 11 ರಂದು ದರ್ಶನ್ ಅವರ ಕನ್ನಡ ಮತ್ತು ತೆಲುಗು ಅಭಿಮಾನಿಗಳಿಗೆ ಹಬ್ಬದೂಟ ಸಿಗಲಿದೆ ಎನ್ನಬಹುದು.

%d bloggers like this: