ತೆಲುಗು ದೊಡ್ಡ ನಟನ ಚಿತ್ರಕ್ಕೆ ದುನಿಯಾ ವಿಜಯ್ ಆಯ್ತು ಈಗ ಇನ್ನೊಬ್ಬ ನಟಿಯ ಎಂಟ್ರಿ

ಟಾಲಿವುಡ್ ಸೂಪರ್ ಸ್ಟಾರ್ ನಟ ಬಾಲಕೃಷ್ಣ ಅವರ 107 ನೇ ಚಿತ್ರದಲ್ಲಿ ಸ್ಯಾಂಡಲ್ ವುಡ್ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಖಡಕ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಇದರ ಬೆನ್ನಲ್ಲೇ ದಕ್ಷಿಣ ಭಾರತದ ಮತ್ತೊಬ್ಬ ಖ್ಯಾತ ನಟಿ ಕೂಡ ಬಾಲಯ್ಯನ ಚಿತ್ರದಲ್ಲಿ ಖಳ ನಟಿ ಪಾತ್ರದಲ್ಲಿ ಅಭಿನಯಿಸಿಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಹೌದು ಇತ್ತೀಚೆಗೆ ಒಂದು ಭಾಷೆಯ ಸಿನಿಮಾರಂಗದ ಜನಪ್ರಿಯ ನಟ-ನಟಿಯರು ಮತ್ತೊಂದು ಭಾಷೆಯ ಚಿತ್ರಗಳಲ್ಲಿ ನಟಿಸುತ್ತಿರುವುದು ಒಂದು ರೀತಿಯ ಸೌಹಾರ್ದಯುತವಾದ ಭಾವನೆ ಮೂಡುವಂತಹ ವಾತಾವರಣ ನಿರ್ಮಾಣವಾಗಿದೆ. ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್, ಸೇರಿದಂತೆ ಒಂದಷ್ಟು ಕನ್ನಡದ ನಟರು ಪರಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದ ಪರಭಾಷೆಯ ನಾಡಿನಲ್ಲಿಯೂ ಕೂಡ ತಮ್ಮದೇಯಾದ ಅಭಿಮಾನಿಗಳ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಇದೀಗ ಈ ನಟರ ಸಾಲಿಗೆ ದುನಿಯಾ ವಿಜಯ್ ಕೂಡ ಸೇರ್ಪಡೆಗೊಂಡಿದ್ದಾರೆ. ದುನಿಯಾ ವಿಜಯ್ ತೆಲುಗಿನ ಖ್ಯಾತ ನಟ ಬಾಲಕೃಷ್ಣ ಅವರ ಸಿನಿಮಾದಲ್ಲಿ ಖಳ ನಟನಾಗಿ ಘರ್ಜಿಸಲು ಸಜ್ಜಾಗುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಅವರು ತಮ್ಮ ಹೇರ್ ಸ್ಟೈಲ್ ಅನ್ನು ಫುಲ್ ಡಿಫ್ರೆಂಟ್ ಆಗಿ ಮಾಡಿಸಿದ್ದಾರೆ. ಇದೀಗ ದಕ್ಷಿಣ ಭಾರತ ಚಿತ್ರರಂಗದ ಹೊಸ ಸುದ್ದಿ ಏನಪ್ಪಾ ಅಂದರೆ ಟಾಲಿವುಡ್ ಪ್ರಖ್ಯಾತ ನಿರ್ದೇಶಕ ಗೋಪಿಚಂದ್ ಮಲಿನೇನಿ ನಿರ್ದೇಶನದಲ್ಲಿ ಮೂಡಿಬರಲಿರುವ ಬಾಲಕೃಷ್ಣ ಅವರ 107 ನೇ ಸಿನಿಮಾದಲ್ಲಿ ಖಡಕ್ ಲೇಡಿ ವಿಲನ್ ಪಾತ್ರಕ್ಕೆ ತಮಿಳಿನ ಖ್ಯಾತ ನಟ ಶರತ್ ಕುಮಾರ್ ಪುತ್ರಿ ನಟಿ ವರಲಕ್ಷ್ಮಿ ಆಯ್ಕೆ ಆಗಿದ್ದಾರಂತೆ.

ನಟಿ ವರಲಕ್ಷ್ಮಿ ತಮಿಳು ಚಿತ್ರರಂಗದಲ್ಲಿ ಜನಪ್ರಿಯ ನಟಿ. ನಾಯಕಿಯಾಗಿ ನಿರೀಕ್ಷೆ ಮಟ್ಟದ ಯಶಸ್ಸು ಕಾಣದಿದ್ದರು ಕೂಡ ಖಳ ನಾಯಕಿಯ ಪಾತ್ರದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ ನಟಿ ವರಲಕ್ಷ್ಮಿ. ಇದೀಗ ವರಲಕ್ಷ್ಮಿ ಬಾಲಯ್ಯ ಅವರ ಈ ಹೊಸ ಚಿತ್ರದಲ್ಲಿ ಯಾವ ಖಳ ನಾಯಕಿ ಪಾತ್ರದಲ್ಲಿ ನಟಿಸಲಿದ್ದಾರಂತೆ. ಆದರೆ ವರಲಕ್ಷ್ಮಿ ವಿಜಯ್ ಅವರಿಗೆ ನಾಯಕಿಯಾಗಲಿದ್ದಾರಾ ಅಥವಾ ಬಾಲ್ಯಯ ಅವರಿಗೆ ನೇರ ನೇರ ಖಳ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಾ ಎಂಬುದನ್ನ ಕಾದು ನೋಡಬೇಕಾಗಿದೆ. ಇನ್ನು ಕಾಲಿವುಡ್ ಸ್ಟಾರ್ ನಟಿ ವರಲಕ್ಷ್ಮಿ ಅವರು ಕನ್ನಡದಲ್ಲಿ ಕಿಚ್ಚ ಸುದೀಪ್ ನಟಿಸಿ ನಿರ್ದೇಶನ ಮಾಡಿದ್ದ ಮಾಣಿಕ್ಯ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು.

%d bloggers like this: