ತೆಲುಗು ಸ್ಟಾರ್ ನಟನ ಚಿತ್ರದಲ್ಲಿ ಖಳನಾಯಕನಾಗಿ ಕನ್ನಡ ಸ್ಟಾರ್ ನಟನ ಎಂಟ್ರಿ

ತೆಲುಗು ಚಿತ್ರರಂಗಕ್ಕೆ ಕನ್ನಡದ ಕರಿಚಿರತೆ ಲಗ್ಗೆ ಇಡಲು ಸಜ್ಜಾಗಿದೆ, ಸ್ಯಾಂಡಲ್ ವುಡ್ ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಸೇರಿದಂತೆ, ಕಿಚ್ಚ ಸುದೀಪ್, ಸಾಯಿಕುಮಾರ್ ಹೀಗೆ ಒಂದಷ್ಟು ಕನ್ನಡದ ನಟರು ಪರಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದ ಪರಭಾಷೆಯ ನಾಡಿನಲ್ಲಿಯೂ ಕೂಡ ತಮ್ಮದೇಯಾದ ಅಭಿಮಾನಿಗಳ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಇದೀಗ ಈ ನಟರ ಸಾಲಿಗೆ ಕನ್ನಡ ಚಿತ್ರರಂಗದ ಬ್ಲ್ಯಾಕ್ ಕೋಬ್ರಾ, ಕರಿ ಚಿರತೆ, ಇತ್ತೀಚೆಗೆ ಸಲಗ ಖ್ಯಾತಿಯ ದುನಿಯಾ ವಿಜಯ್ ಕೂಡ ಸೇರ್ಪಡೆಗೊಳ್ಳಲು ಸಿದ್ದರಾಗುತ್ತಿದ್ದಾರೆ. ಹೌದು ದುನಿಯಾ ವಿಜಯ್ ತೆಲುಗಿನ ಖ್ಯಾತ ನಟ ಬಾಲಕೃಷ್ಣ ಅವರ ಸಿನಿಮಾದಲ್ಲಿ ಖಳ ನಟನಾಗಿ ಘರ್ಜಿಸಲು ಸಜ್ಜಾಗುತ್ತಿದ್ದಾರಂತೆ.

ಈ ಹಿಂದೆ ಅನೇಕ ಬಾರಿ ದುನಿಯಾ ವಿಜಯ್ ಅವರಿಗೆ ತೆಲುಗು ಮತ್ತು ತಮಿಳು ಭಾಷೆಯಲ್ಲಿ ನಟಿಸಲು ಅವಕಾಶ ಒದಗಿ ಬಂದಿತ್ತಂತೆ. ಆದರೆ ವಿಜಯ ಅವರಿಗೆ ಅದ್ಯಾಕೋ ಆ ಕಡೆ ಹೋಗಲು ಮನಸ್ಸಾಗಲಿಲ್ಲ ಎಂದೆನಿಸುತ್ತದೆ. ಇದೀಗ ದುನಿಯಾ ವಿಜಯ್ ಬಾಲಯ್ಯ ಅವರ 107 ನೇ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲು ಅವಕಾಶ ಸಿಕ್ಕಿದ್ದು, ಈ ಅವಕಾಶವನ್ನು ದುನಿಯಾ ವಿಜಯ್ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೇ ತೆರೆಕಂಡು ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿರುವ ಬಾಲಯ್ಯ ಅವರ ಅಖಂಡ ಚಿತ್ರ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದೆ.

ಇದೀಗ ಬಾಲಯ್ಯ ಅವರ 107 ನೇ ಚಿತ್ರಕ್ಕೆ ಖ್ಯಾತ ನಿರ್ದೇಶಕ ಗೋಪಿಚಂದ್ ಮಲಿನೇನಿ ಅವರು ಆಕ್ಷನ್ ಕಟ್ ಹೇಳಲಿದ್ದಾರೆ. ಇವರ ನಿರ್ದೇಶನದ ಈ ಹೊಸ ಚಿತ್ರದಲ್ಲಿ ಬಾಲಯ್ಯ ಅವರ ಎದುರಿಗೆ ವಿಜಯ್ ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನ ಕಾದು ನೋಡಬೇಕಾಗಿದೆ. ಈಗಾಗಲೇ ದುನಿಯಾ ವಿಜಯ್ ಅವರು ತಮ್ಮ ಹೇರ್ ಸ್ಟೈಲ್ ಬದಲಾಯಿಸಿಕೊಂಡಿದ್ದು, ಅದರ ಒಂದಷ್ಟು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿವೆ. ಇನ್ನು ನಟ ದುನಿಯಾ ವಿಜಯ್ ಅವರು ನಟಿಸಿ ತಾವೇ ನಿರ್ದೇಶಿಸಿದ ಮೊಟ್ಟ ಮೊದಲ ಸಲಗ ಸಿನಿಮಾ ಕೂಡ ಅಮೋಘ ಯಶಸ್ಸು ಕಂಡಿದೆ.

ಈ ಚಿತ್ರದ ಯಶಸ್ಸಿನ ನಂತರ ದುನಿಯಾ ವಿಜಯ್ ಅವರು ಹೆಚ್ಚು ಸುದ್ದಿಯಾಗದೆ ಸದ್ದಿಲ್ಲದೆ ಹೊಸ ಹೊಸ ಪ್ರಾಜೆಕ್ಟ್ ಗಳ ಕಡೆ ಗಮನ ಹರಿಸಿದ್ದಾರೆ. ಆ ಹೊಸ ಪ್ರಾಜೆಕ್ಟ್ ಗಳಲ್ಲಿ ತೆಲುಗಿನ ಈ ಒಂದು ಹೊಸ ಚಿತ್ರದಲ್ಲಿ ಹೊಸ ಗೆಟಪ್ ಆದರೆ ಮುಂದಿನ ದಿನಗಳಲ್ಲಿ ತಾವೇ ಮತ್ತೊಂದು ಚಿತ್ರವನ್ನು ನಿರ್ದೇಶನ ಮಾಡುತ್ತಾರೋ ಅಥವಾ ಹೊಸ ಪ್ರಾಜೆಕ್ಟ್ ಗೆ ಸಹಿ ಹಾಕಿದ್ದಾರೋ ಎಂಬುದನ್ನ ಅವರೇ ಬಹಿರಂಗ ಪಡಿಸಬೇಕಾಗಿದೆ. ಒಟ್ಟಾರೆಯಾಗಿ ದುನಿಯಾ ವಿಜಯ್ ಅವರು ಸಲಗ ಚಿತ್ರದ ಸಕ್ಸಸ್ ನಂತರ ಯಾವ ರೀತಿ ಮುಂದೆ ಹೆಜ್ಜೆ ಇಡಬೇಕು ಎಂಬುದನ್ನು ಸೂಕ್ಷ್ಮವಾಗಿ ಯೋಚನೆ ಮಾಡಿ ಅಡಿಯಿಡುತ್ತಿದ್ದಾರೆ.

%d bloggers like this: