ಕೇವಲ ತೆಂಗಿನಕಾಯಿಯಿಂದ ನಿಮ್ಮ ಎಲ್ಲಾ ಶತ್ರುಗಳನ್ನು ನಾಶ ಪಡಿಸಿಕೊಳ್ಳಬಹುದಾಗಿದೆ. ನಿಮ್ಮ ಬೆಳವಣಿಗೆ, ಪ್ರಗತಿ ನೋಡಿ ನಿಮ್ಮವರೇ ನಿಮಗೆ ಶತ್ರುಗಳಾಗುವುದುಂಟು ನಿಮ್ಮ ಜೊತೆಯಲ್ಲಿ ಇದ್ದು ನಿಮ್ಮ ಸೋಲಿಗೆ ಕಾಯುತ್ತಿರಲೂ ಬಹುದು. ಕೆಲವು ಶತ್ರುಗಳು ಎದುರಿಗೆ ಕಂಡರೆ ಇಂತಹ ಹಿತ ಶತ್ರುಗಳು ನಿಮಗರಿವಿಲ್ಲದೆಯೇ ನಿಮ್ಮ ನಾಶಕ್ಕೆ ಹಳ್ಳ ಮಾಡಿರುತ್ತಾರೆ, ನಿಮ್ಮ ತಪ್ಪು ಏನೂ ಇಲ್ಲದಿದ್ದರೂ ಸಹ ಇಂತಹ ಶತ್ರುಗಳು ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿ ಆತಂಕ ಪಡಿಸುತ್ತಿದ್ದರೆ ಅಂತಹವರು ಈ ತೆಂಗಿನ ಕಾಯಿ ಯಂತ್ರವನ್ನು ಉಪಯೋಗಿಸ ಬಹುದಾಗಿದೆ.

ಒಂದು ತೆಂಗಿನಕಾಯಿ ಅಂದರೆ ಆ ಕಾಯಿಯಲ್ಲಿ ನೀರಿರಬಾರದು ಅದರಲ್ಲಿ ನೀರು ಒಣಗಿರಬೇಕು, ಮತ್ತು ಆ ತೆಂಗಿನಕಾಯಿ ಜುಟ್ಟನ್ನು ಕಿತ್ತಿರಬಾರದು ಅಂತಹ ತೆಂಗಿನಕಾಯಿಯನ್ನು ತೆಗೆದುಕೊಂಡು ಅದಕ್ಕೆ ಒಂದಷ್ಟು ಸಾಸುವೆ ಎಣ್ಣೆಯನ್ನು ಸಂಪೂರ್ಣ ಲೇಪಿಸಿ ಕಂಕುಮದಿಂದ ನಿಮ್ಮ ಶತ್ರುಗಳ ಹೆಸರನ್ನು ಸಣ್ಣದಾಗಿ ತೆಂಗಿನಕಾಯಿಯ ಮೇಲೆ ನಿಮ್ಮ ಕೈಬೆರಳಿನಿಂದ ಅಥವಾ ಕಡ್ಡಿಯಿಂದ ಬರೆಯಬೇಕು. ತದನಂತರ ಈ ರೀತಿ ನಿಮ್ಮ ಶತ್ರುಗಳ ಹೆಸರನ್ನು ಬರೆದ ಈ ತೆಂಗಿನ ಕಾಯಿಯನ್ನು ಉಗ್ರಸ್ವರೂಪ ಶಕ್ತಿ ದೇವತೆಗಳಾದ ಚಂಡಿಕೇಶ್ವರಿ ಕಾಳಿಕಾದೇವಿ ಅಂತಹ ದೇವಾಲಯಗಳಿಗೆ ಹೋಗಿ ದೇವಿಯ ಪಾದಕ್ಕೆ ಇಟ್ಟು ನಿಮ್ಮ ಶತ್ರುಗಳಿಂದ ಆಗುತ್ತಿರುವ ಸಮಸ್ಯೆಗಳನ್ನು ನಿವಾರಿಸವಂತೆ ಸಂಕಲ್ಪ ಮಾಡಿಕೊಳ್ಳಬೇಕು.

ನಂತರ ಆ ತೆಂಗಿನಕಾಯಿಯನ್ನು ದೇವಾಲಯದ ಪ್ರಾಂಗಣದಲ್ಲಿ ತಂದು ಒಡೆದು ಇಂದು ನನ್ನ ಶತ್ರುಗಳೆಲ್ಲಾ ನಾಶವಾಗಲಿ ಎಂದು ತೆಂಗಿನಕಾಯಿ ಚೂರನ್ನು ತರದೇ ಅಲ್ಲೆ ಬಿಟ್ಟು ಬರಬೇಕು. ಈ ರೀತಿಯ ಪ್ರಯೋಗವನ್ನು ಪ್ರತಿ ಶುಕ್ರವಾರ, ಮಂಗಳವಾರ ತಪ್ಪದೆ ಮಾಡಬೇಕು ಪ್ರತಿಯೊಬ್ಬ ಶತ್ರುವಿಗೆ ಪ್ರತ್ಯೇಕವಾಗಿ ಕನಿಷ್ಟ ಮೂರು ಭಾರಿಯಾದರೂ ಈ ನಿಯಮವನ್ನುಅನುಸರಿಸಬೇಕು. ಅದಲ್ಲದೆ ವಿಶೇಷವಾಗಿ ಈ ತೆಂಗಿನಕಾಯಿ ಪ್ರಯೋಗವನ್ನು ಅಮವಾಸ್ಯೆ, ಹುಣ್ಣಿಮೆ ದಿನದಂದು ಮಾಡಿದರೆ ಉತ್ತಮವಾದ ಪರಿಣಾಮ ಬೀರುತ್ತದೆ, ಈ ರೀತಿ ನೀವು ಮಾಡುವುದರಿಂದ ನೀವು ಸುಗಮ ಸಲಲಿತವಾದ ಜೀವನ ನಿಮ್ಮದಾಗಿ ಶತ್ರುದೋಷಗಳು ಮುಕ್ತಿಯಾಗುತ್ತವೆ.