ಟೆಸ್ಟ್ ನಾಯಕತ್ವದಿಂದಲೂ ಕೆಳಗಿಳಿದ ಕೊಹ್ಲಿ ಅವರ ಬಗ್ಗೆ ಹೀಗೆ ಬರೆದು ಪೋಸ್ಟ್ ಹಾಕಿದ ಪತ್ನಿ ಅನುಷ್ಕಾ ಶರ್ಮಾ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಕಳೆದ ಹತ್ತು ವರ್ಷಗಳು ಗೋಲ್ಡನ್ ಡೆಕೆಡ್. ಏಕೆಂದರೆ ಕಳೆದ 10 ವರ್ಷದಿಂದ ವಿರಾಟ್ ಮುಟ್ಟಿದ್ದೆಲ್ಲವೂ ಚಿನ್ನ. ಇಂಡಿಯನ್ ಟೀಮ್ ನ ರನ್ ಮಷೀನ್ ಆಗಿದ್ದ ವಿರಾಟ್ ರನ್ ಮಳೆಯನ್ನೇ ಹರಿಸಿದ್ದರು. ಕ್ಯಾಪ್ಟನ್ ಆಗಿಯೂ ದಾಖಲೆಗಳ ಮೇಲೆ ದಾಖಲೆ ಬರೆದಿದ್ದರು. ಆದರೆ ಭಾರತದ ಟೆಸ್ಟ್ ಕ್ರಿಕೆಟ್ ಗೆ ವಿರಾಟ್ ಕೊಹ್ಲಿ ದಿಡೀರ್ ವಿಧಾಯ ಘೋಷಿಸಿದ್ದಾರೆ. ಸದ್ದಿಲ್ಲದೆ ಯಾವುದೇ ಸೂಚನೆಯನ್ನು ಕೂಡ ಕೊಡದೆ ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿರುವುದು ಅಭಿಮಾನಿಗಳ ಜೊತೆಗೆ ತಂಡದ ಆಟಗಾರರಿಗೂ ಸಹ ಶಾಕ್ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದೆ.
ಟೆಸ್ಟ್ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದ ಪತಿ ವಿರಾಟ್ ಕೊಹ್ಲಿಯ ಬಗ್ಗೆ ಪತ್ನಿ ಅನುಷ್ಕಾ ಶರ್ಮ ಭಾವುಕವಾಗಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಸೋಲು ಕಂಡ ಒಂದು ದಿನದ ಬಳಿಕ ಭಾರತದ ಟೆಸ್ಟ್ ತಂಡದ ನಾಯಕನ ಸ್ಥಾನಕ್ಕೆ ವಿರಾಟ್ ರಾಜೀನಾಮೆ ಸಲ್ಲಿಸಿದ್ದಾರೆ. ಟ್ವಿಟ್ಟರ್ ಮೂಲಕ ನಿರ್ಧಾರವನ್ನು ತಿಳಿಸಿದ ವಿರಾಟ್ ಕೊಹ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಭಾರತ ತಂಡದ ಮೂರು ಮಾದರಿ ಕ್ರಿಕೆಟನ ನಾಯಕ ಸ್ಥಾನದಿಂದ ಕೆಳಗಿಳಿದಂತಾಗಿದೆ. ಇದರ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಅನುಷ್ಕಾ ಶರ್ಮಾ ತಮ್ಮ ಪತಿಯ ಬಗ್ಗೆ ತಮಗಿರುವ ಹೆಮ್ಮೆಯನ್ನು ಹೇಳುತ್ತಾ ಒಂದು ಸುದೀರ್ಘ ನೋಟನ್ನು ಬರೆದಿದ್ದಾರೆ. ಅನುಷ್ಕಾ ಶರ್ಮಾ ಅವರು ಎಲ್ಲಾ ಭಾರತೀಯ ಕ್ರಿಕೆಟ್ ತಂಡದ ಪಂದ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ. ತಂಡವನ್ನು ಹುರಿದುಂಬಿಸುತ್ತಿರುತ್ತಾರೆ.

ತಂಡದ ವಿಜಯಗಳನ್ನು ಆಚರಿಸುತ್ತಾರೆ ಮತ್ತು ಅವರ ಸೋಲಿಗೆ ಸ್ಪಂದಿಸುತ್ತಾರೆ. ವಿರಾಟ್ ಕೊಹ್ಲಿ ಅವರ ಸಪೋರ್ಟ್ ಸಿಸ್ಟಮ್ ಆಗಿರುವ ಅನುಷ್ಕಾ ಅವರು ಈಗ ತಮ್ಮ ಪತಿಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಈ ರೀತಿ ಹಂಚಿಕೊಂಡಿದ್ದಾರೆ. 2014ರಲ್ಲಿ ಎಂಎಸ್ ಅವರು ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದಲು ನಿರ್ಧರಿಸುತ್ತಾರೆ. ಹಾಗೂ ನಿಮ್ಮನ್ನು ತಂಡದ ನಾಯಕರನ್ನಾಗಿ ಮಾಡಲಾಗಿದೆ ಎಂದು ಹೇಳಿದ ದಿನ ನನಗೆ ನೆನಪಿದೆ. ಆ ದಿನ ನಾನು, ನೀವು ಹಾಗೂ ಎಮ್ಎಸ್ ನಿಮ್ಮ ಗಡ್ಡ ಎಷ್ಟು ಬೇಗ ಬೆಳ್ಳಗಾಗುತ್ತದೆ ನೋಡು ಎಂದು ತಮಾಷೆ ಮಾಡಿದ್ದೂ, ನೀವು ಅದಕ್ಕೆ ನಕ್ಕಿದ್ದು ನನಗೆ ಇನ್ನೂ ನೆನಪಿದೆ. ಆ ದಿನದಿಂದ ನಿಮ್ಮ ಗಡ್ಡವು ಬಿಳಿ ಬಣ್ಣಕ್ಕೆ ತಿರುಗುವುದನ್ನು ನಾನು ನೋಡಿದ್ದೇನೆ.

ನಿಮ್ಮ ಬೆಳವಣಿಗೆಯನ್ನು ನೋಡಿದ್ದೇನೆ. ನಿಮ್ಮ ಸುತ್ತಲೂ ಹಾಗೂ ನಿಮ್ಮೊಳಗೆ ಬೆಳವಣಿಗೆಯನ್ನು ಕಂಡಿದ್ದೇನೆ. ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕನಾಗಿ ನಿಮ್ಮ ಬೆಳವಣಿಗೆ ಹಾಗೂ ನಿಮ್ಮ ನಾಯಕತ್ವದಲ್ಲಿ ತಂಡವು ಮಾಡಿದ ಸಾಧನೆಗಳ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಆದರೆ ನಿಮ್ಮೊಳಗೆ ಆಗಿರುವ ಸಾಧನೆಯ ಬಗ್ಗೆ ನಾನು ಹೆಚ್ಚು ಹೆಮ್ಮೆಪಡುತ್ತೇನೆ. ಎಲ್ಲದರಲ್ಲೂ ನಿಮ್ಮ ಉದ್ದೇಶಗಳು ಶುದ್ಧವಾಗಿದ್ದವು. ಪ್ರತಿಯೊಬ್ಬರು ನಿಮ್ಮನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಯಾರು ಕೂಡ ಪರಿಪೂರ್ಣರಲ್ಲ ಹಾಗೆಯೇ ನೀವು ಕೂಡ ಪರಿಪೂರ್ಣರಲ್ಲ. ನೀವು ಕೂಡ ನಿಮ್ಮ ನ್ಯೂನ್ಯತೆಗಳನ್ನು ಹೊಂದಿದ್ದೀರಿ. ಆದರೆ ನೀವು ಅದನ್ನು ಯಾವಾಗ ಮರೆಮಾಚಲು ಪ್ರಯತ್ನಿಸಿದ್ದೀರಿ, ನೀವು ಯಾವತ್ತೂ ದುರಾಸೆಯಿಂದ ಏನನ್ನೂ ಮಾಡಿಲ್ಲ. ಈ ಸ್ಥಾನವು ಕೂಡ ದುರಾಸೆಯದ್ದಲ್ಲ. ನೀವು ಯಾವಾಗಲೂ ನೇರವಾಗಿದ್ದೀರಿ. ನನಗೆ ನಂಬಿಕೆ ಇದೆ ನಮ್ಮ ಮಗಳು ವಮಿಕಾ ಕೂಡ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಾಳೆ ಎಂದು ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

%d bloggers like this: