ಟಿಕ್ ಟಾಕ್ ಇನ್ನು ವಾಪಸ್ ಬರಲ್ಲ, ಶಾಶ್ವತವಾಗಿ

ಆಕ್ಟಿಂಗ್ ಬರೋರು, ಬರದೆ ಇರೋರು, ಕಷ್ಟಪಟ್ಟು ಆಕ್ಟಿಂಗ್ ಕಲ್ತೋರು, ಎಲ್ಲರ ಬಾಯಿಗ್ ಮಣ್ಣು ಬಿತ್ತು ಅಂತ ಎಷ್ಟೋ ಜನ ಶಾಪ ಹಾಕಿದ್ರು. ಏನಿದು ಶಾಪ ಹಾಕಿದ್ದು, ಬೈದಿದ್ದು, ಯಾವ್ ವಿಷ್ಯ ಮಾತಡ್ತಿದಿರ ಅಂತ ಮನಸಲ್ಲೇ ಅನ್ಕೊತಿದಿರ ಇಲ್ಲಿದೆ ನೋಡಿ ಪೂರ್ತಿ ಡೀಟೇಲ್ಸ್. ಭಾರತ ಸಡನಾಗಿ ಚೈನೀಸ್ ಯಾಪ್ಗಳನ್ನು ಯಾಕೆ ನಿಷೇಧಿಸಿದರು ಅನ್ನೋದೇ ನಿಮ್ಮ ಪ್ರಶ್ನೆಗೆ ನಮ್ಮ ಉತ್ತರ, “ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಪೂರ್ವಾಗ್ರಹ ಪೀಡಿತ” ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿದೆ ಎಂದು ಎಂಇಐಟಿವೈ ಆದೇಶಗಳು ಹೇಳುತ್ತವೆ.

ಹಾಗು ಭಾರತದ ರಕ್ಷಣೆ, ರಾಜ್ಯ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಭದ್ರತೆ, ಮಾಹಿತಿ ಮತ್ತು ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ ನಿಷೇಧದೊಂದಿಗೆ ಪಾರದರ್ಶಕತೆಯ ಕೊರತೆ ದೊಡ್ಡದಾದ ಕಾರಣದಿಂದ ಕಳೆದ ವರ್ಷ ಜೂನ್‌ನಲ್ಲಿ 59 ಚೀನೀ ಅಪ್ಲಿಕೇಶನ್‌ಗಳನ್ನು ಸರ್ಕಾರ “ಪೂರ್ವಾಗ್ರಹ” ಎಂದು ಉಲ್ಲೇಖಿಸಿ ನಿಷೇಧಿಸಿತ್ತು. ಅಷ್ಟು ಮಾತ್ರವಲ್ಲದೇ ಸೆಪ್ಟೆಂಬರ್ 2ರಂದು ಸರ್ಕಾರವು ಇನ್ನೂ 118 ಅಪ್ಲಿಕೇಶನ್‌ಗಳನ್ನು ನಿಷೇಧಿಸಿತು ಮತ್ತು ನವೆಂಬರ್‌ನಲ್ಲಿ ಶಾಪಿಂಗ್ ವೆಬ್‌ಸೈಟ್, ಅಲಿಎಕ್ಸ್‌ಪ್ರೆಸ್ ಸೇರಿದಂತೆ ದೇಶದಲ್ಲಿ 43 ಹೊಸ ಚೀನೀ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿದೆ.

ಯಾಕಂದರೆ ಆ ಸಮಯದಲ್ಲಿ ಚೈನೆಸ್ ಹಾಗು ಇಂಡಿಯಾ ನಡುವಿನ ಘರ್ಷಣೆಯ ಕಾರಣದಿಂದ ಭಾರತದವರು, ಶತ್ರು ಸೇನೆಯಾದ ಚೈನಾ ಸರ್ಕಾರದ ಅಯಪ್ಗಳನ್ನ, ಭಾರತದ ಅಯಪ್ಗಳಿಗಿಂತ ಹೆಚ್ಚಾಗಿ ಉಪಯೋಗಿಸುತ್ತಿದ್ದರಿಂದ ಈ ರೀತಿಯಾದ ನಿಷೇಧಾಜ್ಞೆಯನ್ನು ಮೋದಿಯವರು ಇಂತಹ ಉತ್ತಮವಾದ ಕಾರ್ಯಾಚರಣೆ ಕೈಗೊಂಡರು. ನಮಗೆಲ್ಲ ತಿಳಿದಿರೋ ಹಾಗೆ ಟಿಕ್ ಟಾಕ್, ಶೇರ್ ಇಟ್ ಇಂತಹ ಅಯಪ್ಗಳನ್ನು ನಮ್ಮ ಜನ ಇತರ ದೇಶದೆಂದು ತಿಳಿಯದೇನೂ, ತಿಳಿದೂ ಹೆಚ್ಚಾಗಿ ಚೈನಾ ದೇಶದ ಇನ್ಕಮ್ಗೆ ಸಹಾಯ ಮಾಡಿತ್ತು.

ಒಂದ್ ರೀತಿ ಈ ಟಿಕ್ಟಾಕ್ ಅಡಿಕ್ಷನ್ನಿಂದ ಚಿಕ್ಕಮಕ್ಕಳನ್ನು ಸೇರಿಸಿ, ವಯಸ್ಸಾದ ಮುದುಕ ಮುದುಕಿಯರು ಕೂಡ ವೀಡಿಯೊ ಮಾಡುತ್ತಿದ್ದರು, ಅದಲ್ಲದೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ವಿಧ್ಯಾಭ್ಯಾಸದ ಕಡೆ ಗಮನ ಕಳೆದುಕೊಂಡು ಹುಚ್ಚರಂತೆ ರಸ್ತೆಬದಿಯಲ್ಲಿ, ಸಿಕ್ಕ ಸಿಕ್ಕ ಟಿಕ್ಟಾಕ್ ಯೂಸರ್ಸ್ ಜೊತೆ ಚಿತ್ರ ವಿಚಿತ್ರವಾದ ವೀಡಿಯೊ ಮಾಡಿದಂತು ಸುಳ್ಳಲ್ಲ, ಟಿಕ್ ಟಾಕ್ ಮಾಡದೇ ಇರೋ ಜನರಿಗಂತೂ ಇದು ಎಷ್ಟೋ ನೆಮ್ಮದಿ ಕೊಡುವಂತ ವಿಷಯವಾಗಿದೆ.

ಯಾಕಂದರೆ ಟಿಕ್ ಟಾಕ್ ಕೆಲಸವಿಲ್ಲದವರಿಗೆ, ಕೆಲಸ ಇರುವವರಿಗೆ ಬಾರಿ ಕಿರಿ ಕಿರಿ ಉಂಟು ಮಾಡ್ತಿದ್ದು, ಮತ್ತಷ್ಟು ಜನರು ಧಾರಾವಾಹಿಗಳ ಚಾನ್ಸ್ ಪಡೆದರು ಹಾಗು ಚಿತ್ರಗಳಲ್ಲಿ ಚಿಕ್ಕ ಪಾತ್ರಗಳನ್ನೂ ಕೂಡ ಪಡೆದುಕೊಂಡು ದಿಲ್ ಖುಷ್ ಆಗಿದ್ದಾರೆ. ಆದ್ದರಿಂದ ಮೊದಲು ನಮ್ಮ ದೇಶದ ಸ್ವಾಭಿಮಾನ ಉಳಿಸುವ ಜೊತೆ ಮೊದಲು ನಮ್ಮ ದೇಶವನ್ನು ಬೆಳೆಸೋಣ ಯಾಕಂದ್ರೆ ನಮಗೆ ಊಟ ಸಿಗ್ತಿರೋದು, ನಮ್ಮ ಭಾರತದ ರೈತರಿಂದ ಎಲ್ಲೇ ಇರು ಹೇಗೆ ಇರು ಮೊದಲು ನೀನಿರೋ ದೇಶಕ್ಕೆ ಪ್ರಾಮುಖ್ಯತೆ ಕೊಡೋಣ.

%d bloggers like this: