ಕೇವಲ ಐದೇ ದಿನಗಳಲ್ಲಿ ಬೊಜ್ಜು ತುಂಬಿದಂತಹ ನಿಮ್ಮ ದೇಹವನ್ನು ಕರಗಿಸಿ ಸುಂದರ ಸಂರಚನೆ ಹೊಂದಿರುವ ದೇಹವನ್ನಾಗಿ ಮಾಡಬಹುದಾಗಿದೆ. ಇಂದು ಅನಾವಶ್ಯಕವಾಗಿ ಇತಿಮಿತಿಯಿಲ್ಲದ ಜಂಕ್ ಫುಡ್, ಇತ್ಯಾದಿ ಕೊಬ್ಬಿನ ಅಂಶ ಹೆಚ್ಚಾಗಿರುವ ಬೇಕರಿ ತಿನಿಸುಗಳನ್ನು ತಿನ್ನುವುದರಿಂದ ನಿಮ್ಮ ದೇಹದಲ್ಲಿ ಬೊಜ್ಜು ಶೇಖರಣೆಯಾಗಿ ನಿಮ್ಮ ದೇಹ ದಪ್ಪವಾಗುತ್ತದೆ. ದೇಹ ಬೊಜ್ಜಿನಿಂದ ಕೂಡಿದ್ದು ದಪ್ಪವಾದ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಖಿನ್ನತೆ ಕಾಡುತ್ತದೆ. ಆದರೆ ಈ ಮನೆಮದ್ದಿನಿಂದ ಕೇವಲ ಒಂದೇ ವಾರದಲ್ಲಿ ಮೂರು ಕೆಜಿ ಅಷ್ಟು ದೇಹ ತೂಕ ಕಡಿಮೆ ಮಾಡಿಕೊಳ್ಳಬಹುದಾಗಿದೆ. ಈ ಮನೆಮದ್ದನ್ನು, ಪುರುಷರು ಮತ್ತು ಮಹಿಳೆಯರು ಜೊತೆಗೆ 15 ವರ್ಷ ಮೇಲ್ಪಟ್ಟ ಮಕ್ಕಳು ಈ ಮನೆಮದ್ದನ್ನು ಬಳಸಬಹುದಾಗಿದೆ. ಹಾಗಾದರೆ ಈ ಮನೆಮದ್ದು ಯಾವುದು ಎಂಬುದನ್ನು ತಿಳಿಯೋಣ.

ಕುಂಬಳಕಾಯಿ ಹೌದು ಇದು ದಡೂತಿ ದೇಹವನ್ನು ಕರಗಿಸುವುದಕ್ಕೆ ಉತ್ತಮವಾದ ಪರಿಹಾರವಾಗಿದೆ, ಸಣ್ಣ ಕುಂಬಳಕಾಯಿಗಿಂತ ದಪ್ಪವಾದ ಕುಂಬಳಕಾಯಿಯನ್ನು ತೆಗೆದುಕೊಳ್ಳಬೇಕು. ದಪ್ಪದಾದ ಕುಂಬಳಕಾಯಿ ಏಕೆಂದರೆ ಇದರಲ್ಲಿ ಪಲ್ಸ್ ಅಂಶಗಳು ಹೆಚ್ಚಾಗಿರುತ್ತವೆ. ಈ ಕುಂಬಳಕಾಯಿಯ 250ಗ್ರಾಂ ನಷ್ಟು ಹಚ್ಚಿಕೊಂಡು ಅದರ ಮೇಲ್ಭಾಗದ ಸಿಪ್ಪೆಯನ್ನು ತೆಗೆದು ನಂತರ ಅದನ್ನು ಮಿಕ್ಸಿಯಲ್ಲಿ ರುಬ್ಬಿ ಅಥವಾ ಸಿಪ್ಪೆತೆಗೆದ ಕುಂಬಳಕಾಯಿಯನ್ನು ತುರಿದು ರಸ ತೆಗೆಯಬೇಕು, ಇದಕ್ಕೆ ಸ್ವಲ್ಪ ನಿಂಬೆರಸವನ್ನು ಸೇರಿಸಿ ಬೆಳಿಗ್ಗೆ ನಿಮ್ಮ ನಿತ್ಯಕರ್ಮ ಮುಗಿದ ನಂತರ ಈ ಜ್ಯೂಸನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದು ನಿಮ್ಮ ಬೊಜ್ಜಿನ ಸಮಸ್ಯೆ ನಿವಾರಣೆ ಮಾಡುತ್ತದೆ.

ಈ ಜ್ಯೂಸ್ ಕುಡಿದ ಒಂದು ಗಂಟೆಯ ನಂತರ ಎಲ್ಲಾ ರೀತಿಯ ತರಕಾರಿಯನ್ನು ಸಲಾಡ್ ಮಾಡಿಕೊಂಡು ತಿನ್ನಬಹುದಾಗಿದೆ. ಈ ತರಕಾರಿ ಸಲಾಡ್ ತಿಂದಾದ ಮೇಲೆ ನೀವು ಯಾವುದೇ ರೀತಿಯ ಆಹಾರವನ್ನು ಸೇವಿಸುವ ಅಗತ್ಯವಿಲ್ಲ. ಮೇಲಿಂದ ಮೇಲೆ ಆಹಾರ ಸೇವನೆಯಿಂದ ದೇಹದಲ್ಲಿ ಬೊಜ್ಜಿನ ಅಂಶಗಳು ಶೇಖರಣೆಯಾಗಿ ದೇಹ ದಪ್ಪವಾಗಲು ಕಾರಣವಾಗುತ್ತದೆ. ಈ ಕುಂಬಳಕಾಯಿ ಜ್ಯುಸ್, ಸುಸ್ತಿನ್ನು ಕಡಿಮೆ ಮಾಡಿ, ಸದಾ ಚಟುವಟಿಕೆಯಿಂದ ಇರಲು ಸಹಾಯ ಮಾಡುತ್ತದೆ.

ಜೊತೆಗೆ ಈ ಜ್ಯುಸ್ ಶಕ್ತಿವರ್ಧಕವಾಗಿದೆ, ಇನ್ನು ಶುಗರ್ ಕಾಯಾಲೆ ಇರುವವರು ಬಿಲ್ವಪತ್ತೆಯ ರಸವನ್ನು ಈ ಕುಂಬಳಕಾಯಿ ಜ್ಯುಸ್ ನೊಂದಿಗೆ ಸೇರಿಸಿ ಕುಡಿಯುವುದರಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಣಕ್ಕೆ ತರಬಹುದಾಗಿದೆ. ಈ ಥೈರಾಯ್ಡ್ ಸಮಸ್ಯೆ ಇರುವವರು ಕುಂಬಳಕಾಯಿ ಜ್ಯುಸ್ ಗೆ ಈ ಕೊತ್ತುಂಬರಿ ರಸವನ್ನು ಸೇರಿಸಿ ಕುಡಿಯುವುದರಿಂದ ನಿಮ್ಮ ಥೈರಾಯ್ಡ್ ಸಮಸ್ಯೆ ನಿವಾರಣೆ ಆಗುತ್ತದೆ. ಕರಿಬೇವಿನ ರಸವನ್ನು ಕುಂಬಳಕಾಯಿ ಜ್ಯುಸ್ ನೊಂದಿಗೆ ಕುಡಿಯುವುದರಿಂದ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗಬಹುದು. ಜೊತೆಗೆ ರಕ್ತ ಹೆಚ್ಚಾಗಿ, ರಕ್ತಹೀನತೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.