ತಿರುಪತಿಯಲ್ಲಿ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಯೊಬ್ಬ ತನ್ನ ಕಾರಿನ ಮೇಲೆ ಅಪ್ಪುಅವರ ಫೋಟೋವನ್ನ ಹಾಕಿಸಿಕೊಂಡಿರುತ್ತಾರೆ. ಆದರೆ ಇತ್ತೀಚೆಗೆ ಕೆಲವು ತಿಂಗಳುಗಳಿಂದ ತಿರುಮಲದಲ್ಲಿ ಟಿಟಿಡಿ ಒಂದು ಹೊಸ ನಿಯಮವನ್ನ ಜಾರಿಗೆ ತಂದಿದ್ದಾರೆ. ಹೌದು ಈ ಹೊಸ ನಿಯಮದ ಪ್ರಕಾರ ತಿರುಪತಿಗೆ ಹೋಗುವ ವಾಹನದ ಮೇಲೆ ಯಾವುದೇ ಗಣ್ಯ ವ್ಯಕ್ತಿಯ ಅದು ರಾಜಕೀಯ ಅಥವಾ ಸಿನಿಮಾ ಸೆಲೆಬ್ರಿಟಿ ಹೀಗೆ ಯಾವುದೇ ವ್ಯಕ್ತಿಯ ಫೋಟೋಗಳನ್ನು ಅಂಟಿಸಿರಬಾರದು. ಒಂದು ವೇಳೆ ಆ ರೀತಿ ಅಂಟಿಸಿದ್ದರೆ ಅದರ ಮೇಲೆ ಬೇರೆ ಸ್ಟಿಕ್ಕರ್ ಅಂಟಿಸಿ ಹೋಗ ಬಹುದಾಗಿದೆ. ಅದರ ಜೊತೆಗೆ ಯಾವುದೇ ರೀತಿಯ ಧ್ವಜ, ಬಾವುಟ, ಶಾಲುಗಳನ್ನು ಕೂಡ ಧರಿಸಿ ಹೋಗುವಂತಿಲ್ಲ. ಈ ನಿಯಮಗಳನ್ನು ಮಾಡಿರುವ ಉದ್ದೇಶ ಏನು ಅಂದರೆ ತಿರುಪತಿ ದೇವಾಲಯದಲ್ಲಿ ಎಲ್ಲಾರೂ ಕೂಡ ಸಮಾನರು. ಎಲ್ಲಾರು ಸಹ ಒಂದೇ ಎಂಬ ಭಾವ ಮೂಡಲಿ ಎಂದು.

ಜೊತೆಗೆ ಯಾರಾದರು ರಾಜ್ಯ, ಭಾಷೆ ಅಥವಾ ಸಮುದಾಯಗಳ ಶಾಲು ಧರಿಸಿ ಬೆಟ್ಟದ ಮೇಲೆ ಏನಾದ್ರೂ ಅಹಿತಕರ ಘಟನೆಗಳು ಸಂಭವಿಸಿದರೆ ಅದು ತೊಂದರೆ ಆಗುತ್ತದೆ ಎಂಬ ಕಾರಣಕ್ಕಾಗಿ ಟಿಟಿಡಿ ಈ ಒಂದು ಹೊಸ ನಿಯಮವನ್ನು ಜಾರಿಗೆ ತಂದಿದೆ. ಅದರಂತೆ ಅಪ್ಪು ಅಭಿಮಾನಿಯ ವಾಹನದ ಮೇಲೆ ಇದ್ದ ಅಪ್ಪು ಅವರ ಫೋಟೋವನ್ನು ತಿರುಮಲ ಸಿಬ್ಬಂದಿಗಳು ತೆಗೆದಿದ್ದಾರೆ. ಇದರಿಂದ ಕೋಪಗೊಂಡ ಅಭಿಮಾನಿ ಆಕ್ರೋಶ ವ್ಯಕ್ತಪಡಿಸಿ ಸಿಬ್ಬಂದಿ ಜೊತೆ ವಾಗ್ವಾಧ ನಡೆಸಿದ್ದಾರೆ. ಅಷ್ಟೇ ಅಲ್ಲದೆ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ.ಈ ವೀಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಟಿಟಿಡಿ ವಿರುದ್ದ ಇದೀಗ ಅಪ್ಪು ಅಭಿಮಾನಿಗಳು ಸಿಡಿದೆದ್ದಿದ್ದಾರೆ.

ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ದೈಹಿಕವಾಗಿ ಮಾತ್ರ ಬಿಟ್ಟು ಹೋಗಿದ್ಥಾರೆ. ಆದರೆ ಅವರು ಮಾಡಿದ ಸಿನಿಮಾಗಳು, ಸಮಾಜಮುಖಿ ಕೆಲಸ ಕಾರ್ಯಗಳು ಅದಕ್ಕಿಂತ ಹೆಚ್ಚಾಗಿ ಅವರು ಯಾರಿಗೂ ತಿಳಿಸದೆ, ಪ್ರಚಾರ ಪಡೆಯದೆ ಮಾಡಿದಂತಹ ದಾನ ಧರ್ಮಗಳು, ಬಡ ಹೆಣ್ಣು ಮಕ್ಕಳಿಗೆ ಶಿಕ್ಷಣ ಸೇರಿದಂತೆ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಸೂರ್ಯ ಚಂದ್ರ ಇರುವವರೆಗೆ ಮರೆಯಲು ಸಾಧ್ಯವೇ ಇಲ್ಲ. ಅಭಿಮಾನಿಗಳ ಆರಾಧ್ಯ ದೈವ ಆಗಿರುವ ಅಪ್ಪು ಅವರ ಫೋಟೋವನ್ನು ತಿರುಪತಿಯಲ್ಲಿ ಯಾವಾಗ ತೆಗೆಸುತ್ತಿದ್ದಾರೆ ಎಂಬ ವಿಚಾರ ವೈರಲ್ ಆಯಿತೋ ಅಂದಿನಿಂದ ಟಿಟಿಡಿ ವಿರುದ್ದ ಅಪ್ಪು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ಬಗ್ಗೆ ಕಾರಣ ತಿಳಿಸಿ ಈ ನಿಯಮವನ್ನು ತೆಗೆಯುವಂತೆ ಟಿಟಿಡಿ ಅವರಿಗೆ ಅಪ್ಪು ಅಭಿಮಾನಿಗಳಿಂದ ಮನವಿ ಕೂಡ ತಲುಪಿದೆ.

ಇನ್ನು ಈ ಬಗ್ಗೆ ಶಿವಣ್ಣ ಅವರು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಪ್ಪು ಫೋಟೋ ತೆರೆಸಿದ ಬಗ್ಗೆ ನನಗೆ ಅಷ್ಟಾಗಿ ಗೊತ್ತಿಲ್ಲ. ಆದರೆ ಯಾರದ್ದೆ ಆಗಲಿ ಆ ರೀತಿ ಮಾಡಬಾರದು. ನನ್ನ ತಮ್ಮ ಅಂತ ಹೇಳುತ್ತಿಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಒಂದು ಭಾವನೆ ಅಂತಿರುತ್ತೆ. ಅಭಿಮಾನಿಗಳು ಅಭಿಮಾನದಿಂದ ಹಾಕಿಕೊಂಡಿರುತ್ತಾರೆ. ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯ ನೋವುಂಟು ಮಾಡಬಾರದು ಎಂದು ಹೇಳಿದ್ದಾರೆ. ಇಂದು ಕರ್ನಾಟಕದಲ್ಲಿ ಮಾತ್ರ ಅಲ್ಲ ದೇಶದ ಮೂಲೆ ಮೂಲೆಗಳಲ್ಲಿ ಯಾವುದೇ ಹಬ್ಬ, ಹರಿದಿನ, ರಥೋತ್ಸವ, ಜಾತ್ರೆ ಸಮಾರಂಭ ಗಳಲ್ಲಿ ಅಪ್ಪು ಅವರ ಫೋಟೋ ದೇವರ ಮೆರವಣಿಗೆ ಅಂತೆ ರಾರಾಜಿಸುತ್ತಲೇ ಇರುತ್ತದೆ. ಪುನೀತ್ ರಾಜ್ ಕುಮಾರ್ ಅವರು ಎಂದಿಗೂ ಅಮರ ಎಂಬುದನ್ನು ಇಂತಹ ಅನೇಕ ದೃಶ್ಯ ಘಟನೆಗಳು ಸಾರಿ ಸಾರಿ ಹೇಳುತ್ತವೆ.