ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ವಿಂಬಲ್ಡನ್ಗೆ ವಿದಾಯ ಹೇಳಿದ್ದಾರೆ. ಸಾನಿಯಾ ಮಿರ್ಜಾ ಅವರ ಈ ನಿರ್ಣಯ ಅವರ ಅಭಿಮಾನಿಗಳಿಗೆ ಅಚ್ಚರಿ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ. ಹೌದು ಸಾನಿಯಾ ಮಿರ್ಜಾ ಭಾರತೀಯ ಟೆನಿಸ್ ಕ್ರೀಡೆಯ ಸ್ಟಾರ್ ಆಟಗಾರ್ತಿ. ಮೂವತ್ತೈದು ವರ್ಷದ ಸಾನಿಯಾ ಮಿರ್ಜಾ ದೇಶದ ಅತ್ಯುತ್ತಮ ಟೆನಿಸ್ ಆಟಗಾರ್ತಿ ಎಂಬ ಹೆಸರು ಮಾಡಿದ್ದಾರೆ. ಅನೇಕ ಪ್ರಶಸ್ತಿಗಳನ್ನ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಆದರೆ ಬುಧವಾರ ನಡೆದ ಮಿಶ್ರ ಡಬಲ್ಸ್ ನಲ್ಲಿ ಸಾನಿಯಾ ಮಿರ್ಜಾ ಅವರು ಸೋಲನ್ನ ಅನುಭವಿಸಿದ್ದಾರೆ. ಹೌದು ಬುಧವಾರ ನಡೆದ ವಿಂಬಲ್ಡನ್ ಮಿಶ್ರ ಡಬಲ್ಸ್ ನಲ್ಲಿ ಸಾನಿಯಾ ಮಿರ್ಜಾ ಮತ್ತು ಕ್ರೋಯೇಶಿಯನ್ ಆಟಗಾರ್ತಿ ಮಾಟೆ ಪಾವಿಕ್ ಜೋಡಿ ಗ್ರೇಟ್ ಬ್ರಿಟನ್ ಮತ್ತು ಅಮೇರಿಕಾದ ಕ್ರಾವ್ಜಿಕ್ ಎದುರು 6-4, 5-7, 4-6 ಅಂತರದಿಂದ ಸೋಲನ್ನಭವಿಸಿದ್ದಾರೆ. ಆರಂಭದಲ್ಲಿ ಸಾನಿಯಾ ಮಿರ್ಜಾ ಮತ್ತು ಪಾವಿಕ್ ಜೋಡಿ ಪ್ರಬಲ ಪೈಪೋಟಿ ನೀಡಿದ್ದರು. ಅದರಂತೆ ಎರಡನೇ ಹಂತದಲ್ಲಿ ಕೂಡ 4-2 ಅಂಕಗಳ ಮೂಲಕ ಮುನ್ನೆಡೆ ಕಂಡುಕೊಂಡರು.

ಆದರೆ ಸಾನಿಯಾ ಮಿರ್ಜಾ ಮತ್ತು ಪಾವಿಕ್ ಜೋಡಿ ತಮ್ಮ ಎದುರಾಳಿ ತಂಡ ನೀಲ್ ಸ್ಕುಪ್ಸ್ಕಿಮತ್ತು ದೇಸೀರೇ ಕ್ರಾವ್ಜಿಕ್ ಜೋಡಿಯ ಎದುರು ನಿರಂತರವಾಗಿ ಅಂದರೆ ಆರು ಸುತ್ತುಗಳಲ್ಲಿ ಐದು ಸುತ್ತುಗಳಲ್ಲಿ ಪರಾಭಾವಗೊಳ್ಳುತ್ತದೆ. ಸಾನಿಯಾ ಮಿರ್ಜಾ ಜೋಡಿ ನಿರಾಂತಕವಾಗಿ ಸೆಮಿ ಫೈನಲ್ ಪ್ರವೇಶ ಪಡೆದು ಪಂದ್ಯ ಗೆಲ್ಲುವ ಆಶಾಭಾವನೆ ಮೂಡಿಸಿದ್ದರು. ಆದರೆ ಕೊನೆಯ ಸುತ್ತುಗಳಲ್ಲಿ ಎಲ್ಲಾವೂ ನಿರೀಕ್ಷೆಯನ್ನ ಹುಸಿಗೊಳಿಸಿತು. ಒಟ್ಟಾರೆಯಾಗಿ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ವಿಂಬಲ್ಡನ್ ನಲ್ಲಿ ಮಿಶ್ರ ಡಬಲ್ಸ್ ನಲ್ಲಿ ಸೋತು ಅಂತಿಮ ವಿದಾಯ ಹೇಳಿದ್ದಾರೆ. ಸಾನಿಯಾ ಮಿರ್ಜಾ ಡಬಲ್ಸ್ ನಲ್ಲಿ ಪ್ರಪಂಚದ ನಂಬರ್ ಒನ್ ಆಟಗಾರ್ತಿ ಆಗಿದ್ದರು. 2003ರಿಂದ 2013ರವರೆಗೆ ಮಹಿಳಾ ಡಬಲ್ಸ್ ನಲ್ಲಿ ಆರು ಮೇಜರ್ ಟೈಟಲ್ಸ್ ತಮ್ಮದಾಗಿಸಿಕೊಂಡಿದ್ದಾರೆ. ಸಾನಿಯಾ ಮಿರ್ಜಾ ಅವರ ಕ್ರೀಡಾ ಸಾಧನೆ ಪರಿಗಣಿಸಿ ಭಾರತ ಸರ್ಕಾರ ಪದ್ಮಭೂಷಣ, ಪದ್ಮ ಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.