ಟ್ರೋಲ್ ಮಾಡುತ್ತಿದ್ದವರಿಗೆ ಹಾಡಿನ ಮೂಲಕ ಖಡಕ್ ಉತ್ತರ ಕೊಟ್ಟ ನಿರೂಪಕಿ ದಿವ್ಯಾ ವಸಂತ್

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಪೇಜಸ್ ಗಳಿಂದ ಭಾರಿ ವೈರಲ್ ಆಗುತ್ತಿರುವ ನಿರೂಪಕಿ ದಿವ್ಯಾ ವಸಂತ ನಿನ್ನೆ ತಾನೇ ತಮ್ಮದೇ ಹೆಸರಿನ ತಮ್ಮಯೂಟ್ಯೂಬ್ ಚಾನೆಲ್ ನಲ್ಲಿ ರ್ಯಾಪ್ ಸಾಂಗ್ ವೊಂದನ್ನ ರಿಲೀಸ್ ಮಾಡಿದ್ದಾರೆ. ಈ ರ್ಯಾಪ್ ಸಾಂಗ್ ಅನ್ನು ಅಧಿಕೃತವಾಗಿ ರಿಲೀಸ್ ಮಾಡುವುದಕ್ಕೆ ಮುನ್ನವೇ ಅವರ ಆಪ್ತ ಸ್ನೇಹಿತರಾಗಿರುವ ಕೆಲವೊಂದಷ್ಟು ಜನರು ಆ ರ್ಯಾಪ್ ಸಾಂಗ್ನ ಒಂದಷ್ಪು ವಿಡಿಯೋ ದೃಶ್ಯಗಳನ್ನ ಲೀಕ್ ಮಾಡಿ ಟ್ರೋಲ್ ಪೇಜಸ್ ಗಳಿಗೆ ನೀಡಿ ತಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಸ್ವತಃ ದಿವ್ಯಾ ವಸಂತ ಅವರೇ ಹೇಳಿಕೊಂಡಿದ್ದಾರೆ. ಈ ರ್ಯಾಪ್ ಸಾಂಗ್ ಅಲ್ಲಿ ದಿವ್ಯಾ ವಸಂತ ಅವರು ತಮ್ಮನ್ನ ಗೇಲಿ ಮಾಡುತ್ತಿರುವ ಟ್ರೋಲ್ ಪೇಜಸ್ ಅಡ್ಮಿನ್ ಗಳಿಗೇನೆ ಬರೆದಂತೆ ಸಾಹಿತ್ಯ ಇದೆ. ಈ ರ್ಯಾಪ್ ಸಾಂಗ್ನ ಆರಂಭದ ಆರಂಭದ ಸಾಲುಗಳಲ್ಲಿಯೇ ಟ್ರೋಲ್ ಪೇಜಸ್ ಅಡ್ಮಿನ್ ಗಳಿಗೆ ನೀವು ಅಳಬೇಕು ನಾನು ನಗಬೇಕು.

ನಾನ್ ಓದಿದ ಸ್ಕೂಲಲ್ಲಿ ನೀವ್ ಓದಿದ್ದೀರಾ. ನಾನ್ ಪಟ್ಟಿರೋ ಸ್ಟ್ರಗಲ್ ನೀವ್ ಪಟ್ಟಿದ್ದೀರಾ, ಒಬ್ಳು ಹೆಣ್ಮಗಳನ್ನ ಕಾಲ್ ಎಳೀತೀರಲ್ಲ ನೀವ್ ನಿಜವಾಗ್ಲುನೂ ಗಂಡುಸ್ರಾ. ನನ್ ಕಮೆಂಟ್ ಬಾಕ್ಸ್ ನಿಮ್ಮಪ್ಪನ್ ಸೈಟ್ ಅನ್ಕಂಡಿದ್ದೀರಾ ಹೀಗೆ ತಮ್ಮನ್ನ ಟ್ರೋಲ್ ಮಾಡುತ್ತಿರುವ ಟ್ರೋಲ್ ಪೇಜಸ್ ಗಳಿಗೆ ತಮ್ಮ ಈ ರ್ಯಾಪರ್ ಸಾಂಗ್ ಮೂಲಕ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ಈ ಬಿಟಿವಿ ಸುದ್ದಿ ವಾಹಿನಿಯ ನಿರೂಪಕಿ ಅವರನ್ನ ಸೋಶಿಯಲ್ ಮೀಡಿಯಾ ಟ್ರೋಲ್ ಪೇಜಸ್ ಗಳು ವ್ಯಂಗ್ಯ ಟೀಕೆ ಮಾಡಲು ಕಾರಣ ಆಗಿದ್ದು ಇಷ್ಟೇ. ಇತ್ತೀಚೆಗೆ ಕನ್ನಡದ ಖ್ಯಾತ ನಟಿ ಅಮೂಲ್ಯ ಅವರು ತಾಯಿಯಾಗುತ್ತಿರುವ ವಿಚಾರವನ್ನು ಬಿಟಿವಿ ಡಿಜಿಟಲ್ ಪೇಜ್ ನಲ್ಲಿ ಇದು ಇಡೀ ರಾಜ್ಯವೇ ಸಂತೋಷ ಪಡುವ ವಿಷಯ ಎಂದು ವೈಭವೀಕರಿಸಿ ನಿರೂಪಣೆ ಮಾಡಿದ್ದರು. ಇದು ವೀಕ್ಷಕರಿಗೂ ಕೂಡ ಅತಿಯಾದ ಬೇಜವಬ್ದಾರಿತನದ ಸುದ್ದಿ ಕಾರ್ಯಕ್ರಮ ಎಂದೆನಿಸಿದೆ. ಅದರಲ್ಲಿಯೂ ಸೋಶಿಯಲ್ ಮೀಡಿಯಾದಲ್ಲಿ ಈ ಕಾರ್ಯಕ್ರಮ ನಿರೂಪಣೆ ಮಾಡಿದ ದಿವ್ಯಾ ವಸಂತ ಅವರ ವೀಡಿಯೋ ಫೋಟೋ ಬಳಸಿಕೊಂಡು ಟ್ರೋಲ್ ಪೇಜಸ್ ಟೀಕೆ ಮಾಡಿದವು.

ಇದಾದ ಬಳಿಕ ಟ್ರೋಲ್ ಪೇಜಸ್ ಗಳನ್ನೇ ತರಾಟೆಗೆ ತೆಗೆದುಕೊಳ್ಳಲು ಬಿಟಿವಿ ಡಿಜಿಟಿಲ್ ವಿಭಾಗದ ಹೆಡ್ ಆಗಿರುವ ಮತ್ತೊಂದು ಲೈವ್ ಕಾರ್ಯಕ್ರಮ ಮಾಡಿ ಅದರಲ್ಲಿ ಬಿಟ್ಟಿ ನೆಟ್ ಇದೆ ಅಂತ ಬೇಕಾ ಬಿಟ್ಟಿ ಕಮೆಂಟ್ ಮಾಡ್ತೀರಾ ಇದೆಲ್ಲಾ ಒಂದು ಟ್ಯಾಲೆಂಟಾ ಎಂದು ಟ್ರೋಲ್ ಪೇಜಸ್ ಅಡ್ಮಿನ್ ಗಳಿಗೆ ನೇರವಾಗಿ ಚಾಟಿ ಬೀಸಿದ್ದರು. ಇದರಿಂದ ಮತ್ತಷ್ಟು ಪ್ರಚೋದನೆಗೊಳಗಾದ ಟ್ರೋಲ್ ಪೇಜಸ್ ಗಳು ದಿವ್ಯಾ ವಸಂತ ಅವರ ವೈಯಕ್ತಿಕ ಫೋಟೋ ಮತ್ತು ಅವರು ರೀಲ್ಸ್ ಮಾಡಿದ್ದ ವೀಡಿಯೋಸ್ ಬಳಸಿಕೊಂಡು ಬಿಟ್ಟಿ ನೆಟ್ ಯಾರ್ ಕೊಡ್ತಾರೆ ಅಂತ ವೈಯಕ್ತಿಕ ಪ್ರಹಾರಕ್ಕೆ ಮುಂದಾಗಿವೆ. ಇದಕ್ಕೆ ಉತ್ತರವಾಗಿ ನಿರೂಪಕಿ ದಿವ್ಯಾ ವಸಂತ ಅವರು ತಮ್ಮದೇ ಯೂಟ್ಯೂಬ್ ಚಾನೆಲ್ ನಲ್ಲಿ ಮಾತ್ ಸಾಕ್ ಬೆನ್ನಹಿಂದೆ ಮಾತಾಡಬೇಡಿ ಎಂಬ ರ್ಯಪ್ ಲಿರಿಕಲ್ ಸಾಂಗ್ ಹರಿಬಿಟ್ಟಿದ್ದಾರೆ. ಈ ರ್ಯಾಪ್ ಸಾಂಗ್ ಸಾಹಿತ್ಯದಲ್ಲಿ ತಮ್ಮನ್ನ ಗೇಲಿ ಮಾಡುತ್ತಿರುವ ಟ್ರೋಲ್ ಪೇಜಸ್ ಅಡ್ಮಿನ್ ಗಳಿಗೆ ಹಿಗ್ಗಮುಗ್ಗ ಜಾಡಿಸಿದ್ದಾರೆ.

%d bloggers like this: