ಟಿವಿಎಸ್ ಕಂಪನಿಯ ಹೊಸ ಬೈಕ್ ಬಿಡುಗಡೆ, ವಾರದಲ್ಲೇ ಎಲ್ಲಾ ವಾಹನ ಮಾರಾಟ

ಭಾರತದ ಪ್ರತಿಷ್ಟಿತ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯಾಗಿರುವ ಟಿ.ವಿ.ಎಸ್ ಮೋಟರ್ ಕಂಪನಿಯು ಹೊಸ ನೂತನ ಆಕರ್ಷಕ ಬೈಕ್ ಗಳನ್ನ ಲಾಂಚ್ ಮಾಡುವ ಮೂಲಕ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಇತ್ತೀಚೆಗೆ ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಟಿವಿಎಸ್ ರೈಡರ್ 125 ಸ್ಪೋರ್ಟ್ಸ್ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಿತ್ತು. ಇದೀಗ ಹೊಸದಾಗಿ ಟಿ.ವಿ.ಎಸ್ ಅಪಾಚೆ ಆರ್ ಟಿ ಆರ್ 165 ರೇಸ್ ಪರ್ಫಾರ್ಮೆನ್ಸ್ ಬೈಕ್ ಬಿಡುಗಡೆಗೊಳಿಸಿದೆ. ಈ ಟಿವಿಎಸ್ ಅಪಾಚೆ 165 ಬೈಕ್ ಬಿಡುಗಡೆಯಾದ ಮೊದಲ ವಾರದಲ್ಲಿಯೇ ಸಂಪೂರ್ಣ ಮಾರಾಟವಾಗಿ ದಾಖಲೆ ಮಾಡಿದೆ. ಇದು ಪ್ರತಿ ಸ್ಪರ್ಧಿ ದ್ವಿಚಕ್ರ ಕಂಪನಿಗಳಾದ ಹೋಂಡಾ,ಬಜಾಜ್ ಪಲ್ಸರ್ ಅಂತಹ ಕಂಪನಿಗಳಿಗೆ ಭಾರಿ ಪೈಪೋಟಿ ನೀಡುತ್ತಿದೆ‌.

ಜಗತ್ತಿನಾದ್ಯಂತ ಟಿವಿಎಸ್ ಕಂಪನಿ ತನ್ನ ಮಾರುಕಟ್ಟೆಯನ್ನ ವಿಸ್ತರಿಸಿಕೊಳ್ಳುತ್ತಿದೆ. ಈ ಟಿ.ವಿ.ಎಸ್ ಕಂಪನಿಯ ಸ್ಕೂಟರ್ ಮತ್ತು ಬೈಕ್ ಗಳು ಕಡಿಮೆ ಬೆಲೆಯಲ್ಲಿ ದೊರೆಯುವುದರ ಜೊತೆಗೆ ಉತ್ತಮ ಮೈಲೇಜ್ ನೀಡುವಂತಹ ವಾಹನಗಳಾಗಿವೆ. ಹಾಗಾಗಿ ಟಿವಿಎಸ್ ಸ್ಕೂಟರ್ ಮತ್ತು ಬೈಕ್ ಗಳು ದೇಶಾದ್ಯಂತ ಕೋಟ್ಯಾಂತರ ಗ್ರಾಹಕರನ್ನ ಹೊಂದಿದೆ. ಇದೀಗ ಹೊಸ ಟಿ.ವಿ.ಎಸ್. ಅಪಾಚೆ ಆರ್ ಟಿ ಆರ್ 165 ಬೈಕ್ ಲಾಂಚ್ ಆಗಿದ್ದು, ಲಾಂಚ್ ಆದ ಒಂದು ವಾರದೊಳಗೆ ಸೀಮಿತವಾಗಿ ಮಾರುಕಟ್ಟೆಗೆ ಬಂದಿದ್ದ ಎಲ್ಲಾ ಬೈಕ್ ಗಳು ಮಾರಾಟವಾಗಿವೆ. ಟಿ.ವಿ.ಎಸ್. ಅಪಾಚೆ ಆರ್ ಟಿ ಆರ್ 165 ಬೈಕ್ ಗಳನ್ನು ಆರಂಭಿಕವಾಗಿ ಕೇವಲ 200 ಯುನಿಟ್ ಗಳನ್ನ ಮಾತ್ರ ಮಾರಾಟಕ್ಕಿಟ್ಟಿತ್ತು.

ಮಾರಟಕ್ಕಿಟ್ಟಿದ್ದ ಎಲ್ಲಾ ಬೈಕ್ ಗಳು ವಾರದೊಳಗೆ ಈ ಟಿವಿಎಸ್ ಬೈಕಿನ ಎಕ್ಸ್ ರೂಂ ಮೌಲ್ಯ 1.45 ಲಕ್ಷ ರೂ. ಬೆಲೆಯನ್ನೊಂದಿದೆ. ಈ ಟಿವಿಎಸ್ ಅಪಾಚೆ ಬೈಕ್ ಅತ್ಯಧಿಕ ಶಕ್ತಿಸಾಲಿ ಸಾಮರ್ಥ್ಯವನ್ನೊಂದಿದೆ. ಟಿವಿಎಸ್ ಆರ್ ಟಿ ಆರ್ 165 ರೇಸಿಂಗ್ ಪರ್ಫಾಮೆನ್ಸ್ ಬೈಕ್ 160 ಸಿ.ಸಿ. ಹೊಂದಿದ್ದು, 164.9 ಸಿಲಿಂಡರ್ ಪ್ರೇರಿತ ಫೋರ್ ವಾಲ್ಟ್ ಎಂಜಿನ್ ಹೊಂದಿದೆ. 10 k ಆರ್ ಪಿ ಎಂ ನಲ್ಲಿ 19.2.ಬಿ.ಎಚ್.ಪಿ ಮತ್ತು 8.750 ಆರ್ ಪಿ ಎಂ ನಲ್ಲಿ 14.2 ಎನ್.ಎಂ. ಟಾರ್ಕ್ ಅನ್ನು ಉತ್ಪಾದನೆ ಮಾಡುತ್ತಿದೆ. ಇನ್ನು ಈ ನೂತನ ಬೈಕ್ ನಲ್ಲಿ ವಿಶಿಷ್ಟ ಫೀಚರ್ ಗಳನ್ನೊಂದಿದ್ದು ಡಿಕಾಲ್, ಸ್ಲಿಪ್ಪರ್ ಕ್ಲಚ್, ಬ್ರೇಕ್ ಲಿವರ್ ಕ್ಲಚ್ ವನ್ನೊಂದಿದೆ. ಜೊತೆಗೆ ಎಲ್.ಇ.ಡಿ ಹೆಡ್ ಲೈಟ್ ಹೊಂದಿದ್ದು, ಬೈಕ್ ಹಿಂಭಾಗದಲ್ಲಿ ರೇಡಿಯಲ್ ಟೈರ್ , ರೆಡ್ ಮಿಕ್ಸ್ಡ್ ಚಕ್ರಗಳನ್ನೊಂದಿದೆ. 240 ಎಂ.ಎಂ.ಡಿಸ್ಕ್ ಬ್ರೇಕ್ , ಗೂಗಲ್ ಮ್ಯಾಪ್ ವನ್ನೊಂದಿದೆ.

%d bloggers like this: