ಮನುಷ್ಯರಿಗೆ ಮಾನಸಿಕ, ಆಂತರಿಕ ಆರೋಗ್ಯ ಎಷ್ಟು ಮುಖ್ಯವಾಗಿರುತ್ತದೋ ಅಷ್ಟೇ ಬಾಹ್ಯ ಸೌಂದರ್ಯ ಕೂಡ ಪ್ರಮುಖವಾಗಿರುತ್ತದೆ. ಆಯಾಯಾ ಕಾಲಾನುಕ್ರಮದಲ್ಲಿ ಚರ್ಮಕ್ಕೆ ಕೆಲವು ತೊಂದರೆಗಳಾಗುವುದು ಸಾಮಾನ್ಯವಾಗಿರುತ್ತದೆ. ಅದರಲ್ಲೂ ಚಳಿಗಾಲದಲ್ಲಂತೂ ಮುಖ, ತುಟಿ ಕೈ ಕಾಲುಗಳ ಚರ್ಮ ಹೊಡೆಯುವುದು ಸರ್ವೇ ಸಾಮಾನ್ಯವಾಗಿಬಿಟ್ಟಿರುತ್ತದೆ. ಇದರಿಂದ ಅನೇಕರು ಬೇಜಾರಾಗುವುದು ಖಂಡಿತಾ. ಇಂತಹ ಚರ್ಮದ ಸಣ್ಣ ಪುಟ್ಟ ಸಮಸ್ಯೆಗಳಿಗೆ ಮನೆಯಲ್ಲಿಯೇ ಇರುವಂತಹ ಕೆಲವು ಪಧಾರ್ಥಗಳನ್ನ ಬಳಸಿಕೊಂಡು ಚರ್ಮದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದಾಗಿರುತ್ತದೆ. ಇನ್ನು ಈ ಚರ್ಮದ ಸಮಸ್ಯೆಗಳ ಮುಕ್ತಿಗಾಗಿ ಮನೆಯಲ್ಲಿರುವ ಪಧಾರ್ಥಗಳನ್ನ ತಿಳಿಯುವುದಾದರೆ ಮೊದಲಿಗೆ ಕರಿಬೇವು ಮತ್ತು ನಿಂಬೆ.

ನಿಂಬೆಹಣ್ಣಿನಲ್ಲಿ ವಿಟಿಮಿನ್ ಸಿ ಅಂಶ ಅಧಿಕವಾಗಿರುವುದರಿಂದ ಇದರಲ್ಲಿ ಆಂಟಿ ಆಕ್ಸಿಡೆಂಟ್ ಗುಣವಿರುತ್ತದೆ. ಕರಿಬೇವಿನ ಎಲೆಗಳನ್ನ ನುಣುಪಾಗಿ ರುಬ್ಬಿಕೊಂಡು ಅದನ್ನ ನಿಂಬೆ ಹಣ್ಣಿನ ರಸದೊಂದಿಗೆ ಮಿಶ್ರಣಗೊಳಿಸಿಕೊಂಡು ಮುಖಕ್ಕೆ ಹಚ್ಚಿಕೊಂಡರೆ ಮುಖ ಸುಕ್ಕು ಗಟ್ಟದಂತೆ ರಕ್ಷಣೆ ನೀಡುತ್ತದೆ. ಇನ್ನು ಮುಖದಲ್ಲಿ ಮೂಡುವಂತಹ ಮೊಡವೆಗಳ ನಿವಾರಣೆಗಾಗಿ ಇದೇ ಕರಿ ಬೇವಿನ ಎಲೆಗಳೊಂದಿಗೆ ರೋಸ್ ವಾಟರ್ ಮಿಶ್ರಣ ಮಾಡಿಕೊಂಡು ರಾತ್ರಿಯ ಸಮಯದಲ್ಲಿ ಮುಖಕ್ಕೆ ಹಚ್ಚಿಕೊಂಡು ಬೆಳಿಗ್ಗೆದ್ದು ಮುಖ ತೊಳೆದರೆ ಉತ್ತಮ ಫಲಿತಾಂಶ ಕಾಣಬಹುದಾಗಿರುತ್ತದೆ. ಇನ್ನ ಪೂಜೆಯ ಸಂಧರ್ಭದಲ್ಲಿ ಮಹತ್ವ ಪಡೆದುಕೊಂಡಿರುವ ಅರಿಶಿನ ಕೇವಲ ಪೂಜೆಗೆ ಮಾತ್ರ ಅಲ್ಲದೆ ರೋಗನಿರೋಧಕ ಶಕ್ತಿಯನ್ನೊಂದಿದೆ.

ಅರಿಶಿನದಲ್ಲಿ ಆಂಟಿ ಬ್ಯಾಕ್ಟಿರಿಯಲ್ ಗುಣವಿದ್ದು ಇದು ಮೊಡವೆಗಳನ್ನ ನಿವಾರಣೆ ಮಾಡಿ ಮುಖ ಕಾಂತಿಯುತವಾಗಿ ಹೊಳೆಯುವಂತೆ ಮಾಡುತ್ತದೆ. ಇನ್ನು ಮನುಷ್ಯನಿಗೆ ಬಹು ಮುಖ್ಯವಾಗಿ ಬೇಕಾಗಿರುವ ಆಹಾರಗಳಲ್ಲಿ ಹಾಲು ಕೂಡ ಒಂದಾಗಿರುತ್ತದೆ. ಹಾಲಿನಿಂದಾಗಿ ಮುಖದ ಮೇಲಾಗುವ ಸಣ್ಣ ಪುಟ್ಟ ಕಲೆಗಳನ್ನ ಹೋಗಲಾಡಿಸಬಹುದಾಗಿರುತ್ತದೆ. ಹೌದು ಹಾಲನ್ನು ಕೆನೆ ಬರುವವರೆಗೆ ಚೆನ್ನಾಗಿ ಕುದಿಸಿ ತದನಂತರ ಆ ಹಾಲು ಉಗುರು ಬೆಚ್ಚಾಗಾದಾಗ ಅದರಿಂದ ಮುಖವನ್ನ ತೊಳೆದರೆ ಮುಖದಲ್ಲಿ ಕಲೆಗಳು ಮಾಯಾವಾಗಿ ಹೊಳಪನ್ನ ಕಾಪಾಡಿಕೊಂಡು ಚರ್ಮದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಲಭಿಸುತ್ತದೆ.