ತ್ವಚೆಯ ಹೊಳಪಿಗೆ ಕೇವಲ ಒಂದು ಪಪ್ಪಾಯ ಹಣ್ಣು ಸಾಕು

ಆಯುರ್ವೇದ ತಿಳಿದವರು ಆಹಾರದಲ್ಲಿ ಆರೋಗ್ಯ ಎಂದು ಹೇಳುತ್ತಾರೆ. ಹೌದು ನಮ್ಮ ಆರೋಗ್ಯ ನಮ್ಮ ಆಹಾರದ ಮೇಲೆ ಅವಲಂಬನೆ ಆಗಿದೆ. ಇಂಗ್ಲೀಷ್ ನಲ್ಲಿ ವಾಟ್ ಗೊಸ್ ಇನ್ಸೈಡ್ ವಿಲ್ ಶೋ ಔಟ್ಸೈಡ್ ಎನ್ನುವ ಹಾಗೆ ನಮ್ಮ ಆಹಾರ ನಮ್ಮ ತ್ವಚೆಯ ಮೇಲೂ ಪರಿಣಾಮ ಬೀರುತ್ತದೆ. ಉತ್ತಮ ಆರೋಗ್ಯ, ಉತ್ತಮ ತ್ವಚೆ, ಉತ್ತಮ ಹೊಳಪು ಯಾರಿಗೆ ತಾನೇ ಬೇಡ ಹೇಳಿ. ಆದರೆ ಇದಕ್ಕಾಗಿ ಯಾವುದೇ ಕೆಮಿಕಲ್ ಪ್ರಾಡಕ್ಟ್ ಗಳನ್ನು ಬಳಸದೆ ನಮಗೆ ಗೊತ್ತಿರುವ ಹಣ್ಣು, ತರಕಾರಿಗಳ ಪ್ರಯೋಜನಗಳನ್ನು ತಿಳಿದು, ನಮ್ಮ ದೇಹದ ಸಮಸ್ಯೆಗಳಿಗೆ ತಕ್ಕಂತೆ ಅವುಗಳನ್ನು ಬಳಸುವುದು ಉತ್ತಮ. ಇಂದು ನಾವು ಪಪಾಯ ಹಣ್ಣಿನ ವಿಶೇಷತೆ ಬಗ್ಗೆ ತಿಳಿಯೋಣ. ಪಪಾಯ ಹಣ್ಣು ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯಕ್ಕೂ ಕೂಡ ಒಳ್ಳೆಯದು.

ಡೆಂಗ್ಯೂ ಜ್ವರದಿಂದ ಬಳಲುತ್ತಿರುವವರು ಪಪಾಯ ಹಣ್ಣಿನ ಎಲೆಗಳ ರಸವನ್ನು ಕುಡಿಯುವುದರಿಂದ ಶೀಘ್ರವಾಗಿ ಗುಣಮುಖರಾಗುತ್ತಾರೆ. ಮಾರುಕಟ್ಟೆಯಲ್ಲಿ ದೊರೆಯುವ ಸೌಂದರ್ಯವರ್ಧಕಗಳ ಬದಲಾಗಿ ಹಣ್ಣುಗಳನ್ನು ತ್ವಚೆಗಳಿಗೆ ಉಪಯೋಗಿಸುವುದು ಒಳ್ಳೆಯದು. ಹಸಿ ಪಪ್ಪಾಯ ಹಣ್ಣಿನ ರಸವನ್ನು ತೆಗೆದು ರಸವನ್ನು ಹತ್ತಿಯ ಸಹಾಯದಿಂದ ಮೊಡವೆಗಳಿಗೆ ಹಚ್ಚಿದರೆ ಮೊಡವೆಗಳು ದೂರಾಗುತ್ತವೆ. ಹಸಿ ಪಪ್ಪಾಯ ಹಣ್ಣಿನ ರಸವು ಚರ್ಮದ ಮೇಲಿರುವ ಬಿರುಕು ಮತ್ತು ಕಲೆಗಳನ್ನು ಹೋಗಲಾಡಿಸುತ್ತದೆ. ಹಲವರಿಗೆ ಮುಖದ ಮೇಲೆ ಕೂದಲುಗಳು ಇರುತ್ತವೆ. ಕೂದಲುಗಳ ಮೇಲೆ ಫೇಸ್ ಪ್ಯಾಕ್ ರೀತಿ ಪಪ್ಪಾಯ ಹಣ್ಣಿನ ರಸವನ್ನು ಬಳಸುವುದರಿಂದ, ಪಪ್ಪಾಯದಲ್ಲಿರುವ ಕಿಣ್ವವು ಕೂದಲುಗಳ ಕಿರುಚೀಲವನ್ನು ದುರ್ಬಲಗೊಳಿಸುತ್ತದೆ ಇದರಿಂದ ಮುಖದ ಮೇಲಿರುವ ಕೂದಲನ್ನು ಹೋಗಲಾಡಿಸಬಹುದು.

ಹಸಿ ಪಪ್ಪಾಯ ಹಣ್ಣಿನ ಪೇಸ್ಟ್ ಗೆ ಕಾಲು ಚಮಚ ಅರಿಶಿನ ಬೆರೆಸಿ ಮಿಶ್ರಣ ತಯಾರು ಮಾಡಿಕೊಂಡು ತ್ವಚೆಯ ಮೇಲೆ 30 ನಿಮಿಷಗಳ ಕಾಲ ಬಿಟ್ಟು ತೊಳೆದುಕೊಳ್ಳುವುದರಿಂದ ಮುಖದ ಸುಕ್ಕನ್ನು ಹೋಗಲಾಡಿಸಬಹುದು. ಏಕೆಂದರೆ ಪಪಾಯ ಹಣ್ಣು ಅಂಟಿ ಎಜಿಂಗ್ ಆಗಿ ಕಾರ್ಯನಿರ್ವಹಿಸುತ್ತದೆ. ಪಪ್ಪಾಯ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ಸಿ ಇದೆ. ಹಸಿ ಪಪಾಯ ಹಣ್ಣಿನ ಪೇಸ್ಟ್ ಗೆ1 ಚಮಚ ಹಾಲು ಬೆರೆಸಿ ತ್ವಚೆಯ ಮೇಲೆ ಹಚ್ಚಿ 20 ನಿಮಿಷದ ನಂತರ ತೊಳೆಯಿರಿ ಹೀಗೆ ವಾರಕ್ಕೆ ಎರಡು ಬಾರಿ ಪುನರಾವರ್ತಿಸುವುದರಿಂದ ತ್ವಚೆಯು ಯಾವಾಗಲೂ ಯೌವನವಾಗಿರುತ್ತದೆ. ಅಷ್ಟೇ ಅಲ್ಲದೇ ಚರ್ಮಕ್ಕೆ ಹೊಳಪು ಬರುತ್ತದೆ. ಸೂರ್ಯನ ಕಿರಣಗಳಿಂದ ಟ್ಯಾನ್ ಆಗಿದ್ದರೆ, ಪಪಾಯ ಪೇಸ್ಟ್ ಗೆ 5ರಿಂದ 6ಹನಿ ನಿಂಬೆ ರಸ ಹಿಂಡಿ ಮುಖಕ್ಕೆ ಅಪ್ಲೈ ಮಾಡಿ 30 ನಿಮಿಷದ ನಂತರ ತೊಳೆಯಿರಿ.

%d bloggers like this: