ಟ್ವಿಟ್ಟರ್ ಕಂಪನಿಯ ಹೊಸ ಸಿಇಓ ಆಗಿ ಆಯ್ಕೆಯಾದ ಭಾರತೀಯ, ನೂತನ ಸಿಇಓ ವರ್ಷದ ಸಂಬಳ ಎಷ್ಟು ಗೊತ್ತೇ

ಸಾಮಾಜಿಕ ಜಾಲತಾಣದ ದಿಗ್ಗಜ ಸಂಸ್ಥೆಗಳಲ್ಲಿ ಒಂದಾದ ಟ್ವಿಟರ್ ಸಂಸ್ಥೆಯ ಸಿ.ಇ.ಓ ಆಗಿ ಭಾರತೀಯ ಮೂಲದವರಾದ ಪರಾಗ್ ಅಗರ್ವಾಲ್ ಆಯ್ಕೆಯಾಗಿದ್ದಾರೆ. ಇದು ಭಾರತೀಯರಿಗೆ ಹೆಮ್ಮೆಯ ವಿಷಯವೇ ಆಗಿದೆ. ಟ್ವಿಟರ್ ಸಂಸ್ಥೆಯ ನೂತನ ಸಿಇಓ ಆಗಿ ನೇಮಕವಾಗಿರುವ ಪರಾಗ್ ಅವರಿಗೆ ನೀಡುವ ಸಂಭಾವನೆ ಕೇಳಿದರೆ ನಿಜಕ್ಕೂ ಕೂಡ ಅಚ್ಚರಿ ಆಗುತ್ತದೆ. ಅದಕ್ಕೂ ಮುನ್ನ ಪರಾಗ್ ಅಗರ್ವಾಲ್ ಅವರ ಬಗ್ಗೆ ತಿಳಿಯುವುದಾದರೆ ಪರಾಗ್ ಅಗರ್ವಾಲ್ ಅವರು ರಾಜಸ್ತಾನದ ಅಜ್ಮಿರ್ ನಲ್ಲಿ 1984 ರಲ್ಲಿ ಜನಿಸಿರುತ್ತಾರೆ. ಮುಂಬೈನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಿ.ಟೆಕ್ ಪದವಿ ಪಡೆಯುವುದರ ಜೊತೆಗೆ ಸ್ಟ್ಯಾನ್ ಫೋರ್ಡ್ ಯೂನಿವರ್ಸಿಟಿಯಲ್ಲಿ ಎಂ.ಎಸ್ ಪಿ.ಎಚ್ ಡಿ ಅಧ್ಯಾಯನ ಮಾಡಿದ್ದಾರೆ. ಪರಾಗ್ ಅಗರ್ವಾಲ್ ಅವರು ಮೈಕ್ರೋಸಾಫ್ಟ್ ರಿಸರ್ಚ್ ಮತ್ತು ಯಾಹೂ ಡಾಟ್ ಕಾಮ್ ನಲ್ಲಿ ಟೀಮ್ ಲೀಡರ್ ಆಗಿ ಕಾರ್ಯ ನಿರ್ವಹಿಸಿರುತ್ತಾರೆ.

ತದ ನಂತರ 2011ರಲ್ಲಿ ಟ್ವಿಟರ್ ಸಂಸ್ಥೆಯಲ್ಲಿ ಇಂಜಿನಿಯರ್ ಹುದ್ದೆ ಪಡೆಯುತ್ತಾರೆ. ಟ್ವಟರ್ ನಲ್ಲಿ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಆಡಮ್ ಮಾಸಿಂಗರ್ ಅವರ ಸೇವೆಯ ನಂತರ ಇವರ ಸ್ಥಾನಕ್ಕೆ ಪರಾಗ್ ಅಗರ್ವಾಲ್ ಅವರನ್ನ ಟ್ವಿಟರ್ ಸಂಸ್ದೆ ಆಯ್ಕೆ ಮಾಡುತ್ತದೆ. ಹೀಗೆ ತಮ್ಮ ಕಾರ್ಯ ವೈಖರಿಯಿಂದ ಪರಾಗ್ ಅಗರ್ವಾಲ್ ಅವರು ಟ್ವಿಟರ್ ಸಂಸ್ಥೆಯಲ್ಲಿ ಉತ್ತಮ ಹೆಸರು ಗಳಿಸುತ್ತಾರೆ. ಇದಾದ ಬಳಿಕ ಇತ್ತೀಚೆಗೆ ಕಳೆದ ನವೆಂಬರ್ 29ರಂದು ಟ್ವಿಟರ್ ಸಂಸ್ಥೆಯ ಸಿ.ಇ.ಓ ಅಗಿ ಕಾರ್ಯ ನಿರ್ವಹಿಸುತ್ತಿದ್ದ ಜಾಕ್ ಡೋರ್ಸೆ ಅವರು ರಾಜಿನಾಮೆ ನೀಡಿದ ಕಾರಣ ಇದೀಗ ಟ್ವಿಟರ್ ಸಂಸ್ಥೆಯ ಸಿಇಓ ಆಗಿ ರಾಜಸ್ತಾನದ ಪರಾಗ್ ಅಗರ್ವಾಲ್ ಅವರು ಆಯ್ಕೆ ಆಗಿದ್ದಾರೆ. ಟ್ವಿಟರ್ನ ನೂತನ ಸಿಇಓ ಆಗಿರುವ ಪರಾಗ್ ಅಗರ್ವಾಲ್ ಅವರು ವಾರ್ಷಿಕವಾಗಿ ಒಂದು ಬಿಲಿಯನ್ ಡಾಲರ್ ಸಂಬಳ ಪಡೆಯುತ್ತಿದ್ದಾರಂತೆ.

ಭಾರತೀಯ ರುಪಾಯಿ ಮೌಲ್ಯಕ್ಕೆ ಹೋಲಿಸಿದರೆ ಪರಾಗ್ ಅಗರ್ವಾಲ್ ಅವರ ಸಂಬಳ ಬರೋಬ್ಬರಿ 7.5 ಕೋಟಿ ರೂಗಳಷ್ಟು ಎಂದು ತಿಳಿದು ಬಂದಿದೆ. ಪರಾಗ್ ಅಗರ್ವಾಲ್ ಅವರು ಟ್ವಿಟರ್ ಸಿಇಓ ಆಗಿ ನೇಮಕಗೊಂಡ ಕಾರಣ ಅವರ ಸಾಧನೆ ಮೆಚ್ಚಿ ಟೆಸ್ಲಾ ಕಂಪನಿಯ ಮುಖ್ಯಸ್ಥ ಎಲಾನ್ ಮಸ್ಕ್ ಅವರು ಭಾರತದ ಪ್ರತಿಭಾವಂತರು ಅಮೆರಿಕಾ ದೇಶಕ್ಕೆ ಅಪಾರ ಕೊಡುಗೆ ನೀಡುತ್ತಿದ್ದಾರೆ ಎಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸದ್ಯಕ್ಕೆ ಜಗತ್ತಿನ ದಿಗ್ಗಜ ಸಂಸ್ಥೆಗಳಾದ ಗೂಗಲ್ ಸಿಇಓ ಆಗಿರುವ ತಮಿಳುನಾಡಿನ ಸುಂದರ್ ಪಿಚ್ಚೈ, ಮೈಕ್ರೋ ಸಾಫ್ಟ್ ಸಿಇಓ ಆಗಿರುವ ಆಂಧ್ರಪ್ರದೇಶದ ಸತ್ಯನಾದೆಲ್ಲಾ ಸೇರಿದಂತೆ ಅನೇಕ ಭಾರತೀಯರು ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡುತ್ತಿದ್ದಾರೆ. ಇವರ ಸಾಲಿಗೆ ಇದೀಗ ರಾಜಸ್ತಾನದ ಪರಾಗ್ ಅಗರ್ವಾಲ್ ಅವರು ಟ್ವಟರ್ ಸಂಸ್ದೆಯ ಸಿಇಓ ಆಗುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ.

%d bloggers like this: