ಸಾಮಾನ್ಯವಾಗಿ ಎಲ್ಲರು ಸಹ ಉಂಗುರವನ್ನು ಧರಿಸಿರುತ್ತಾರೆ. ಆದರೆ ಈ ಉಂಗುರವು ನಿಮ್ಮ ಬದುಕಿನ ಆಗು ಹೋಗುಗಳಿಗೆ ಸಂಬಂಧ ಪಡುವಂತಹ ಸಂಧರ್ಭ ಪರಿಣಾಮಗಳಿಗೆ ಪರೋಕ್ಷ ಪ್ರಭಾವ ಬೀರುತ್ತದೆ. ಅವರವರ ಇಚ್ಚೆ ಅನುಸಾರ ಉಂಗುರವನ್ನು ಧರಿಸುವುದುಂಟು ಅಥವಾ ಅವರ ರಾಶಿಗೆ ಹೊಂದುವಂತಹ ಉಂಗುರವನ್ನು ಧರಿಸುತ್ತಾರೆ. ಈ ಉಂಗುರಗಳಲ್ಲಿ ಹರಲವಾರು ರೀತಿಯಲ್ಲಿ ಬೇರ್ಪಡುತ್ತವೆ. ಅವುಗಳಲ್ಲಿ ಪಗಡದ ಉಂಗುರ, ವಜ್ರ ವೈಡುರ್ಯ, ಮುತ್ತಿನ, ರತ್ನದ ಕೆಂಪುವಿನ ಉಂಗುರು ಈ ರೀತಿಯಾದ ಉಂಗುರುಗಳನ್ನ ಸಮಯ ಸಂಧರ್ಭಾನುಸಾರದ ಮೇಲೆ ಧರಿಸುವುದುಂಟು ಉದಾಹರಣೆಗೆ ಮದುವೆಯಲ್ಲಿ ಧರಿಸುವ, ನಿಶ್ಚಿತಾರ್ಥದಲ್ಲಿ ವಧು ವರರಿಂದ ಬದಲಾಗುವ ಉಂಗುರ ಹೀಗೆ ಬೇರೆ ಬೇರೆ ಸಂಧರ್ಭ ಇರುತ್ತದೆ.

ಇದರಿಂದ ನಿಮ್ಮಲ್ಲಿ ಸಕರಾತ್ಮವಾದ ವ್ಯಕ್ತಿತ್ವ ಉಂಟಾಗಿ ನಿಮ್ಮ ಆತ್ಮಬಲ ವೃದ್ದಿಯಾಗುತ್ತದೆ. ಹೆಚ್ಚಾಗಿ ಕೆಲವರು ಉಂಗುರವನ್ನು ಬಲಗೈ ಕಿರು ಬೆರಳಿಗೆ ಬೆಳ್ಳಿ ಉಂಗುರವನ್ನು ಧರಿಸುತ್ತಾರೆ. ಇದಕ್ಕೆ ಕಾರಣವಿದೆ ಬಲಗೈ ಕಿರು ಬೆರಳಿಗೆ ಬೆಳ್ಳಿ ಉಂಗುರ ಧರಿಸುವುದರಿಂದ ಜೀವನದಲ್ಲಿ ಆರ್ಥಿಕ ಲಾಭ, ಸುಖ ಸಂತೋಷ, ನೆಮ್ಮದಿ ದೊರೆಯುತ್ತದೆ. ಇನ್ನು ಬೆಳ್ಳಿಯು ವಿಶೇಷವಾಗಿ ಗುರು ಮತ್ತು ಚಂದ್ರ ಗ್ರಹದ ಜೊತೆಗೆ ಪ್ರತ್ಯೇಕವಾದ ಸಂಬಂಧವನ್ನು ಹೊಂದಿದೆ. ಬೆಳ್ಳಿ ಉಂಗುರವನ್ನು ಧರಿಸುವುದರಿಂದ ದೇಹದಲ್ಲಿ ನೀರು ಮತ್ತು ಕಫವನ್ನು ಸಮತೋಲನದಲ್ಲಿಡಲು ಸಹಾಯ ವಾಗುತ್ತದೆ. ಶಾಸ್ತ್ರದ ಪ್ರಕಾರ ತಿಳಿಯುವುದಾದರೆ ಯಾರು ಈ ಬೆಳ್ಳಿ ಉಂಗುರವನ್ನು ಹಾಕುತ್ತಾರೋ ಅವರಿಗೆ ಅದೃಷ್ಟ ಸಹ ಒದಗಿ ಬರುತ್ತದೆ.



ಜೊತೆಗೆ ಅತ್ಯಂತ ವೇಗವಾಗಿ ಜೀವನದಲ್ಲಿ ಅಭಿವೃದ್ದಿ ಹೊಂದುತ್ತಾರೆ ಎಂದು ಹಿರಿಯರು ಹೇಳುತ್ತಾರೆ. ಬೆಳ್ಳಿಯ ಉಂಗುರವನ್ನು ಪುರುಷರು, ಮಹಿಳೆಯರು ಸಾಮಾನ್ಯವಾಗಿ ಧರಿಸುತ್ತಾರೆ ಇದರಿಂದ ಆಗುವ ಪ್ರಯೋಜನ ಏನು ಎಂಬುದಕ್ಕೆ ಬೆಳ್ಳಿ ಕೇವಲ ಮಾನಸಿಕವಾಗಿ ಪ್ರಭಾವ ಬೀರುವುದಲ್ಲದೆ ಶಾರೀರಿಕವಾಗಿಯೂ ಸಹ ಪರಿಣಾಮ ಬೀರುತ್ತದೆ. ಬೆಳ್ಳಿಲೋಹವು ದೇಹದಲ್ಲಿರುವ ವಿಷಮಯುಕ್ತ ಅಂಶಗಳನ್ನು ದೂರ ಮಾಡುತ್ತದೆ. ಮಾತಿನಲ್ಲಿ ತೊದಲು ಸಮಸ್ಯೆ ಇರುವವರಿಗೆ ಪರಿಹಾರವಾಗಿ ಈ ಬೆಳ್ಳಿ ಲೋಹವು ಕೆಲಸ ಮಾಡುತ್ತದೆ. ಇನ್ನು ಜೀವನದಲ್ಲಿ ಅಭಿವೃದ್ದಿ ಪಥ ಇದರ ಮೂಲಕ ಪರಿಚಯವಾಗುತ್ತದೆ.



ಜೊತೆಗೆ ನಿಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಇದು ಸಹಾಯ ಮಾಡುತ್ತದೆ. ಮಾನಸಿಕ ಪ್ರಶಾಂತತೆಯೊಂದಿಗೆ ನಿಮ್ಮ ಜೀವನ ಸುಗಮವಾಗಿ ಸಾಗುತ್ತದೆ. ಬೆಳ್ಳಿಯ ಉಂಗುರವನ್ನು ಧರಿಸುವುದಕ್ಕೆ ಒಂದು ನಿಯಮವಿದೆ. ಬೆಳ್ಳಿಯನ್ನು ಏಕಾಏಕಿ ಬೆರಳಿಗೆ ಹಾಕಿಕೊಳ್ಳಬಾರದು ಅದನ್ನು ಒಂದು ದಿನ ಪೂರ್ತಿ ಗಂಧದ ನೀರಿನಲ್ಲಿ ನೆನೆಸಿಡಬೇಕು ತದನಂತರದಲ್ಲಿ ಆ ಬೆಳ್ಳಿಯ ಉಂಗುರವನ್ನು ಧರಿಸಿದರೆ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತದೆ ಎಂದು ಜ್ಯೋತಿಷ್ಯಶಾಸ್ತ್ರ ತಿಳಿಸುತ್ತದೆ.