ಉಪೇಂದ್ರ ಅವರ ಅಣ್ಣನ ಮಗನ‌ ಹೊಸ ಚಿತ್ರಕ್ಕೆ ಚಂದನ್ ಶೆಟ್ಟಿ ಅವರ ಸಂಗೀತ

ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧಿಂದ್ರ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗೆ ನಿರಂಜನ್ ಸುಧಿಂದ್ರ ಅಭಿನಯದ ಹಂಟರ್ ಸಿನಿಮಾದ ಮೊದಲ ಟೀಸರ್ ಬಿಡುಗಡೆ ಆಗಿದೆ. ಹೌದು ಇವರ ಮೊದಲನೇ ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. ವಿಶೇಷವೆಂದರೆ ನಿರಂಜನ್ ಸುಧೀಂದ್ರ ಅವರು ಆಗಲೇ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯಕ್ಕೆ ನಿರಂಜನ್ ಅವರು ಸ್ಯಾಂಡಲ್ ವುಡ್ ನಲ್ಲಿ ಫುಲ್ ಬಿಸಿಯಾಗಿರುವ ನಟ ಎನ್ನಬಹುದು. ಕನ್ನಡದ ಯಾವುದೇ ನಟನಿಗೂ ಆರಂಭದಲ್ಲಿ ಇಂಥದ್ದೊಂದು ಅವಕಾಶ ಸಿಕ್ಕಿಲ್ಲ ಎಂದು ಗಾಂಧಿನಗರದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಇವರ ನಟನೆಯ ಯಾವುದೇ ಒಂದು ಚಿತ್ರ ಬಿಡುಗಡೆಯಾಗಿದ್ದರೂ ಕೂಡ, ಬ್ಯಾಕ್ ಟು ಬ್ಯಾಕ್ ಆಫರ್ ಗಳನ್ನು ಹೊಂದಲು.

ನಿರಂಜನ್ ಅವರ ಪರ್ಸನಾಲಿಟಿ, ಹೈಟ್, ಹಾಗೂ ನಟನೆಯೇ ಕಾರಣ ಎಂದು ಕನ್ನಡದ ನಿರ್ಮಾಪಕರು ಅವಕಾಶಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ನಿರಂಜನ್ ಅಭಿನಯದ ಹಂಟರ್ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಅವರು ಅಣ್ಣನ ಮಗನ ಸಿನಿಮಾದ ಫಸ್ಟ್ ಲುಕ್ ಹಾಗೂ ಟೈಟಲ್ ರಿಲೀಸ್ ಮಾಡಿ ಶುಭ ಹಾರೈಸಿದರು. ಹಂಟರ್ ಸಿನಿಮಾದ ಕಾರ್ಯಕ್ರಮದಲ್ಲಿ ನಿರಂಜನ್ ಅವರ ಬಗ್ಗೆ ಮಾತನಾಡಿದ ಉಪೇಂದ್ರ ಅವರು ಒಳ್ಳೆಯ ನಟನಾಗಲು ನಿರಂಜನ್ ತುಂಬಾ ಶ್ರಮ ಪಡುತ್ತಿದ್ದಾನೆ. ಒಳ್ಳೆಯದಾಗಲಿ ಎಂದು ನಿರಂಜನ್ ಅವರ ಬಗ್ಗೆ ಉಪೇಂದ್ರ ಮಾತನಾಡಿದರು. ಇನ್ನು ಈ ಸಂದರ್ಭದಲ್ಲಿ ನಿರಂಜನ್ ಅವರು ಕೂಡ ಹಂಟರ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ.

ನಾನು ನಾಯಕನಾಗಿ ನಟಿಸಿರುವ ಯಾವುದೇ ಸಿನಿಮಾಗಳು ಇನ್ನೂ ತೆರೆಕಂಡಿಲ್ಲ. ನಿರ್ದೇಶಕ ಕೃಷ್ಣ ಅವರ ಕೆಲಸದ ಬಗ್ಗೆ ಎಷ್ಟು ಹೇಳಿದರೂ ಸಾಲದು. ಇನ್ನೂ ಚಂದನ್ ಶೆಟ್ಟಿ ಅವರು ಸಂಗೀತ ನೀಡುತ್ತಿರುವುದರಿಂದ ಎಲ್ಲಾ ಹಾಡುಗಳು ತುಂಬಾನೇ ಬ್ಯೂಟಿಫುಲ್ ಆಗಿ ಮೂಡಿಬಂದಿದೆ. ನಾನು ಈ ಚಿತ್ರದಲ್ಲಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ನಿರಂಜನ್ ಮಾತನಾಡಿದರು. ಹಂಟರ್ ಸಿನಿಮಾದಲ್ಲಿ ಪ್ರಕಾಶ್ ರಾಜ್, ನಾಜರ್, ಸುಮನ್, ಸಾಧುಕೋಕಿಲಾ ಮುಂತಾದ ದೊಡ್ಡ ದೊಡ್ಡ ಕಲಾವಿದರು ನಟಿಸುತ್ತಿದ್ದಾರೆ. ವಿನಯ್ ಕೃಷ್ಣ ಅವರ ನಿರ್ದೇಶನ ಈ ಚಿತ್ರಕ್ಕಿದೆ. ಜಯಂತ್ ಕಾಯ್ಕಿಣಿ, ವಿ ನಾಗೇಂದ್ರಪ್ರಸಾದ್, ಚೇತನ್ ಕುಮಾರ್ ಹಾಗೂ ಚಂದನ್ ಶೆಟ್ಟಿ ಒಂದೊಂದು ಹಾಡುಗಳನ್ನು ಬರೆದಿದ್ದಾರೆ.

ಇನ್ನು ಹಂಟರ್ ಮೋಷನ್ ಪೋಸ್ಟರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡದ ರಾಪರ್ ಚಂದನ್ ಶೆಟ್ಟಿ, ನಟ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಅವರು ಯಾವಾಗಲೂ ಯುವಕರು ಮುಂದೆ ಬರಲಿ ಎಂದು ಸಪೋರ್ಟ್ ಮಾಡುತ್ತಾರೆ. ಇವರು ನಮ್ಮ ಮನೆಗೆ ಬಂದಾಗ ಕುಳಿತುಕೊಳ್ಳುಲು ಒಂದು ಚೇರ್ ಸಹ ಇರಲಿಲ್ಲ. ನಿರಂಜನ್ ಅವರು ತುಂಬಾ ಡೆಡಿಕೇಟೆಡ್ ಆಕ್ಟರ್. ಇವರಿಗೆ ಒಳ್ಳೆಯ ಫ್ಯೂಚರ್ ಇದೆ. ನಾನು ಹಾಡು ಹಾಡಬೇಕಾದರೆ ಸ್ಟುಡಿಯೋದಲ್ಲಿ ಕಿರುಚಿ ಕಿರುಚಿ ಹಾಡುತ್ತೇನೆ. ನಿರಂಜನ್ ಸ್ಟುಡಿಯೋಗೆ ಬಂದರೆ ಇನ್ನೂ ಜೋರಾಗಿ ಹಾಡುತ್ತೇನೆ. ಹಂಟರ್ ಸಿನಿಮಾಗೆ ಒಳ್ಳೆ ಸಾಂಗ್ಸ್ ಕೊಡುತ್ತೇನೆ. ಆಲ್ ದಿ ಬೆಸ್ಟ್ ಫಾರ್ ಹಂಟರ್ ಟೀಮ್. ನನಗೆ ತುಂಬಾ ಖುಷಿ ಆಯ್ತು ಎಂದು ಚಂದನ್ ಶೆಟ್ಟಿ ಎಲ್ಲರಿಗೂ ಧನ್ಯವಾದ ತಿಳಿಸಿದರು.

%d bloggers like this: